Ganguly: ದಾದಾ ಮನೆಗೆ ಹೋಗಿ ಶುಭಾಶಯ ಕೋರಿದ ದೀದಿ; ಏನಿದು ವಿಶೇಷ!

ಜನವರಿ 2 ರಂದು, ಸೌರವ್ ಗಂಗೂಲಿ ತಮ್ಮ ಮನೆಯ ಜಿಮ್‌ನಲ್ಲಿ ಇರಬೇಕಾದರೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ ಗಂಗೂಲಿ ಅವರನ್ನು ನೋಡಲು ಇಡೀ ರಾಜಕೀಯ ನಾಯಕರ ದಂಡೆ ಅಲ್ಲಿ ನೆರೆದಿತ್ತು

ಗಂಗೂಲಿ- ಮಮತಾ ಬ್ಯಾನರ್ಜಿ

ಗಂಗೂಲಿ- ಮಮತಾ ಬ್ಯಾನರ್ಜಿ

 • Share this:
  ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ’ದಾದ’ ಸೌರವ್ ಗಂಗೂಲಿ ಅವರ ಹುಟ್ಟುಹಬ್ಬದ ದಿನ ಸ್ವತಃ ಅವರ ಮನೆಗೆ ಹೋಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮ, ತಮ್ಮ ಪಕ್ಷಗಳಿಗೆ ಸೌರವ್​ ಗಂಗೂಲಿಯನ್ನು ಕರೆತರಲು ಎಲ್ಲಾ ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವಾಗ ದೀದಿಯವರ ಈ ನಡೆ ಅಚ್ಚರಿ ಮೂಡಿಸಿದೆ.

  ಈಗಂತೂ ಯಾರದೇ ಹುಟ್ಟುಹಬ್ಬವಾದರೂ ಆನ್‌ಲೈನ್‌ ಮೂಲಕ ಶುಭಕೋರುವುದು ವಾಡಿಕೆ. ಈ ಬಾರಿದ ಸಂಪ್ರದಾಯವನ್ನು ಮೀರಿದ  ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಸಂಜೆ 5 ಗಂಟೆಗೆ ಸೌರವ್ ಗಂಗೂಲಿ ಅವರ ಮನೆಗೆ ತೆರಳಿ ಮುಖತಃ ಭೇಟಿಯಾಗಿ ಜನ್ಮ ದಿನದ ಶುಭಾಶಯ ಕೋರಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

  ಹಳದಿ ಗುಲಾಬಿಯ ಗುಚ್ಛ ಮತ್ತು ಸಿಹಿತಿಂಡಿಯೊಂದಿಗೆ ತೆರಳಿ ಶುಭಾಶಯ ತಿಳಿಸಿದರು. ಇದಕ್ಕೆ ಪ್ರತಿಯಾಗಿ ಸೌರವ್‌ ಗಂಗೂಲಿ ಅವರು ಕೂಡಾ ಉಡುಗೊರೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯು ಸೌರವ್ ಗಂಗೂಲಿಯನ್ನು ಪಕ್ಷಕ್ಕೆ ಸೇರಲು ಮತ್ತು ಅದರ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿದ್ದವು. ಆದರೆ ಗಂಗೂಲಿ ತಮ್ಮ ಯಾವುದೇ ನಿಲುವನ್ನು ಪ್ರಕಟಿಸಿರಲಿಲ್ಲ. ಅಲ್ಲದೇ  ವಿಧಾನಸಭಾ ಚುನಾವಣೆ ಹತ್ತಿರದಲ್ಲಿದೆ ಎನ್ನುವಾಗಲೇ  ಅವರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

  ಜನವರಿ 2 ರಂದು, ಸೌರವ್ ಗಂಗೂಲಿ ತಮ್ಮ ಮನೆಯ ಜಿಮ್‌ನಲ್ಲಿ ಇರಬೇಕಾದರೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ ಗಂಗೂಲಿ ಅವರನ್ನು ನೋಡಲು ಇಡೀ ರಾಜಕೀಯ ನಾಯಕರ ದಂಡೆ ಅಲ್ಲಿ ನೆರೆದಿತ್ತು

  ಇಡೀ ಆಸ್ಪತ್ರೆ ತುಂಬೆಲ್ಲಾ ವಿಐಪಿಗಳು ಅವರನ್ನು ಭೇಟಿ ಮಾಡಲು ತಮ್ಮ ಸರದಿಯನ್ನು ಕಾಯತೊಡಗಿದ್ದರು. ಸರಿಸುಮಾರು ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು.

  ಪ್ರಧಾನಿ ನರೇಂದ್ರ ಮೋದಿ ಅವರು ಗಂಗೂಲಿಯ ಆರೋಗ್ಯದ ಬಗ್ಗೆ ದೂರವಾಣಿ ಮೂಲಕ ವಿಚಾರಿಸಿದ್ದರು. ಗೃಹ ಸಚಿವ ಅಮಿತ್ ಶಾ ಅವರು ಗಂಗೂಲಿಯ ಆರೋಗ್ಯ ಬಗ್ಗೆಗಿನ ಮಾಹಿತಿಗಾಗಿ ಅವರ ಪತ್ನಿ ದೋನಾ ಗಂಗೂಲಿ ಅವರೊಂದಿಗೆ ಸಂಪರ್ಕದಲ್ಲಿದ್ದರು.

  ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಮೊದಲ ದಿನದಂದೇ ಗಂಗೂಲಿಯನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಆ ಸಮಯದಲ್ಲಿ ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್ ಮತ್ತು ರಾಜ್ಯಸಭಾ ಸಂಸದ ಸ್ವಪನ್ ದಾಸ್‌ಗುಪ್ತಾ ಕೂಡ ಅವರನ್ನು ಭೇಟಿ ಮಾಡಿದ್ದರು.

  ಮಮತಾ ಬ್ಯಾನರ್ಜಿ ಅವರು ಗಂಗೂಲಿಯ 49 ನೇ ಹುಟ್ಟುಹಬ್ಬದಂದು ಅವರ ಮನೆಗೆ ತೆರಳಿ ವೈಯಕ್ತಿಕವಾಗಿ ಭೇಟಿಯಾಗಿ ಹಾರೈಸಿದ್ದು ಏಕೆ ಎನ್ನುವುದು ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯ ವಿಷಯವಾಗಿದೆ. ಗಂಗೂಲಿ ಅವರೇನಾದರೂ ಬಿಜೆಪಿಯ ಕಡೆಗೆ ವಾಲಿದ್ದರೆ  ಮಮತಾ ಬ್ಯಾನರ್ಜಿ ಅವರಿಗೆ ಸಾಕಷ್ಟು ಹೊಡೆತ ಬೀಳುತ್ತಿತ್ತು ಎಂದು ಪರಿಣಿತರು ಅಂದಾಜಿಸಿದ್ದರು.

  ಇದನ್ನೂ ಓದಿ: ನಿಷೇಧವಾಗಲಿದೆಯೇ ಆನ್​ಲೈನ್​ ಜೂಜು: ಕೋರ್ಟಿನಲ್ಲಿ ಏನು ಹೇಳಿತು ರಾಜ್ಯ ಸರ್ಕಾರ

  ಸೌರವ್‌ ಗಂಗೂಲಿಯನ್ನು ಬಿಜೆಪಿಗೆ ಸೇರಲು ಭಾರಿ ಒತ್ತಡ ನೀಡಿದ್ದೇ ಅವರು ಆಸ್ಪತ್ರೆ ಸೇರಲು ಕಾರಣ ಎಂದು ಸಿಪಿಎಂ ನಾಯಕ ಅಶೋಕ್ ಭಟ್ಟಾಚಾರ್ಯ ಆರೋಪಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: