ಮಮತಾ ಬ್ಯಾನರ್ಜಿ ಅರ್ಧ ಲಕ್ಷಕ್ಕೂ ಅಧಿಕ ಮತಗಳಿಂದ ಸೋಲುತ್ತಾರೆ, ಇಲ್ಲವಾದಲ್ಲಿ ರಾಜಕೀಯ ತೊರೆಯುತ್ತೇನೆ; ಸುವೇಂದು ಅಧಿಕಾರಿ

ತೃಣಮೂಲ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ತಮ್ಮ ಆಪ್ತ ಸುವೇಂದು ಅಧಿಕಾರಿ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ನಂದಿಗ್ರಾಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದರು. 

ಸುವೇಂದು ಅಧಿಕಾರಿ

ಸುವೇಂದು ಅಧಿಕಾರಿ

 • Share this:
  ಕಲ್ಕತ್ತಾ (ಪಶ್ಚಿಮಬಂಗಾಳ); ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನದಿಗ್ರಾಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಘೋಷಣೆ ಮಾಡಿದ್ದಾರೆ. ಅವರು ಘೋಷಣೆ ಮಾಡಿದ ಗಂಟೆಯೊಳಗೆ ಪ್ರತಿಕ್ರಿಯೆ ನೀಡಿರುವ ಈ ಭಾಗದ ಪ್ರಭಾವಿ ಬಿಜೆಪಿಯ ಸುವೇಂದು ಅಧಿಕಾರಿ ಅವರು, ಚುನಾವಣೆ ಸಮಯದಲ್ಲಿ ಮಾತ್ರ ಅವರಿಗೆ ನಂದಿಗ್ರಾಂ ನೆನಪಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

  ಚುನಾವಣೆ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ನಂದಿಗ್ರಾಂ ನೆನಪಿಗೆ ಬಂದಿದೆ. ಅವರು ನಂದಿಗ್ರಾಂಗೆ ಏನು ಮಾಡಿದ್ದಾರೆ? ಈ ಕ್ಷೇತ್ರ ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನಿಮ್ಮ ಭ್ರಷ್ಟ ಸೋದರಳಿಯ ಮತ್ತು ನಿಮ್ಮ ಖಾಸಗಿ ಸಂಸ್ಥೆ ಪ್ರಕಟಣೆ ಮಾಡಬಹುದು. ಆದರೆ, ನೀವು ಅರ್ಧ ಲಕ್ಷಕ್ಕೂ ಅಧಿಕ ಮತಗಳಿಂದ ಸೋಲುತ್ತಿರಿ. ನನ್ನ ಮಾತು ಸುಳ್ಳಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಈ ಕ್ಷೇತ್ರದಿಂದ ನಾನೇ ನಿಲ್ಲಲಿ ಅಥವಾ ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದರೂ ಅವರು ಮಮತಾ ಬ್ಯಾನರ್ಜಿ ಅವರನ್ನು ಅರ್ಧ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸುತ್ತಾರೆ ಎಂದು ಅಧಿಕಾರಿ ಅವರು ಭವಿಷ್ಯ ನುಡಿದರು.

  ಇದನ್ನು ಓದಿ: ಜೆಡಿಎಸ್​ಗೆ ಅವಕಾಶ ಕೊಟ್ಟರೆ ಪಂಚರತ್ನ ಯೋಜನೆ ಜಾರಿ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

  ತೃಣಮೂಲ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ತಮ್ಮ ಆಪ್ತ ಸುವೇಂದು ಅಧಿಕಾರಿ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ನಂದಿಗ್ರಾಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದರು.

  ಸುವೇಂದು ಅಧಿಕಾರಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ ಅವರು, ಬಂಗಾಳವನ್ನು ಮಾರಲು ಪಕ್ಷ ತೊರೆದವರಿಗೆ ಧನ್ಯವಾದಗಳು. ತಾವೆಂದು ರಾಜ್ಯವನ್ನು ಬಿಜೆಪಿಗೆ ಮಾರಲು ಬಿಡುವುದಿಲ್ಲ. ನಾನು ಜೀವಂತವಾಗಿರುವವರೆಗೂ ಬಿಜೆಪಿಗೆ ಬಂಗಾಳವನ್ನು ಮಾರಲು ಬಿಡುವುದಿಲ್ಲ ಎಂದಿದ್ದಾರೆ.
  Published by:HR Ramesh
  First published: