Yaas Cyclone: ಯಾಸ್ ಚಂಡಮಾರುತದ ಬಗ್ಗೆ ಪ್ರಧಾನಿ ಮೋದಿ ಜತೆಗೆ ಪರಿಶೀಲನಾ ಸಭೆ ಸಿಎಂ ಮಮತಾ ಬ್ಯಾನರ್ಜಿ ಗೈರು!

ಪ್ರಧಾನಿ ಮೋದಿ ಅವರು ಇಂದು ಬಂಗಾಳದ ಕಲೈಕುಂಡದಲ್ಲಿ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನ್ಖರ್, ಕಲೈಕುಂಡದಲ್ಲಿ ವಾಯುಪಡೆಯ ನಿಲ್ದಾಣದ ಮುಖ್ಯಸ್ಥರು ಪ್ರಧಾನಿ ಅವರನ್ನು ಬರಮಾಡಿಕೊಂಡರು. ಬಳಿಕ ಯಾಸ್ ಚಂಡಮಾರುತ ಹಾನಿ ಉಂಟು ಮಾಡಿರುವ ಸ್ಥಳಗಳ ವೈಮಾನಿಕ ಸಮೀಕ್ಷೆಗೆ ತೆರಳಿದರು.

ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ

ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ

  • Share this:
    ಶುಕ್ರವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪಶ್ಚಿಮ ಮಿಡ್ನಾಪುರ್​ನಲ್ಲಿ ನಡೆದ ಯಾಸ್ ಚಂಡಮಾರುತ ಪರಿಶೀಲನಾ ಸಭೆಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾಗವಹಿಸುತ್ತಿಲ್ಲ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಖಾರ್, ಬಿಜೆಪಿ ಮುಖಂಡ ಸುವೇಂಧು ಅಧಿಕಾರಿ, ರಾಜ್ಯ ನೀರಾವರಿ ಸಚಿವ ಸೌಮೆನ್ ಮಹಾಪಾತ್ರ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ದಕ್ಷಿಣ 23 ಪಾರಾಗಣ ಜಿಲ್ಲೆಯ ಸಾಗರ್ ಐಸ್​ಲ್ಯಾಂಡ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ಮೋದಿ ಅವರು ಕರೆದಿರುವ ಯಾಸ್ ಚಂಡಮಾರುತದ ಪರಿಶೀಲನಾ ಸಭೆಗೆ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಕಲೈಕುಂಡಗೆ ತಲುಪಲು 45 ನಿಮಿಷ ತಗುಲುತ್ತದೆ. ಅದಕ್ಕಾಗಿ ನಾನು ಬಂಗಾಳದಲ್ಲಿ ಯಾಸ್ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಸಿದ್ದಪಡಿಸಿದ್ದೇಣೆ. ಇದನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸುತ್ತೇನೆ ಎಂಧು ಹೇಳಿದ್ದಾರೆ.

    ಆದರೆ, ಚಂಡಮಾರುತ ಪರಿಶೀಲನಾ ಸಭೆಯ ನಂತರ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರೊಂದಿಗೆ 10-15 ನಿಮಿಷಗಳ ಕಾಲ ಕಲೈಕುಂಡದಲ್ಲಿ ಒನ್ ಟು ಒನ್ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


    ಚಂಡಮಾರುತದ ಪರಿಶೀಲನಾ ಸಭೆಗೆ ಹಾಜರಾಗದ ಕಾರಣ ಮಮತಾ ಬ್ಯಾನರ್ಜಿ ಅವರ ವಿರುದ್ಧ ಬಿಜೆಪಿ ಮುಖಂಡ ಅಮಿತ್ ಮಾಲ್ವಿಯಾ ಅವರು ಹರಿಹಾಯ್ದಿದ್ದಾರೆ, “ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಉತ್ಸಾಹಭರಿತರಾಗಿದ್ದಾರೆ. ಸುವೇಂದು ಅಧಿಕಾರಿಯವರ ಕೈಯಲ್ಲಿ ನಂದಿಗ್ರಾಮದ ಸೋಲು ಇನ್ನೂ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಂದು, ಪ್ರಧಾನ ಮಂತ್ರಿ ಮೋದಿ ಅವರು ರಾಜ್ಯದಲ್ಲಿ ಯಾಸ್ ಚಂಡಮಾರುತ ಸೃಷ್ಟಿಸಿರುವ ಹಾನಿಯ ಕುರಿತಾಗಿ ಪರಿಶೀಲನಾ ಸಭೆ ನಡೆಸುತ್ತಿದ್ದು, ಈ ಸಭೆಯಲ್ಲಿ ಗೌರವಾನ್ವಿತ ರಾಜ್ಯಪಾಲರು, ಕೇಂದ್ರ ಮಂತ್ರಿಗಳು ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಸಿಎಂ ಆಗಿರುವ ಬ್ಯಾನರ್ಜಿ ಅವರು ಮಾತ್ರ ಪಾಲ್ಗೊಳ್ಳುತ್ತಿಲ್ಲ. ಇದು ಅವರ ಕೀಳು ರಾಜಕಾರಣ ತೋರಿಸುತ್ತದೆ ಎಂದು ಬ್ಯಾನರ್ಜಿ ವಿರುದ್ಧ ಆರೋಪಿಸಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತ ಭಾರಿ ಹಾನಿ ಉಂಟು ಮಾಡಿರುವುದರಿಂದ ಪ್ರಧಾನಿ ಮೋದಿ ಅವರು ಇಂದು ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

    ಇದಕ್ಕೂ ಹಿಂದಿನ ದಿನ, ಪ್ರಧಾನಿ ಮೋದಿ ಅವರು ಭುವನೇಶ್ವರಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಒಡಿಶಾದ ಬಾಲಸೋರ್ ಮತ್ತು ಭದ್ರಾಕ್​ನಲ್ಲಿ ವೈಮಾನಿಕ ಸಮೀಕ್ಷೆ ನಡೆಸುವ ಮುನ್ನ ಪರಿಹಾರ ಕಾರ್ಯಾಚರಣೆಗಳ ಬಗ್ಗೆ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.

    ಇದನ್ನು ಓದಿ: 2 DG Drug: ಡಿಆರ್​ಡಿಒ ಅಭಿವೃದ್ಧಿಪಡಿಸಿರುವ 2 ಡಿಜಿ ಕೋವಿಡ್ ಔಷಧ ಪ್ರತಿ ಪ್ಯಾಕೆಟ್​ಗೆ 990 ರೂ. ಸರ್ಕಾರಿ ಆಸ್ಪತ್ರೆಯಲ್ಲಿ ರಿಯಾಯಿತಿ

    ಪ್ರಧಾನಿ ಮೋದಿ ಅವರು ಇಂದು ಬಂಗಾಳದ ಕಲೈಕುಂಡದಲ್ಲಿ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನ್ಖರ್, ಕಲೈಕುಂಡದಲ್ಲಿ ವಾಯುಪಡೆಯ ನಿಲ್ದಾಣದ ಮುಖ್ಯಸ್ಥರು ಪ್ರಧಾನಿ ಅವರನ್ನು ಬರಮಾಡಿಕೊಂಡರು. ಬಳಿಕ ಯಾಸ್ ಚಂಡಮಾರುತ ಹಾನಿ ಉಂಟು ಮಾಡಿರುವ ಸ್ಥಳಗಳ ವೈಮಾನಿಕ ಸಮೀಕ್ಷೆಗೆ ತೆರಳಿದರು. ಇದಾದ ಬಳಿಕ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

    ಏತನ್ಮಧ್ಯೆ, ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಸಹ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರೊಂದಿಗೆ, ಬ್ಯಾನರ್ಜಿ ಅವರು ಹಿಂಗಲ್‌ಗಂಜ್, ಹಸ್ನಾಬಾದ್, ಸಂದೇಶ್ಖಾಲಿ, ಪಿನಾಖಾ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿನ ಚಂಡಮಾರುತದ ನಂತರದ ಪರಿಸ್ಥಿತಿಯನ್ನು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದರು.
    Published by:HR Ramesh
    First published: