ಮಾಸ್ಕ್‌ ಧರಿಸುವಂತೆ ಸೂಚಿಸಿದ ಮಹಿಳಾ ಸಹೋದ್ಯೋಗಿ ಮೇಲೆ ರಾಡ್‌ನಿಂದ ಹಲ್ಲೆ; ಆಂಧ್ರದಲ್ಲಿ ವ್ಯಕ್ತಿ ಅರೆಸ್ಟ್‌

ಆರೋಪಿ ಭಾಸ್ಕರ್ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ 43 ವರ್ಷದ ಮಹಿಳೆ ವಿರುದ್ಧ ಮೊದಲಿನಿಂದಲೂ ಹಗೆತನ ಸಾಧಿಸುತ್ತಿದ್ದರು. ಶನಿವಾರ, ಭಾಸ್ಕರ್ ಹಿರಿಯ ಅಕೌಂಟೆಂಟ್ ನರಸಿಂಹ ರಾವ್ ಅವರೊಂದಿಗೆ ಮಾಸ್ಕ್ ಧರಿಸದೆ ಮಾತನಾಡುತ್ತಿದ್ದಾಗ, ಕೋವಿಡ್ 19 ಪರಿಸ್ಥಿತಿಯಿಂದಾಗಿ ಮಹಿಳೆಯು ಮಾಸ್ಕ್ ಧರಿಸಲು ಸೂಚಿಸಿದ್ದಾರೆ. ಇಷ್ಟಕ್ಕೆ ಆತ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ.

MAshok Kumar | news18-kannada
Updated:June 30, 2020, 7:46 PM IST
ಮಾಸ್ಕ್‌ ಧರಿಸುವಂತೆ ಸೂಚಿಸಿದ ಮಹಿಳಾ ಸಹೋದ್ಯೋಗಿ ಮೇಲೆ ರಾಡ್‌ನಿಂದ ಹಲ್ಲೆ; ಆಂಧ್ರದಲ್ಲಿ ವ್ಯಕ್ತಿ ಅರೆಸ್ಟ್‌
ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿ.
  • Share this:
ಆಂಧ್ರಪ್ರದೇಶ (ಜೂನ್.30); ಕೊರೋನಾ ವೈರಸ್‌ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಎಲ್ಲಡೆ ಮಾಸ್ಕ್‌ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಅರಿವು ಮೂಡಿಸಲಾಗುತ್ತಿದೆ. ಆದರೆ, ಆಂಧ್ರದ ಪ್ರವಾಸೋದ್ಯಮ ಇಲಾಖೆಯಲ್ಲಿ ಮಹಿಳೆಯೊಬ್ಬರು ತನ್ನ ಪುರುಷ ಸಹೋದ್ಯೋಗಿಗೆ ಮಾಸ್ಕ್‌‌ ಧರಿಸುವಂತೆ ಹೇಳಿದ್ದೆ ತಪ್ಪಾಗಿದ್ದು, ಆತ ರಾಡ್‌ನಿಂದ ಆಕೆಯ ಮೇಲೆ ಹಲ್ಲೆಗೆ ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಶನಿವಾರ ಮಧ್ಯಾಹ್ನ ನೆಲ್ಲೂರು ಪಟ್ಟಣದ ದರ್ಗಮಿಟ್ಟಾದ ಎಪಿ ಟೂರಿಸಂ ಹೋಟೆಲ್‌ನಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೋಟೆಲ್‌ನ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾಗಳಿಂದ ಪಡೆದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಇದೀಗ ವೈರಲ್ ಆಗಿದೆ.

ಎಪಿ ಪ್ರವಾಸೋದ್ಯಮ ಹೋಟೆಲ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಆರೋಪಿ ಸಿ. ಭಾಸ್ಕರ್ ಅವರನ್ನು ನಾವು ಬಂಧಿಸಿದ್ದೇವೆ ಮತ್ತು ಅವರನ್ನು ನ್ಯಾಯಾಂಗ ವಶಕ್ಕೆ ಕಳುಹಿಸಲಾಗಿದೆ. ಸೆಕ್ಷನ್ 354, 355 (ವ್ಯಕ್ತಿಯನ್ನು ಅವಮಾನಿಸಲು ಬಲವನ್ನು ಬಳಸುವುದು) ಮತ್ತು 324 (ಶಸ್ತ್ರಾಸ್ತ್ರ ಬಳಸಿ ಗಾಯಗಳಿಗೆ ಕಾರಣ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ”ಎಂದು ದರ್ಗಮಿಟ್ಟಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆ. ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

“ಮಹಿಳೆಯರ ಮೇಲಿನ ಯಾವುದೇ ಉಲ್ಲಂಘನೆ ಅಥವಾ ಅಪರಾಧವು ಅತ್ಯಂತ ಸೂಕ್ಷ್ಮವಾಗಿರುತ್ತಾರೆ. ಮಹಿಳೆಯರ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದೆ ”ಎಂದು ನೆಲ್ಲೂರು ಪೊಲೀಸ್ ಇಲಾಖೆ ಟ್ವೀಟ್ ನಲ್ಲಿ ತಿಳಿಸಿದೆ.

ಪೊಲೀಸರ ಪ್ರಕಾರ, "ಆರೋಪಿ ಭಾಸ್ಕರ್ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ 43 ವರ್ಷದ ಮಹಿಳೆ ವಿರುದ್ಧ ಮೊದಲಿನಿಂದಲೂ ಹಗೆತನ ಸಾಧಿಸುತ್ತಿದ್ದರು. ಶನಿವಾರ, ಭಾಸ್ಕರ್ ಹಿರಿಯ ಅಕೌಂಟೆಂಟ್ ನರಸಿಂಹ ರಾವ್ ಅವರೊಂದಿಗೆ ಮಾಸ್ಕ್ ಧರಿಸದೆ ಮಾತನಾಡುತ್ತಿದ್ದಾಗ, ಕೋವಿಡ್ -19 ಪರಿಸ್ಥಿತಿಯಿಂದಾಗಿ ಮಹಿಳೆಯು ಮಾಸ್ಕ್ ಧರಿಸಲು ಸೂಚಿಸಿದ್ದಾರೆ.

ಆದರೆ, ಇಷ್ಟಕ್ಕೆ ಕೋಪಗೊಂಡ ಭಾಸ್ಕರ್ ಆಕೆಯನ್ನು ನಿಂದಿಸಿ ಅವಮಾನಿಸಿದ್ದಾರೆ. ಅಲ್ಲದೆ, ಅವರನ್ನು ಕುರ್ಚಿಯಿಂದ ಎಳೆದುಹಾಕಿ, ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಕೊನೆಗೆ ರಾಡ್‌ನಿಂದ ಬಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇತರ ಸಹೋದ್ಯೋಗಿಗಳು ತಡೆಯಲು ಪ್ರಯತ್ನಿಸಿದರೂ ಸಹ ಆತ ತನ್ನ ಹಲ್ಲೆಯನ್ನು ನಿಲ್ಲಿಸಿರಲಿಲ್ಲ" ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ನೆಲ್ಲೂರು ಪ್ರವಾಸೋದ್ಯಮ ಹೋಟೆಲ್ ಘಟನೆಯ ತನಿಖೆಯನ್ನು ಕೈಗೆತ್ತಿಕೊಳ್ಳಲು ಮತ್ತು ಒಂದು ವಾರದೊಳಗೆ ಚಾರ್ಜ್‌ಶೀಟ್ ಸಲ್ಲಿಸುವಂತೆ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌತಮ್ ಸಾವಂಗ್, ದಿಶಾ ಪೊಲೀಸ್ ಠಾಣೆಗೆ (ಮಹಿಳೆಯರ ಮೇಲಿನ ಅಪರಾಧಗಳನ್ನು ಎದುರಿಸಲು ವಿಶೇಷ ಪೊಲೀಸ್ ಠಾಣೆ) ನಿರ್ದೇಶಿಸಿದ್ದಾರೆ.ಇದನ್ನೂ ಓದಿ: ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ಕಾರಣವಾಯ್ತಾ ಈ ಒಂದು ಕಾರಣ?

“ಮಹಿಳೆಯರ ಮೇಲಿನ ಅಪರಾಧ ಸ್ವೀಕಾರಾರ್ಹವಲ್ಲ. ನೆಲ್ಲೂರು ಘಟನೆಯನ್ನು ನಾವು ಖಂಡಿಸುತ್ತೇವೆ ಮತ್ತು ಮಹಿಳಾ ಅಧಿಕಾರಿಯ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.
First published: June 30, 2020, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading