Spying: ಪಾಕ್​ನಿಂದ ಬಂದ ಹಿಂದೂ ನಿರಾಶ್ರಿತನಿಂದ ಬೇಹುಗಾರಿಕೆ, 3 ವರ್ಷದ ಹಿಂದೆ ಸಿಕ್ಕಿತ್ತು ಭಾರತದ ಪೌರತ್ವ!

ರಾಜಸ್ಥಾನ ಗುಪ್ತಚರ ದಳ ದೆಹಲಿಯಿಂದ 46 ವರ್ಷದ ಭಾಗ್‌ಚಂದ್‌ನನ್ನು ಬಂಧಿಸಿದೆ. ಆರೋಪಿ ಮೂರು ವರ್ಷಗಳ ಹಿಂದೆ ಭಾರತೀಯ ಪೌರತ್ವ ಪಡೆದು ದೆಹಲಿಯಲ್ಲಿ ತಂಗಿದ್ದ, ಈತ ವೇಳೆ ಟ್ಯಾಕ್ಸಿ ಓಡಿಸುತ್ತಿದ್ದ ಎನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವದೆಹಲಿ(ಆ.22): ಪಾಕಿಸ್ತಾನ (Pakistan) ತನ್ನ ಕೆಟ್ಟ ಪಿತೂರಿಗಳಿಂದ ಹಿಂದೆ ಸರಿಯುವುದಿಲ್ಲ. ಹೇಗಾದರೂ ಸರಿ ಅದು ತನ್ನ ಕುಕೃತ್ಯಗಳನ್ನು ಮುಂದುವರೆಸುತ್ತಿರುತ್ತದೆ. ಇದೀಗ ಪಾಕಿಸ್ತಾನದ ಈ ದುಷ್ಟ ಬುದ್ಧಿಗೆ ಮತ್ತೊಂದು ಸಾಕ್ಷಿ ಲಭಿಸಿದೆ. ಭಾರತದಲ್ಲಿದ್ದು (India) ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿಯಲ್ಲಿ (Delhi) ಬಂಧಿಸಲಾಗಿದೆ. ಈ ಗೂಢಚಾರ (Spying) ಕೆಲಸ ಮಾಡುತ್ತಿದ್ದಾತ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಹಿಂದೂ ನಿರಾಶ್ರಿತನಾಗಿದ್ದಾನೆ. ಅಲ್ಲದೇ ಈತ ಪಾಕಿಸ್ತಾನದಿಂದ ಬಂದು ಭಾರತದ ಪೌರತ್ವ (Indian Citizenship) ಪಡೆದಿರುವುದು ಮತ್ತೂ ಅಚ್ಚರಿಯ ಸಂಗತಿಯಾಗಿದೆ. ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಸದ್ಯ ಈ ನಿರಾಶ್ರಿತನನ್ನು ಬಂಧಿಸಲಾಗಿದೆ.

ಮೂರು ವರ್ಷಗಳ ಹಿಂದೆ ಭಾರತೀಯ ಪೌರತ್ವ ಸಿಕ್ಕಿತ್ತು

ರಾಜಸ್ಥಾನ ಗುಪ್ತಚರ ದಳ ದೆಹಲಿಯಿಂದ 46 ವರ್ಷದ ಭಾಗ್‌ಚಂದ್‌ನನ್ನು ಬಂಧಿಸಿದೆ. ಆರೋಪಿ ಮೂರು ವರ್ಷಗಳ ಹಿಂದೆ ಭಾರತೀಯ ಪೌರತ್ವ ಪಡೆದು ದೆಹಲಿಯಲ್ಲಿ ತಂಗಿದ್ದ, ಇಲ್ಲಿ ಈತ ಟ್ಯಾಕ್ಸಿ ಓಡಿಸುತ್ತಿದ್ದ. ಆರೋಪಿಯು ಪಾಕಿಸ್ತಾನಿ ಹ್ಯಾಂಡ್ಲರ್ ಜತೆ ಸಂಪರ್ಕದಲ್ಲಿದ್ದು, ದೆಹಲಿಯಿಂದ ಪಾಕಿಸ್ತಾನಕ್ಕೆ ಮಹತ್ವದ ಮಾಹಿತಿ ರವಾನಿಸುತ್ತಿದ್ದ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿತ್ತು.

ಇದನ್ನೂ ಓದಿ:  Pakistan Politics Crisis: ಪ್ರಧಾನಿ ಮೋದಿ ಪಾಕಿಸ್ತಾನ ರಾಜಕೀಯದಲ್ಲಿ ಮೂಗು ತೂರಿಸಿದ್ದಾರೆ: ಇಮ್ರಾನ್ ಖಾನ್

ಈ ಬಗ್ಗೆ ಮಾಹಿತಿ ನೀಡಿದ ಎಡಿಜಿ ಗುಪ್ತಚರ ಉಮೇಶ್ ಮಿಶ್ರಾ ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಭಾಗ್‌ಚಂದ್‌, ದೆಹಲಿಯ ಸೂಕ್ಷ್ಮ ಸ್ಥಳಗಳ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಎಂದು ಹೇಳಿದ್ದಾರೆ. ಆಗಸ್ಟ್ 14 ರಂದು, ನಾರಾಯಣ ಲಾಲ್ ಗಾದ್ರಿ ಎಂಬ ವ್ಯಕ್ತಿಯನ್ನು ಬೇಹುಗಾರಿಕೆ ಆರೋಪದ ಮೇಲೆ ಭಿಲ್ವಾರಾದಿಂದ ಬಂಧಿಸಲಾಯಿತು, ಅವರ ಮೊಬೈಲ್‌ನಿಂದ ದೆಹಲಿಯ ಸಂಜಯ್ ಕಾಲೋನಿಯ ಭಾಟಿ ಮೈನ್ಸ್‌ನ ನಿವಾಸಿ ಭಾಗ್‌ಚಂದ್‌ ಕೂಡ ಶಾಮೀಲಾಗಿದ್ದಾರೆ ಎಂದು ತಿಳಿದುಬಂದಿದೆ.

1998ರಲ್ಲಿ ಕುಟುಂಬ ಸಮೇತ ಭಾರತಕ್ಕೆ ಬಂದಿದ್ದ

ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ತನ್ನ ಖಾತೆಗೂ ಹಣವನ್ನು ಹಾಕುತ್ತಿದ್ದಾರೆ ಎಂದು ಭಾಗ್‌ಚಂದ್‌ ಹೇಳಿದ್ದಾನೆ. ಈತ ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ. ಆಟೋ, ಟ್ಯಾಕ್ಸಿ ಓಡಿಸುವಾಗ ದೆಹಲಿಯ ವಿವಿಧ ಸ್ಥಳಗಳ ಚಿತ್ರಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ಬಂಧಿತ ಆರೋಪಿ 1998ರಲ್ಲಿ ಕುಟುಂಬ ಸಮೇತ ವೀಸಾ ಮೇಲೆ ಭಾರತಕ್ಕೆ ಬಂದು ಇಲ್ಲಿ ಕೆಲಸ ಆರಂಭಿಸಿದ್ದ. ಮೂರು ವರ್ಷಗಳ ಹಿಂದೆ ಭಾರತೀಯ ಪೌರತ್ವವನ್ನೂ ಪಡೆದುಕೊಂಡಿದ್ದಾನೆ. ಸದ್ಯ ಗುಪ್ತಚರ ಜಂಟಿ ತಂಡ ಜೈಪುರದಲ್ಲಿ ಈ ಕುರಿತು ಭಾಗ್‌ಚಂದ್‌ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ:  Pakistan: ಪಾಕಿಸ್ತಾನದಲ್ಲಿ ರೇಪಿಸ್ಟ್​​ಗಳಿಗೆ ರಾಸಾಯನಿಕ ನೀಡಿ 'ಅದನ್ನೇ' ಕಿತ್ತುಕೊಳ್ತಾರೆ!

ಪಾಕ್​ ಮಾಜಿ ಪ್ರಧಾನಿಗೆ ಇಮ್ರಾನ್ ಖಾನ್​ಗೆ ಹೊಸ ಟೆನ್ಶನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಆಗಸ್ಟ್ 20 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ದೇಶದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಪಾಕಿಸ್ತಾನದ ಶಾಂತಿ ವ್ಯವಸ್ಥೆಗೆ ಭಂಗ ತರುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, ಇಸ್ಲಾಮಾಬಾದ್ ಐಜಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪವೂ ಇದೆ.

ಪಾಕಿಸ್ತಾನದ ಜಿಯೋ ನ್ಯೂಸ್ ಪ್ರಕಾರ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಯಾವಾಗ ಬೇಕಾದರೂ ಬಂಧಿಸಬಹುದು ಅಥವಾ ಅವರನ್ನು ಗೃಹಬಂಧನದಲ್ಲಿ ಇರಿಸಬಹುದು. ಶನಿವಾರ ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಭಾಷಣ ಮಾಡುವಾಗ ಪೊಲೀಸರು, ನ್ಯಾಯಾಧೀಶರು, ಪಾಕಿಸ್ತಾನದ ಚುನಾವಣಾ ಆಯೋಗ ಮತ್ತು ರಾಜಕೀಯ ಪ್ರತಿಸ್ಪರ್ಧಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
Published by:Precilla Olivia Dias
First published: