Man Assaults Girlfriend: ಸೋದರ-ಸ್ನೇಹಿತನ ಜೊತೆ ಮಲಗಲು ನಿರಾಕರಿಸಿದ ಯುವತಿಗೆ ನರಕ ತೋರಿಸಿದ ಬಾಯ್​​​ಫ್ರೆಂಡ್​​!

ಯುವತಿಯ ಬಾಯ್ ಫ್ರೆಂಡ್ ಆಕೆಯನ್ನು ಬಲವಂತವಾಗಿ ಕೊಠಡಿಯ ಹೊರಗೆ ಕಾಯುತ್ತಿದ್ದ ತನ್ನ ಸಹೋದರ ಮತ್ತು ಸ್ನೇಹಿತನೊಂದಿಗೆ ಮಲಗಲು ಒತ್ತಾಯಿಸಿದ.  ಮಹಿಳೆ ನಿರಾಕರಿಸಿದಾಗ, ಆರೋಪಿಗಳು ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊಹಾಲಿ: ಪಾಪಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಡವೇರಿ, ಯುವತಿ ಒಪ್ಪದಿದ್ದಾಗ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಈ ದಾರುಣ ಘಟನೆ ಪಂಜಾಬ್​​ನ ಮೊಹಾಲಿ ಜಿಲ್ಲೆಯ ನಯಗಾಂವ​​ ಪ್ರದೇಶದಲ್ಲಿ ನಡೆದಿದೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ಯುವತಿ ಹಾಗೂ ಹಲ್ಲೆ ಮಾಡಿದ ಪ್ರಿಯಕರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಘಟನೆ ನಡೆದ ದಿನ ಬಾಯ್​​ಫ್ರೆಂಡ್​​​ ಯುವತಿಯನ್ನು ತಾನು ತಂಗಿದ್ದ ಹೋಟೆಲ್​ಗೆ ಕರೆದಿದ್ದಾನೆ. ಬಾಯ್​​ಫ್ರೆಂಡ್​ಗೆ ಕೆಲಸ ಇರಲಿಲ್ಲ, ಆದರೆ ಯುವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸ ಇಲ್ಲದ ಬಾಯ್​ಫ್ರೆಂಡ್​​ ಹೋಟೆಲ್​​​ನಲ್ಲಿದ್ದುಕೊಂಡು ಕಂಠ ಪೂರ್ತಿ ಕುಡಿದಿದ್ದಾನೆ. ನಂತರ ತನ್ನನ್ನು ಕಾಣಲು ಬಂದ ಯುವತಿಗೆ ಆರೋಪಿ ನರಕ ತೋರಿಸಿದ್ದಾನೆ.

ಹೋಟೆಲ್​ ರೂಮಿಗೆ ಬಂದ ಯುವತಿಗೆ ತನ್ನ ಸೋದರ ಹಾಗೂ ಸ್ನೇಹಿತನ ಜೊತೆ ಮಗಲುವಂತೆ ಪ್ರೇಯಸಿಗೆ ಹೇಳಿದ್ದಾನೆ. ಬಾಯ್​​ಫ್ರೆಂಡ್​​ ಮಾತುಕೇಳಿ ಶಾಕ್​ಗೆ ಒಳಗಾದ ಯುವತಿ, ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕುಪಿತಗೊಂಡ ಬಾಯ್​​ಫ್ರೆಂಡ್​ ಆಕೆಯ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ.

ಘಟನೆಯ ವಿವರ

ಪಂಜಾಬಿನಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆತನ ಸಹೋದರ ಮತ್ತು ಸ್ನೇಹಿತನೊಂದಿಗೆಮಗಲಗಲು ಗೆಳೆಸಿ ನಿರಾಕರಿಸಿದ್ದಕ್ಕೆ ಕೃತ್ಯವೆಸಗಿದ್ದಾನೆ. ಶನಿವಾರ ರಾತ್ರಿ ನಯಗಾಂವದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಮಹಿಳೆಯನ್ನು ಹೋಟೆಲ್‌ಗೆ ಕರೆದೊಯ್ದು ಇಬ್ಬರು ಪುರುಷರೊಂದಿಗೆ ಮಲಗಲು ಕೇಳಿದ್ದ.  ನಾಯಗಾಂವ್ ನಿವಾಸಿ ಆಗಿರುವ ಆರೋಪಿ. ಸಂತ್ರಸ್ತೆಯು ಖರಾರ್ ನ ಸನ್ನಿ ಎನ್ ಕ್ಲೇವ್ ನಿವಾಸಿಯಾಗಿದ್ದು, ಆಕೆ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ಕೊಠಡಿ ಹೊರಗೆ ಕಾಯುತ್ತಿದ್ದ ಸೋದರ-ಸ್ನೇಹಿತ

ಯುವತಿಯ ದೂರಿನ ಪ್ರಕಾರ, ಆಕೆ ತನ್ನ ಗೆಳೆಯನೊಂದಿಗೆ ಶನಿವಾರ ನಯಗಾಂವ್‌ನ ಹೋಟೆಲ್‌ಗೆ ಹೋಗಿದ್ದಳು. ಈ ಸಮಯದಲ್ಲಿ  ವ್ಯಕ್ತಿಯು ಮದ್ಯದ ಅಮಲಿನಲ್ಲಿದ್ದನು. ಹೋಟೆಲ್ ನಲ್ಲಿ ಯುವತಿಯ ಬಾಯ್ ಫ್ರೆಂಡ್ ಆಕೆಯನ್ನು ಬಲವಂತವಾಗಿ ಕೊಠಡಿಯ ಹೊರಗೆ ಕಾಯುತ್ತಿದ್ದ ತನ್ನ ಸಹೋದರ ಮತ್ತು ಸ್ನೇಹಿತನೊಂದಿಗೆ ಮಲಗಲು ಒತ್ತಾಯಿಸಿದ.  ಮಹಿಳೆ ನಿರಾಕರಿಸಿದಾಗ, ಆರೋಪಿಗಳು ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ನಂತರ ಮಹಿಳೆ ಮೂರ್ಛೆ ಹೋಗಿದ್ದು, ಆರೋಪಿಗಳು ಆಕೆಯನ್ನು ಹೋಟೆಲ್ ಹೊರಗೆ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಗೆ ದಾಖಲು

ಭಾನುವಾರ ಬೆಳಗ್ಗೆ ಮಹಿಳೆ ಗಾಯಗೊಂಡ ಸ್ಥಿತಿಯಲ್ಲಿ ಇದಿದ್ದನ್ನು ಕಂಡ ಸ್ಥಳೀಯರು ಆಕೆಯನ್ನು ಚಂಡೀಗಡದ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಮಹಿಳೆಯನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ, ಪೊಲೀಸರು ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡದ ಸೆಕ್ಷನ್ 323 , 342, 308ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಮೂರು ದಿನಗಳ ಬಂಧನಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: Heart Breaking: ಮರುಮದುವೆಯಾಗೋಕೆ ಮಗುವನ್ನೇ ಮಾರಿಬಿಟ್ಟಳು, ಹೆತ್ತಕರುಳು ಅನ್ನೋದೆಲ್ಲಾ ಸುಳ್ಳಾ?

ಮತ್ತೊಂದು ಘಟನೆ; ಕೋಚ್​ನಿಂದ  ಲೈಂಗಿಕ ಕಿರುಕುಳ 

ಕಾಮಿ ಗುರು ತನ್ನ ಶಿಷ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. 14 ವರ್ಷದ ಬಾಲಕಿ ಮೇಲೆ 35 ವರ್ಷದ ಬ್ಯಾಡ್ಮಿಂಟನ್ ಕೋಚ್​  ಕ್ರೌರ್ಯ ಮೆರೆದಿದ್ದಾನೆ. ನಿನಗೆ ಒಳ್ಳೆ ಭವಿಷ್ಯ ಕೊಡುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಪುಣೆಯ ಬ್ಯಾಡ್ಮಿಂಟನ್ ಕ್ಲಬ್ ಒಂದರಲ್ಲಿ ಈ ಘಟನೆ ನಡೆದಿದೆ. ಕೋಚಿಂಗ್ ಮುಗಿಸಿದ ನಂತರ ಎಲ್ಲಾ ಮಕ್ಕಳು ತಮ್ಮ ಮನೆಯತ್ತ ಹೊರಟಿದ್ದರು. ಆದರೆ ಈ ಬಾಲಕಿಯನ್ನ ಇನ್ನು ಕೆಲವು ಹೊತ್ತು ಪ್ರಾಕ್ಟೀಸ್ ಮಾಡಲು ಕೋಚ್ ಹೇಳಿದ್ದಾನೆ. ಕೋಚ್ ಹೇಳಿದಂತೆ ಬಾಲಕಿಯು ಕೂಡ ಹೆಚ್ಚಿನ ಸಮಯ ಪ್ರಾಕ್ಟಿಸ್ ಮಾಡಿ ಮನೆಕಡೆ ಹೊರಡಲು ರೆಡಿಯಾಗಿದ್ದಾಳೆ. ಈ ವೇಳೆ ಶಟಲ್ ಗಳನ್ನು ಬಾಕ್ಸ್ ನಲ್ಲಿ ಹಾಕಿ ಲಾಕರ್ ರೂಂನಲ್ಲಿ ಎತ್ತಿಡಲು ಕೋಚ್ ಬಾಲಕಿ ತಿಳಿಸಿದ್ದ.
Published by:Kavya V
First published: