ದಾರಿ ತಪ್ಪಿದ ಮಮತಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​; ಅರ್ಧ ಗಂಟೆ ತಡವಾಗಿ ನಿಗದಿತ ಸ್ಥಳ ತಲುಪಿದ ದೀದಿ

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ನನ್ನನ್ನು ಕ್ಷಮಿಸಿ. ಏಕೆಂದರೆ ಈ ಸ್ಥಳದ ಮಾರ್ಗವನ್ನು ಗುರುತಿಸಲು ಪೈಲೆಟ್​ ವಿಫಲರಾದರು. ಸಿಲ್ಲಿಗುರಿಯಿಂದ ಇಲ್ಲಿಗೆ ಬರಲು 22 ನಿಮಿಷ ಸಾಕು. ಆದರೆ, ಮಾರ್ಗ ತಪ್ಪಿದ್ದರಿಂದ ನಾನು ಇಲ್ಲಿಗೆ ಬರಲು 55 ನಿಮಿಷ ಹಿಡಿಯಿತು ಎಂದು ತಿಳಿಸಿದರು.

news18
Updated:April 10, 2019, 5:07 PM IST
ದಾರಿ ತಪ್ಪಿದ ಮಮತಾ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​; ಅರ್ಧ ಗಂಟೆ ತಡವಾಗಿ ನಿಗದಿತ ಸ್ಥಳ ತಲುಪಿದ ದೀದಿ
ಮಮತಾ ಬ್ಯಾನರ್ಜಿ
news18
Updated: April 10, 2019, 5:07 PM IST
ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್​ ದಾರಿ ತಪ್ಪಿ, ಆತಂಕ ಮೂಡಿಸಿದ ಘಟನೆ ಇಂದು ನಡೆದಿದೆ.

ಚುನಾವಣಾ ಪ್ರಚಾರದಲ್ಲಿ ಹಿನ್ನೆಲೆಯಲ್ಲಿ ಉತ್ತರ ದಿನಜ್​ಪುರ್​ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲು ಮಮತಾ ಬ್ಯಾನರ್ಜಿ ಅವರು ಹೆಲಿಕಾಪ್ಟರ್​ನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ದಾರಿ ತಪ್ಪಿದೆ. ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಮಮತಾ ಬ್ಯಾನರ್ಜಿ ಮಧ್ಯಾಹ್ನ 1.05ಕ್ಕೆ ಸಿಲ್ಲಿಗುರಿ ಪ್ರದೇಶದಿಂದ ಹೆಲಿಕಾಪ್ಟರ್​ನಿಂದ ಹೊರಟು, ಉತ್ತರ ದಿನಜ್​ಪುರದ ಛೋಪ್ರಾಗೆ ಮಧ್ಯಾಹ್ನ 1.27ಕ್ಕೆ ಆಗಮಿಸಬೇಕಿತ್ತು. ಆದರೆ, ದಾರಿ ತಪ್ಪಿ ಕೊನೆಗೆ 2 ಗಂಟೆಗೆ ನಿಗದಿತ ಸ್ಥಳಕ್ಕೆ ಹೆಲಿಕಾಪ್ಟರ್ ಆಗಮಿಸಿತು.

ಇದನ್ನು ಓದಿ: ‘ಒಂದು ವೇಳೆ ಹಿಟ್ಲರ್​ ಬದುಕಿದ್ದಿದ್ದರೆ ಮೋದಿ ಚಟುವಟಿಕೆ ನೋಡಿ ಆತನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ!’: ಮಮತಾ ಬ್ಯಾನರ್ಜಿ


Loading...

ಮೂಲಗಳ ಪ್ರಕಾರ, ತಪ್ಪಿನಿಂದಾಗಿ ಹೆಲಿಕಾಪ್ಟರ್​ ಬಿಹಾರಕ್ಕೆ ಹೋಗಿದೆ. ಆದರೆ, ಹಲವು ಸುತ್ತುಗಳ ಮಾತುಕತೆ ನಡೆದಿದೆ. ಆನಂತರ ಪೈಲೆಟ್​ 30 ನಿಮಿಷ ತಡವಾಗಿ ನಿಗದಿತ ಜಾಗದಲ್ಲಿ ಹೆಲಿಕಾಪ್ಟರ್​ಅನ್ನು ಲ್ಯಾಂಡ್ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಝಡ್​ ಪ್ಲಸ್​ ಶ್ರೇಣಿಯ ಭದ್ರತೆ ಹೊಂದಿದ್ದಾರೆ.


First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626