savage thrashing: ಅತ್ಯಾಚಾರ ಆರೋಪಿತ ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸಿದ ಚಿಕ್ಕಪ್ಪ- ಚಿಕ್ಕಮ್ಮ; ವಿಡಿಯೋ ವೈರಲ್

ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಜೈನ್ ಮಾತನಾಡಿ, ಈ ವಿಡಿಯೋ ಆಧರಿಸಿ ದಂಪತಿ ಹಾಗೂ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. "ತನಿಖೆ ನಡೆಯುತ್ತಿದೆ. ಅದರ ನಂತರ ಕ್ರಮ ಕೈಗೊಳ್ಳಲಾಗುವುದು, ”ಎಂದು ಅವರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾಜಸ್ಥಾನದ ಕೋಟಾದಲ್ಲಿ (Rajastan Kota) 22 ವರ್ಷದ ವ್ಯಕ್ತಿಯನ್ನು ಸಂಬಂಧಿಕರು ಕಟ್ಟಿ ಹಾಕಿ, ಹಿಂಸಿಸಿ, ಬಲವಂತವಾಗಿ ಮೂತ್ರ ಕುಡಿಸಿ, ದರೋಡೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದ್ದು, ಪೊಲೀಸರು ಈಗ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಘಟನೆ  ಸೆಪ್ಟೆಂಬರ್ 14 ರಂದು ಸಂಭವಿಸಿದೆ ಎಂದು ವರದಿಯಾಗಿದೆ. ಎರಡು ದಿನಗಳ ಹಿಂದೆ, ಆ ವ್ಯಕ್ತಿಯ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಆತನ ವಿರುದ್ಧ ಪೋಲಿಸ್ ದೂರು ಸಲ್ಲಿಸಿದರು. ಆತ ಅವರ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಆ ನಂತರ ಆತನನ್ನು ಬಂಧಿಸಿ  ಜೈಲಿಗೆ ಹಾಕಲಾಯಿತು ಎಂದು ಇಂಡಿಯಾ ಟುಡೆ ವರದಿಯಲ್ಲಿ ತಿಳಿಸಿದೆ.

  ಯುವಕನ ಹಿರಿಯ ಸಹೋದರನ ಪ್ರಕಾರ, ಸೆಪ್ಟೆಂಬರ್ 14 ರ ಸಂಜೆ ಕೋಟಾ ಜಿಲ್ಲೆಯ ಜಗಪುರ ಗ್ರಾಮದಲ್ಲಿರುವ ದಂಪತಿಗಳ ಮನೆಗೆ ಆ ವ್ಯಕ್ತಿಯನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು. ನಂತರ ಅವರು ಆತನ ಕೈ ಮತ್ತು ಕಾಲುಗಳನ್ನು ಬಿಗಿದು ಕಟ್ಟಿ ಹಾಕಿದರು. ಮತ್ತು ಆತನನ್ನು ರಾತ್ರಿಯಿಡೀ ಬಂಧಿಸಿದರು ಎಂದು ಹೇಳಿದ್ದಾರೆ.

  ಅವರು ಆತನಿಂದ ಫೋನ್​, ಐಡಂಟಿಟಿ ಕಾರ್ಡ್ ಮತ್ತು 22 ಸಾವಿರ ರೂಪಾಯಿ ನಗದನ್ನು ದೋಚಿದ್ದಾರೆ ಎಂದು ಆತ ಹೇಳಿದ್ದಾನೆ. ಬಳಿಕ ಆತನಿಗೆ ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಈ ಕೃತ್ಯವನ್ನು ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಿಡಿಯೋ ಮಾಡಿದ್ದಾರೆ. ಅನಿರೀಕ್ಷಿತವಾಗಿ ಈ ವಿಡಿಯೋ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ.

  ಸಂತ್ರಸ್ತ ಯುವಕ ಅಹಮದಾಬಾದ್‌ನ ಒಬ್ಬ ಕಾರ್ಮಿಕನಾಗಿದ್ದು, ಈ ಘಟನೆ ಸಂಭವಿಸಿದಾಗ ಕೆಲವು ದಿನಗಳ ಕಾಲ ಕೋಟಾಗೆ ಮನೆಗೆ ಹೋಗಿದ್ದ. ಅವರ ಚಿಕ್ಕಪ್ಪ ಹೋಮ್ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಜೈನ್ ಮಾತನಾಡಿ, ಈ ವಿಡಿಯೋ ಆಧರಿಸಿ ದಂಪತಿ ಹಾಗೂ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. "ತನಿಖೆ ನಡೆಯುತ್ತಿದೆ. ಅದರ ನಂತರ ಕ್ರಮ ಕೈಗೊಳ್ಳಲಾಗುವುದು, ”ಎಂದು ಅವರು ಹೇಳಿದ್ದಾರೆ.

  ಮಗಳಿಗೆ ನೇಣು ಹಾಕಿ ಕೊನೆಗೆ ತಾನು ಸಾವಿಗೆ ಯತ್ನಿಸಿದ ತಾಯಿ

  ಮನೆಯಲ್ಲಿ ಫ್ಯಾನಿಗೆ ಮಗಳನ್ನು ನೇಣು ಹಾಕಿ, ಅದೇ ಫ್ಯಾನಿನ ಕುಣಿಕೆಗೆ ತಾಯಿಯೂ ಕೊರಳೊಡ್ಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಹೊರ ವಲಯದ ರಾಜಾನುಕುಂಟೆ ಬಳಿಯ ದಿಬ್ಬೂರಿನಲ್ಲಿ ನಡೆದಿದೆ. ಘಟನೆಯಲ್ಲಿ 12 ವರ್ಷದ ಮಗಳು ದಿವ್ಯಶ್ರೀ ಸಾವನ್ನಪ್ಪಿದ್ದರೆ, 38 ವರ್ಷದ ತಾಯಿ ವರ ಮಹಾಲಕ್ಷ್ಮಿ ಜೀವಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರೋ ವರಲಕ್ಷ್ಮಿ ನೇಣು ಹಾಕಿಕೊಳ್ಳುವ ಸಂದರ್ಭದಲ್ಲಿ ತಾಯಿ ಮತ್ತು ಅಕ್ಕ ನೇಣು ಕುಣಿಕೆಯಲ್ಲಿರೋದನ್ನ ನೋಡಿದ್ದ 8 ವರ್ಷದ ಮಗು ಜೋರಾಗಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದೆ. ಮಗು ಕಿರುಚಾಟ ಕಂಡ ಸ್ಥಳೀಯರು ಕೂಡಲೇ ಮನೆಗೆ ತೆರಳಿ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೆ 12 ವರ್ಷದ ಮಗಳು ದಿವ್ಯಶ್ರೀ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

  ಇದನ್ನು ಓದಿ: Bharathi Shetty: ಸರ್ಕಾರಕ್ಕೆ ನಮ್ಮ ನೋವು ಅರ್ಥ ಆಗುವವರೆಗೆ ಮಾತನಾಡ್ತೇನೆ; ಅತ್ಯಾಚಾರ ಪ್ರಕರಣ ಚರ್ಚೆ ವೇಳೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆಕ್ರೋಶ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: