ಮಮತಾ ಬ್ಯಾನರ್ಜಿ ಪ್ರತಿವರ್ಷ ಕುರ್ತಾ ಉಡುಗೊರೆ ನೀಡುತ್ತಾರೆ; ಅಕ್ಷಯ್​ಕುಮಾರ್​ ಜೊತೆ ಸಂದರ್ಶನದಲ್ಲಿ ಮೋದಿ ಬಿಚ್ಚಿಟ್ಟ ರಹಸ್ಯ!

1962ರ ಯುದ್ಧದ ಸಮಯದಲ್ಲಿ ನಾನು ಮೆಹಸಾನ ರೈಲ್ವೆ ನಿಲ್ದಾಣದಲ್ಲಿ ಸೈನಿಕರು ರೈಲು ಹತ್ತುವುದನ್ನು ನೋಡಿದ್ದೆ. ಮತ್ತು ಅವರ ತ್ಯಾಗ ನನ್ನನ್ನು ಸೇನೆಗೆ ಸೇರುವಂತೆ ಪ್ರೇರೇಪಿಸಿತು ಎಂದು ಹೇಳಿಕೊಂಡಿದ್ದಾರೆ. 

HR Ramesh | news18
Updated:April 24, 2019, 12:08 PM IST
ಮಮತಾ ಬ್ಯಾನರ್ಜಿ ಪ್ರತಿವರ್ಷ ಕುರ್ತಾ ಉಡುಗೊರೆ ನೀಡುತ್ತಾರೆ; ಅಕ್ಷಯ್​ಕುಮಾರ್​ ಜೊತೆ ಸಂದರ್ಶನದಲ್ಲಿ ಮೋದಿ ಬಿಚ್ಚಿಟ್ಟ ರಹಸ್ಯ!
ಪ್ರಧಾನಿ ಮೋದಿ ಸಂದರ್ಶನ ಮಾಡಿದ ನಟ ಅಕ್ಷಯ್ ಕುಮಾರ್
  • News18
  • Last Updated: April 24, 2019, 12:08 PM IST
  • Share this:
ನವದೆಹಲಿ: ಬಾಲಿವುಡ್ ನಟ ಅಕ್ಷಯ್​ ಕುಮಾರ್ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಧಾನಿ, ವಿರೋಧ ಪಕ್ಷಗಳಲ್ಲಿ ನನಗೆ ಹಲವು ಗೆಳೆಯರಿದ್ದಾರೆ. ರಾಜಕೀಯವಾಗಿ ನನ್ನ ಕಟುವಾಗಿ ಟೀಕೆ ಮಾಡುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಲೂ ನನಗೆ ಪ್ರತಿವರ್ಷ 'ಕುರ್ತಾ' ಕಳುಹಿಸಿಕೊಡುತ್ತಾರೆ ಎಂದು ಹೇಳಿದ್ದಾರೆ.

ಚುನಾವಣೆ ಸಮಯದಲ್ಲಿ ಇದು ನನಗೆ ಪರಿಣಾಮ ಬೀರಬಹುದು. ಆದರೆ, ಮಮತಾ ಬ್ಯಾನರ್ಜಿ ನನಗೆ ಪ್ರತಿವರ್ಷ ಕುರ್ತಾವನ್ನು ಉಡುಗೊರೆಯಾಗಿ ನೀಡುವ ವಿಷಯವನ್ನು ಮರೆಮಾಚಲಾರೆ. ಬಾಂಗ್ಲಾದೇಶದ ಪ್ರಧಾನಿ ಶೈಕ್​ ಹಸೀನಾ ಅವರು ನನಗೆ ಪ್ರತಿವರ್ಷ ಬೆಂಗಾಲಿ ಸಿಹಿಯನ್ನು ಉಡುಗೊರೆ ನೀಡುವ ವಿಚಾರ ತಿಳಿದ ನಂತರದಿಂದ ಮಮತಾ ಅವರೂ ಉಡುಗೊರೆ ನೀಡಲು ಆರಂಭಿಸಿದರು ಎಂದು ಪ್ರಧಾನಿ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಅಲ್ಲದೇ ಮೋದಿ ಅವರು ತಮ್ಮ ಬಾಲ್ಯದ ಕನಸ್ಸನ್ನು ಹಂಚಿಕೊಂಡಿದ್ದಾರೆ. ಅವರು ಎಂದಿಗೂ ಪ್ರಧಾನಿ ಕುರ್ಚಿಯ ಮೇಲೆ ಕೂರಬೇಕು ಎಂದು ಆಸೆಪಟ್ಟಿರಲಿಲ್ಲವಂತೆ. ಸೇನೆಗೆ ಸೇರಬೇಕು ಎಂಬುದು ಅವರ ಹೆಬ್ಬಯಕೆ ಆಗಿತ್ತಂತೆ. 1962ರ ಯುದ್ಧದ ಸಮಯದಲ್ಲಿ ನಾನು ಮೆಹಸಾನ ರೈಲ್ವೆ ನಿಲ್ದಾಣದಲ್ಲಿ ಸೈನಿಕರು ರೈಲು ಹತ್ತುವುದನ್ನು ನೋಡಿದ್ದೆ. ಮತ್ತು ಅವರ ತ್ಯಾಗ ನನ್ನನ್ನು ಸೇನೆಗೆ ಸೇರುವಂತೆ ಪ್ರೇರೇಪಿಸಿತು ಎಂದು ಹೇಳಿಕೊಂಡಿದ್ದಾರೆ.


Loading...
ರಾಜಕೀಯ ನಿವೃತ್ತಿ ಬಳಿಕ ಮುಂದಿನ ಯೋಚನೆ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಕೆಲವು ಯೋಜನೆಗಳಲ್ಲಿ ಜವಾಬ್ದಾರಿ ವಹಿಸಿಕೊಂಡೇ ಇರುತ್ತೇನೆ ಎಂದು ಹೇಳಿದ್ದಾರೆ.


First published:April 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...