ಕೋಲ್ಕತ್ತಾದಲ್ಲಿ ವಿದ್ಯಾಸಾಗರ್ ಪ್ರತಿಮೆ ಮರುಸ್ಥಾಪನೆ; ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮಮತಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇ.14ರಂದು ಬಂಗಾಳದಲ್ಲಿ ರೋಡ್​ ಶೋ ಆಯೋಜಿಸಿದ್ದರು. ಈ ವೇಳೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಮಟ್ಟದ ಮಾರಾಮಾರಿ ನಡೆದಿತ್ತು. ಇದರಲ್ಲಿ ವಿದ್ಯಾಸಾಗರ್ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಬಂಗಾಳದ ಸಮಾಜ ಸುಧಾರಕ ಹಾಗೂ ಲೇಖಕ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸವಾಗಿತ್ತು.

MAshok Kumar | news18
Updated:June 11, 2019, 4:00 PM IST
ಕೋಲ್ಕತ್ತಾದಲ್ಲಿ ವಿದ್ಯಾಸಾಗರ್ ಪ್ರತಿಮೆ ಮರುಸ್ಥಾಪನೆ; ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮಮತಾ
ಈಶ್ವರ ಚಂದ್ರ ವಿದ್ಯಾಸಾಗರ್ ಅವರ ನೂತನ ಪ್ರತಿಮೆಯನ್ನು ಅನಾವರಣಗೊಳಿಸಿದ ಮಮತಾ ಬ್ಯಾನರ್ಜಿ.
  • News18
  • Last Updated: June 11, 2019, 4:00 PM IST
  • Share this:
ಕೋಲ್ಕತ್ತಾ (ಜೂನ್​.11); ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಮಾರಾಮಾರಿಯಿಂದಾಗಿ ಕೋಲ್ಕತ್ತಾದ ವಿದ್ಯಾಸಾಗರ್ ಕಾಲೇಜಿನಲ್ಲಿ ಧ್ವಂಸಗೊಂಡಿದ್ದ ಬಂಗಾಳದ ಸಮಾಜ ಸುಧಾರಕ 'ಈಶ್ವರ ಚಂದ್ರ ವಿದ್ಯಾಸಾಗರ್' ಅವರ ಪ್ರತಿಮೆಯನ್ನು ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮರು ಸ್ಥಾಪಿಸಿದ್ದಾರೆ.

ಪ್ರತಿಮೆ ಸ್ಥಾಪಿಸಿದ ನಂತರ ಮಾತನಾಡಿದ ಮಮತಾ ಬ್ಯಾನರ್ಜಿ, “ಬಿಜೆಪಿ ಪಶ್ಚಿಮ ಬಂಗಾಳ ಸಂಸ್ಕೃತಿಯನ್ನು ಅಲುಗಾಡಿಸಲು ಪ್ರಯತ್ನಿಸುತ್ತಿದೆ. ಆದರೆ, ಅದು ಪ್ರತಿಮೆಯನ್ನು ಧ್ವಂಸಗೊಳಿಸಿದಷ್ಟು ಸುಲಭವಲ್ಲ. ನೆನಪಿರಲಿ ಇದು ಬಂಗಾಳ, ಗುಜರಾತ್ ಅಲ್ಲ” ಎಂದು ಕೇಸರಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗುಡುಗಿದ್ದಾರೆ.

ಇದನ್ನೂ ಓದಿ : ಮೋದಿ-ದೀದಿ ಮಧ್ಯೆ ‘ಕೋಲ್’ ಜಟಾಪಟಿ: ಪ್ರಧಾನಿಗೆ 100 ‘ಉಟ್ ಬಸ್ಕಿ’ ಸವಾಲು ಹಾಕಿದ ಮಮತಾ ಬ್ಯಾನರ್ಜಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೇ.14ರಂದು ಬಂಗಾಳದಲ್ಲಿ ರೋಡ್​ ಶೋ ಆಯೋಜಿಸಿದ್ದರು. ಈ ವೇಳೆ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಮಟ್ಟದ ಮಾರಾಮಾರಿ ನಡೆದಿತ್ತು. ಇದರಲ್ಲಿ ವಿದ್ಯಾಸಾಗರ್ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದ ಬಂಗಾಳದ ಸಮಾಜ ಸುಧಾರಕ ಹಾಗೂ ಲೇಖಕ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸವಾಗಿತ್ತು.

ಈ ಘಟನೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ನಡೆದು ಸರಿಯಾಗಿ ಒಂದು ತಿಂಗಳಿಗೆ ಅದೇ ಜಾಗದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಮರುಸ್ಥಾಪಿಸಿದ್ದಾರೆ.

ಈ ಘಟನೆಯ ನಂತರ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, “ಪ್ರತಿಮೆ ಧ್ವಂಸದ ಕುರಿತು ಟಿಎಂಸಿ ಕಾರ್ಯಕರ್ತರನ್ನು ದೂರಿ ಆರೋಪಸಿದ್ದರು. ಅಲ್ಲದೆ ನಾವು ಈಶ್ವರ ಚಂದ್ರ ವಿದ್ಯಾಸಾಗರ್ ಅವರ ತತ್ವಾದರ್ಶಗಳಿಗೆ ಬದ್ಧರಾಗಿದ್ದು, ಪ್ರತಿಮೆ ಧ್ವಂಸಗೊಂಡ ಸ್ಥಳದಲ್ಲಿ ಹೊಸ ಪ್ರತಿಮೆ ಸ್ಥಾಪಿಸಿಕೊಡುವುದಾಗಿ” ತಿಳಿಸಿದ್ದರು.

ಇದನ್ನೂ ಓದಿ : ಧೈರ್ಯವಿದ್ದರೆ ಮೋದಿ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ; ಪ್ರಧಾನಿಗೆ ಮಮತಾ ಬ್ಯಾನರ್ಜಿ ಸವಾಲುಆದರೆ, ನರೇಂದ್ರ ಮೋದಿಯ ಮಾತನ್ನು ನಿರಾಕರಿಸಿದ್ದ ಮಮತಾ ಬ್ಯಾನರ್ಜಿ, “ಬಂಗಾಳದಲ್ಲಿ ಒಂದು ಪ್ರತಿಮೆ ನಿರ್ಮಿಸಲು ಬೇಕಾದಷ್ಟು ಹಣ ಇದೆ. ಇಲ್ಲಿ ವಿದ್ಯಾಸಾಗರ್ ಪ್ರತಿಮೆ ನಿರ್ಮಿಸಲು ಮೋದಿ ಹಣ ಕೊಡುತ್ತೇನೆ ಎನ್ನುತ್ತಾರೆ. ನಮಗೇಕೆ ಬೇಕು ಅವರ ಹಣ. ಬಂಗಾಳದಲ್ಲಿ ಸಾಕಷ್ಟು ಸಂಪನ್ಮೂಲ ಇದೆ” ಎಂದು ಖಾರವಾಗಿ ನುಡಿದಿದ್ದರು. ಅಲ್ಲದೆ ಬಿಜೆಪಿಗರಿಗೆ ಪ್ರತಿಮೆಗಳನ್ನು ಕೆಡವುವುದು ಅಷ್ಟು ಕಷ್ಟದ ಕೆಲಸವೇನಲ್ಲ ಅದು ಅವರ ಸಂಸ್ಕೃತಿ ಎಂದು ತ್ರಿಪುರದಲ್ಲಿ ಲೆನಿನ್ ಪ್ರತಿಮೆಯನ್ನು ಕೆಡವಿದ ಉದಾಹರಣೆಯನ್ನು ನೀಡುವ ಮೂಲಕ ಕಿಡಿಕಾರಿದ್ದರು.

First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ