TMC Entry to Goa: ಬಂಗಾಳದಂತೆ ಗೋವಾದಲ್ಲೂ ದೀದಿ-ಪ್ರಶಾಂತ್ ಕಿಶೋರ್ ಜಾದು ನಡೆಯುತ್ತಾ? ಬಿಜೆಪಿಗೆ ಮತ್ತೆ ಸೆಡ್ಡು?

ಮಮತಾ ಬ್ಯಾನರ್ಜಿ ಮಾತ್ರ ಬಿಜೆಪಿಯನ್ನು ಕಟ್ಟಿ ಹಾಕಬಲ್ಲರು ಎಂಬುವುದನ್ನು ದೇಶಾದ್ಯಂತ ಪ್ರಚಾರ ಮಾಡಲು ಟಿಎಂಸಿ ಪ್ರಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೀದಿ-ಪ್ರಶಾಂತ್ ಕಿಶೋರ್

ದೀದಿ-ಪ್ರಶಾಂತ್ ಕಿಶೋರ್

  • Share this:
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ(West Bengal Chief Minister Mamata Banerjee) ಹಾಗೂ ಚುನಾವಣಾ ರಣತಂತ್ರ ತಜ್ಞ ಪ್ರಶಾಂತ್​ ಕಿಶೋರ್​​ ಪ್ಲಾನ್(Prashant Kishor) ಅದ್ಬುತ ಫಲ ನೀಡಿದ್ದು ಈಗ ಇತಿಹಾಸ. ಬಿಜೆಪಿ ವಿರುದ್ಧ ಜಯಭೇರಿ ಬಾರಿಸಿದ ಟಿಎಂಸಿ ಈಗ ಗೋವಾದತ್ತ ಮುಖ ಮಾಡಿದೆ. ಮುಂಬರುವ ಗೋವಾ ವಿಧಾನಸಭೆ ಚುನಾವಣೆ (Goa Assembly elections)ಸಂಬಂಧ ಮತ್ತೆ ದೀದಿ-ಪ್ರಶಾಂತ್​ ಕಿಶೋರ್​ ಒಂದಾಗಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೋವಾಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಬಿಜೆಪಿಯನ್ನು ಎದುರಿಸಲು ನೋಡುತ್ತಿದೆ ಎಂಬ ಚರ್ಚೆಗೆ ಕಾರಣವಾಗಿದೆ.

ಫೀಲ್ಡಿಗಿಳಿದೆಯಂತೆ ಪ್ರಶಾಂತ್​ ಕಿಶೋರ್​ ಟೀಂ

ಗೋವಾದಲ್ಲಿ ಫೆಬ್ರವರಿ 2022 ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ರಾಜ್ಯದಲ್ಲಿ 40 ವಿಧಾನಸಭಾ ಸ್ಥಾನಗಳಿವೆ ಮತ್ತು ಪ್ರಸ್ತುತ ಬಿಜೆಪಿ ಆಡಳಿತದಲ್ಲಿದೆ. ಟಿಎಂಸಿ ಕರಾವಳಿ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಲು ಯೋಜಿಸುತ್ತಿದೆ. ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪಿಎಸಿ) ಯ 200 ಜನರ ತಂಡವು ಪಕ್ಷಕ್ಕಾಗಿ ಗೋವಾದಲ್ಲಿ ಕೆಲಸ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, ಟಿಎಂಸಿ 2024 ರ ಲೋಕಸಭಾ ಚುನಾವಣೆಗೆ ಮುನ್ನ ದೇಶದ ಇತರ ಭಾಗಗಳಲ್ಲಿ ಪಕ್ಷದ ಪ್ರಭಾವವನ್ನು ವಿಸ್ತರಿಸುವ ಯೋಜನೆಗಳ ಬಗ್ಗೆ ಮಾತನಾಡಿದೆ. ಗೋವಾದಲ್ಲಿನ ಗ್ರೌಂಡ್​​​ ರಿಪೋರ್ಟ್​​ಗಾಗಿ ಟಿಎಂಸಿ ತನ್ನ ಸಂಸದರ ತಂಡವನ್ನು ಗೋವಾಕ್ಕೆ ಕಳುಹಿಸಬಹುದು ಎನ್ನಲಾಗುತ್ತಿದೆ.

ಬಿಜೆಪಿಯನ್ನು ಕಟ್ಟಿ ಹಾಕಲು ದೀದಿಗೆ ಮಾತ್ರ ಸಾಧ್ಯ..!

ದೀದಿ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ಗೋವಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಚುನಾವಣಾ ಪ್ರಚಾರವನ್ನು ಆರಂಭಿಸಲು ಪಕ್ಷದ ವರಿಷ್ಠರು ನಂತರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಟಿಎಂಸಿ ಗೋವಾವನ್ನು ಎಂಟ್ರಿ ಬಗ್ಗೆ ಕೇಳಿದಾಗ, ಪಕ್ಷವು ಬಂಗಾಳದಲ್ಲಿ ಬೇರೂರಿದೆ ಮತ್ತು ಕರಾವಳಿ ರಾಜ್ಯದಲ್ಲಿ ಯಾವುದೇ ಅಸ್ತಿತ್ವವನ್ನು ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.  ಟಿಎಂಸಿಯ ಕಾರ್ಯತಂತ್ರದ ಬಗ್ಗೆ ಮಾತನಾಡುತ್ತಾ, ಗೋವಾ ಜನರು ಮತ ಹಾಕಿದರೆ ಮಾತ್ರ ಅವರು ಬಿಜೆಪಿಯನ್ನು ಹೊರಹಾಕಬಹುದು ಎಂದು ಪಕ್ಷದ ಮೂಲಗಳು ಹೇಳಿವೆ. ಮಮತಾ ಬ್ಯಾನರ್ಜಿ ಮಾತ್ರ ಬಿಜೆಪಿಯನ್ನು ಕಟ್ಟಿ ಹಾಕಬಲ್ಲರು ಎಂಬುವುದನ್ನು ದೇಶಾದ್ಯಂತ ಪ್ರಚಾರ ಮಾಡಲು ಪಕ್ಷ ಪ್ರಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಗೋವಾ ಮೇಲೆ ಕ್ರೇಜಿವಾಲ್​ ಕಣ್ಣು

ಈ ಮಧ್ಯೆ ದೆಹಲಿಯ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ (ಎಎಪಿ) ಕೂಡ ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತ್ತು ಗೋವಾದಲ್ಲಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೆಪ್ಟೆಂಬರ್ 21 ರಂದು ಮಾಪುಸಾ ಪಟ್ಟಣದಲ್ಲಿದ್ದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೇಜ್ರಿವಾಲ್ ಅವರು 2022 ರ ಚುನಾವಣೆಯಲ್ಲಿ ಗೋವಾದಲ್ಲಿ ಅಧಿಕಾರಕ್ಕೆ ಬಂದರೆ, ಅವರ ಪಕ್ಷವು ಖಾಸಗಿ ವಲಯ ಸೇರಿದಂತೆ 80 ಪ್ರತಿಶತ ಉದ್ಯೋಗಗಳನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Massive Heroine Haul: ಗುಜರಾತ್ ಬಂದರ್ ಮೂಲಕ ಭಾರೀ ಪ್ರಮಾಣದ ಮಾದಕವಸ್ತು ಸಾಗಾಟ: ಕೇಂದ್ರದತ್ತ ಕಾಂಗ್ರೆಸ್ ಬೊಟ್ಟು

ಸ್ಥಳೀಯ ಜನರಿಗೆ ಮೀಸಲು ಗೋವಾದಲ್ಲಿ ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬ ನಿರುದ್ಯೋಗಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಮತ್ತು ಉದ್ಯೋಗವಿಲ್ಲದ ಯುವಕರಿಗೆ ಉದ್ಯೋಗ ದೊರೆಯುವವರೆಗೆ ಮಾಸಿಕ 3,000 ರೂ.  ನೀಡಲಾಗುವುದು ಎಂದು ತಿಳಿಸಿದ್ದರು. ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಕೇಜ್ರಿವಾಲ್ ಗೋವಾಕ್ಕೆ ಭೇಟಿ ನೀಡಿದ್ದರು. ಜುಲೈ ಭೇಟಿ ವೇಳೆ ದೆಹಲಿ ಸಿಎಂ ಗೋವಾದಲ್ಲಿ ಚುನಾವಣೆಯ ನಂತರ ಸರ್ಕಾರವನ್ನು ರಚಿಸಿದರೆ ಜನರಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದರು.
Published by:Kavya V
First published: