Viral Video: ಬೆಳ್ಳಂ ಬೆಳಗ್ಗೆ ಬೆತ್ತಲೆಯಾಗಿ ಬೈಕ್​ ಓಡಿಸಿ ಪೊಲೀಸ್​ ಅತಿಥಿಯಾದ 24ರ ಯುವಕ!

Naked in public: ಬಂಧಿತ ಯುವಕನ ಬೆತ್ತಲೆಯಾಗಿ ಓಡಾಟ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಚಿತ್ರೀಕರಿಸಿದದಾರೆ. ಅದರಲ್ಲಿ ಯುವಕ ಪ್ಯಾನ್​ ಐಸ್​ಲ್ಯಾಂಡ್​ ಎಕ್ಸ್​ಪ್ರೆಸ್​ ಹೆದ್ದಾರಿಯಲ್ಲಿ ಬೆತ್ತಲಾಗಿ ಬೈಕ್​ ಚಲಾಯಿಸಿದ್ದಾನೆ. ಹೆಲ್ಮಟ್​ ಧರಿಸದೆ ಚಲಾಯಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Photo: Yahoo

Photo: Yahoo

  • Share this:
    ಕೊರೊನಾ ಕಾಲದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮಾಸ್ಕ್​ ಧರಿಸಿಕೊಂಡು ಓಡಾಡಬೇಕು ಎಂಬ ನಿಯಮವಿದೆ. ಹಾಗಾಗಿ ಮಾಹಾಮಾರಿಯಿಂದ ರಕ್ಷಸಿಕೊಳ್ಳಲು ಎಲ್ಲರು  ಮಾಸ್ಕ್​ ಧರಿಸಿಯೇ ಮನೆಯಿಂದ ಹೊರ ಹೋಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾಸ್ಕ್​ ಬಿಡಿ ಮೈ ಮೇಲೆ ಬಟ್ಟೆಯೇ ಧರಿಸದೆ ಬೆತ್ತಲೆಯಾಗಿ ಓಡಾಡಿ ಪೊಲೀಸರ ಅತಿಥಿಯಾಗಿದ್ದಾನೆ.

    ಸಿಂಗಾಪುರದಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ ಯುವಕನೋರ್ವ ಬಟ್ಟೆ ಧರಿಸದೆ ಬೆತ್ತಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಡ್ಡಾದಿದ್ದಾನೆ. ಸಾಲದಕ್ಕೆ ಬೈಕ್​ ಚಲಾಯಿಸಿದ್ದಾನೆ. ಈ ವಿಚಾರ ಬೆಳಕಿಗೆ ಬಂದಂತೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

    ಬಂಧಿತ ಯುವಕನ ಬೆತ್ತಲೆಯಾಗಿ ಓಡಾಟ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಚಿತ್ರೀಕರಿಸಿದದಾರೆ. ಅದರಲ್ಲಿ ಯುವಕ ಪ್ಯಾನ್​ ಐಸ್​ಲ್ಯಾಂಡ್​ ಎಕ್ಸ್​ಪ್ರೆಸ್​ ಹೆದ್ದಾರಿಯಲ್ಲಿ ಬೆತ್ತಲಾಗಿ ಬೈಕ್​ ಚಲಾಯಿಸಿದ್ದಾನೆ. ಹೆಲ್ಮಟ್​ ಧರಿಸದೆ ಚಲಾಯಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.



    ಗುರುವಾರ ಮುಂಜಾನೆ 5;45ಕ್ಕೆ ಬ್ಲಾಕ್​​ 212 ಲೊರೊಂಗ್​ 8 ಟೊ ಪಯೋಹ್​ ಎಂಬ ಸ್ಥಳದಲ್ಲಿ ಯುವಕ ಬೆತ್ತಲೆ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಆತನನ್ನು ಬಂಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಸ್ಥಳಿಯ ಮಾದ್ಯಮಕ್ಕೆ ತಿಳಿಸಿದ್ದಾರೆ.

    ಸದ್ಯ ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಅಸಭ್ಯವಾಗಿ ವರ್ತಿಸಿದ ಕುರಿತಾಗಿ  ಮತ್ತು ಕಾನೂನು ಉಲ್ಲಂಘಿಸಿದ ಕಾರಣ ಯುವನನ್ನು ತನಿಖೆ ಒಳಪಡಿಸಲಾಗಿದೆ.
    Published by:Harshith AS
    First published: