ಮನೆಯನ್ನು 1 ಮೀಟರ್ ಪಕ್ಕಕ್ಕೆ ಜರುಗಿಸಿ ಇಲ್ಲವೇ 1.65 ಕೋಟಿ ರೂ. ದಂಡ ಕಟ್ಟಿ: ಕೋರ್ಟ್ ಆದೇಶಕ್ಕೆ ಕಕ್ಕಾಬಿಕ್ಕಿ!

ಕಟ್ಟಿದ ಮನೆಯನ್ನು 1 ಮೀಟರ್​ ಪಕ್ಕಕ್ಕೆ ಜರುಗಿಸಿ, ಇಲ್ಲವೇ ಕೋಟ್ಯಂತರ ರೂಪಾಯಿ ದಂಡ ಕಟ್ಟಿ ಎಂದು ಅಲ್ಲಿನ ಕೋರ್ಟ್​​​ ಆದೇಶ ನೀಡಿದೆಯಂತೆ. ಎನ್​​ಆರ್​ಐ ದೀಪಕ್​​ ಲಾಲ್ ಮನೆ ಕಟ್ಟಿ ನೋಡು ದಂಡ ಕಟ್ಟಿ ಕೆಡು ಎನ್ನುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮನೆ ಮಾಲೀಕ ದೀಪಕ್​​ ಲಾಲ್​​

ಮನೆ ಮಾಲೀಕ ದೀಪಕ್​​ ಲಾಲ್​​

  • Share this:
ಸ್ವಂತದ ಮನೆ ಕಟ್ಟಿಕೊಳ್ಳುವುದು ಬಹುತೇಕರ ಕನಸು. ಸುಂದರವಾದ, ಅಚ್ಚುಕಟ್ಟಾದ ಮನೆ ತಮ್ಮದಾದರೆ ನೆಮ್ಮದಿಯ ಬದುಕು ಎಂದುಕೊಳ್ಳುತ್ತಾರೆ. ಇದೇ ರೀತಿ ಭಾರತದ ವ್ಯಕ್ತಿ ನ್ಯೂಜಿಲ್ಯಾಂಡ್​​ನಲ್ಲಿ ಚೆಂದದ ಮನೆ ಕಟ್ಟಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರ ನೆಮ್ಮದಿಗೆ ಬೆಂಕಿ ಬಿದ್ದಿದ್ದೆ. ಸಣ್ಣ ತಪ್ಪಿಗಾಗಿ ಅಲ್ಲಿನ ಕೋರ್ಟ್​ ಅವರನ್ನು ಅಡಕತ್ತರಿ ಮೇಲೆ ನಿಲ್ಲಿಸಿ ಬಿಟ್ಟಿದೆ. ಹೊಸ ಮನೆಯಲ್ಲಿ ಬೆಚ್ಚನೆಯ ರಾತ್ರಿಗಳನ್ನು ಕಳೆಯಬೇಕಿದ್ದ ವ್ಯಕ್ತಿ ಈಗ ನಿದ್ರೆ ಇಲ್ಲದೇ ರಾತ್ರಿ ಪೂರ್ತಿ ಚಡಪಡಿಸುವಂತಾಗಿದೆ.

ಎನ್​​ಆರ್​ಐ ದೀಪಕ್​​ ಲಾಲ್​​ ಎಂಬುವರು ಪಪಕೂರ್​​ ಏರಿಯಾದಲ್ಲಿ ಚೆಂದದ ಮನೆಯನ್ನು ಕಟ್ಟಲು ಮುಂದಾಗಿದ್ದರು. ಮನೆ ಕಟ್ಟಿಕೊಡುವ ಜವಾಬ್ದಾರಿಯನ್ನು ಪಿನಲ್​ ಹೋಮ್ಸ್​ ಎಂಬ ಕಂಪನಿಗೆ ವಹಿಸಿದ್ದರು. ದೀಪಕ್​​ ಕನಸು ಕಂಡಂತೆಯೇ ಅವರ ಬಜೆಟ್​ಗೆ ಅನುಸಾರವಾಗಿ ಮೂರು ಕೊಠಡಿಗಳಿರುವ ಮನೆಯನ್ನು ಕನ್ಸ್​ಟ್ರಕ್ಷನ್​ ಕಂಪನಿ ಕಟ್ಟಿಕೊಟ್ಟಿತ್ತು. ಎಲ್ಲವೂ ನಿರ್ವಿಘ್ನವಾಗಿ ನಡೆಯಿತಲ್ಲ ಅಷ್ಟೇ ಸಾಕು ಎಂದು ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು. ಇನ್ನೇನು ನೆಮ್ಮದಿಯಾಗಿ ಮನೆಯಲ್ಲಿ ಕಾಲ ಕಳೆಯಬಹುದು ಎಂದುಕೊಂಡಿದ್ದ ದೀಪಕ್​ ಅವರಿಗೆ ಬರ ಸಿಡಿಲು ಬಡಿದಿದೆ.

ಮನೆ ಕಟ್ಟಿದವರು ಮಾಡಿದ ಸಣ್ಣ ತಪ್ಪಿಗೆ ದೀಪಕ್​​ ಕೋಟ್ಯಂತರ ರೂಪಾಯಿ ದಂಡ ಕಟ್ಟುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ದೀಪಕ್​ ಅವರ ಮನೆ ಪಕ್ಕದ 1 ಮೀಟರ್​ ಸ್ಥಳವನ್ನು ಅತಿಕ್ರಿಮಿಸಿಕೊಂಡು ಕಟ್ಟಲಾಗಿದೆಯಂತೆ. 1 ಮೀಟರ್​ ಅತಿಕ್ರಮಣಕ್ಕೆ ಅಲ್ಲಿನ ಕೋರ್ಟ್​ ಭಾರೀ ಮೊತ್ತದ ದಂಡವನ್ನೇ ವಿಧಿಸಿದೆ. ದಂಡದಿಂದ ಬಚಾವ್​ ಆಗಬೇಕಾದರೆ ಏನು ಮಾಡಬೇಕು ಅಂತಲೂ ಕೋರ್ಟ್​ ಹೇಳಿದೆ.

ಇದನ್ನೂ ಓದಿ: Viral Video: ಗೋ ಕೊರೋನಾ ಗೋ ಪಾರ್ಟ್-2 ವಿಡಿಯೋ ನೋಡಿದರೆ ಬಿದ್ದು ಬಿದ್ದು ನಗ್ತೀರ!

ಕಟ್ಟಿದ ಮನೆಯನ್ನು 1 ಮೀಟರ್​ ಪಕ್ಕಕ್ಕೆ ಜರುಗಿಸಿ, ಇಲ್ಲವೇ ಕೋಟ್ಯಂತರ ರೂಪಾಯಿ ದಂಡ ಕಟ್ಟಿ ಎಂದು ಅಲ್ಲಿನ ಕೋರ್ಟ್​​​ ಆದೇಶ ನೀಡಿದೆಯಂತೆ. ಎನ್​​ಆರ್​ಐ ದೀಪಕ್​​ ಲಾಲ್ ಮನೆ ಕಟ್ಟಿ ನೋಡು ದಂಡ ಕಟ್ಟಿ ಕೆಡು ಎನ್ನುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇನ್ನು ಮನೆಯನ್ನು 1 ಮೀಟರ್​ನಷ್ಟು ಪಕ್ಕಕ್ಕೆ ಜರುಗಿಸಲು 80 ಲಕ್ಷ ರೂಪಾಯಿ ವೆಚ್ಚವಾಗಲಿದೆಯಂತೆ. ದೀಪಕ್​ ಅವರಿಗೆ ಮನೆ ಕಟ್ಟಿದ್ದು ಗರಗಸದಂತೆ ಆಗಿದ್ದು ಈಗ ಹಿಂದೆ ಸರಿದರೂ ನಷ್ಟವೇ, ಮುಂದೆ ಸರಿದರೂ ನಷ್ಟವೇ ಎನ್ನುವಂತಾಗಿದೆ.

ಕೋರ್ಟ್​ ಆದೇಶ ನನಗೆ ಒಂದು ಕೆಟ್ಟ ಕನಸ್ಸಿನಂತೆ ಕಾಡುತ್ತಿದೆ. ಕೋಟ್ಯಂತರ ರೂಪಾಯಿ ದಂಡ ಕಟ್ಟುವುದು ಅಸಾಧ್ಯವಾಗಿದೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ದೀಪಕ್​ ತಿಳಿಸಿದ್ದಾರೆ. ಅಲ್ಲಿಯವರೆಗೆ ಸ್ವಂತ ಮನೆಯಲ್ಲಿಯೂ ಇರುವಂತಿಲ್ಲ ಎಂದು ಕೋರ್ಟ್​ ಷರತ್ತು ವಿಧಿಸಿದೆ. ಹೀಗಾಗಿ ಸ್ವಂತ ಮನೆಯಿದ್ದರೂ ದೀಪಕ್​ ಕುಟುಂಬ ಸ್ಥಳೀಯ ಹೋಟೆಲ್​ನಲ್ಲಿ ತಂಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದೀಪಕ್​ ಪ್ರಕರಣವನ್ನೂ ನೋಡಿಯಾದರೂ ಜನ ಸ್ಥಳ ಅತಿಕ್ರಮಣದ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಬೇಕಾಬಿಟ್ಟಿ ರೂಲ್ಸ್​ ಬ್ರೇಕ್​ ಮಾಡಿ ಮನೆ ಕಟ್ಟಿದರೆ ದಂಡ ಕಟ್ಟಿಟ್ಟ ಬುತ್ತಿ.
Published by:Kavya V
First published: