HOME » NEWS » National-international » MAMATA BANERJEE SPREADING LIES ABOUT ATTACK BJP SAYS WILL COMPLAIN TO POLL BODY MAK

Mamata Banerjee: ಹಲ್ಲೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸುಳ್ಳು ಹರಡುತ್ತಿದ್ದಾರೆ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ದಾಳಿಯ ಬಗ್ಗೆ ನಾವು ಉನ್ನತ ಮಟ್ಟದ ತನಿಖೆ ಬಯಸುತ್ತೇವೆ, ದಾಳಿ ಹೇಗೆ ಸಂಭವಿಸಿತು? ಯಾರು ಹೊಣೆಗಾರರು..? ಘಟನೆ ನಡೆದಾಗ ರಕ್ಷಣೆ ನೀಡಬೇಕಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಬಂಗಾಳ ಬಿಜೆಪಿ ಉಪಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ಹೇಳಿದ್ದಾರೆ.

news18-kannada
Updated:March 11, 2021, 4:49 PM IST
Mamata Banerjee: ಹಲ್ಲೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸುಳ್ಳು ಹರಡುತ್ತಿದ್ದಾರೆ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಮತಾ ಬ್ಯಾನರ್ಜಿ.
  • Share this:
ಕೋಲ್ಕತ್ತಾ (ಮಾರ್ಚ್​ 11); ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಸುತ್ತ ಪೊಲೀಸ್​ ಬಂದೋಬಸ್ತ್​ ಇಲ್ಲದ ಸಮಯದಲ್ಲಿ ನಾಲ್ಕು ಅಥವಾ ಐದು ಜನರಿಂದ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿತ್ತು. ಈ ಹಲ್ಲೆಯಿಂದ ಅವರ ಕಾಲಿನ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ಮತ್ತೆ ಕೋಲ್ಕತ್ತಾಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸರ್ಕಾರಿ ವೈದ್ಯರು ಅವರ ಕಾಲು ಮತ್ತು ಕುತ್ತಿಗೆ ಭಾಗದಲ್ಲಿ ತೀವ್ರತರವಾದ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಇದು ಯೋಚಿತ ದಾಳಿ ಎಂದು ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಘಟಕ "ಈ ರಾಜಕೀಯಕ್ಕಾಗಿ ದಾಳಿಯ ಬಗ್ಗೆ ಮಮತಾ ಬ್ಯಾನರ್ಜಿ ಸುಳ್ಳು ಹರಡುತ್ತಿದ್ದಾರೆ. ಹಾಗಾಗಿ ಚುನಾವಣಾ ಆಯೋಗಕ್ಕೆ ಈ ಕುರಿತು ಪಶ್ಚಿಮ ಬಂಗಾಳ ಬಿಜೆಪಿ ದೂರು ನೀಡಲಿದೆ" ಎಂದು ತಿಳಿಸಿದೆ.

ಬಂಗಾಳ ವಿಧಾನಸಭಾ ಚುನಾವಣಾ ಕಣ ದಿನ ದಿನಕ್ಕೂ ರಂಗೇರುತ್ತಿದೆ. ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆ ಮಮತಾ ಬ್ಯಾನರ್ಜಿ ಮೇಲೆ ದಾಳಿಯಾಗಿದ್ದರೆ, ಇಂದು ಬಿಜೆಪಿ ನಾಯಕರ ನಿಯೋಗ ಕೋಲ್ಕತ್ತಾದ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮುಖ್ಯಮಂತ್ರಿಯವರ ಆರೋಪದ ವಿರುದ್ಧ ದೂರು ನೀಡಲು ಮತ್ತು ಪ್ರಕರಣದ ತನಿಖೆ ನಡೆಸಲು ಕೋರುತ್ತೇವೆ ಎಂದಿದೆ.

"ದಾಳಿಯ ಬಗ್ಗೆ ನಾವು ಉನ್ನತ ಮಟ್ಟದ ತನಿಖೆ ಬಯಸುತ್ತೇವೆ, ದಾಳಿ ಹೇಗೆ ಸಂಭವಿಸಿತು? ಯಾರು ಹೊಣೆಗಾರರು..? ಘಟನೆ ನಡೆದಾಗ ರಕ್ಷಣೆ ನೀಡಬೇಕಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ಬಂಗಾಳ ಬಿಜೆಪಿ ಉಪಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ಹೇಳಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ ನಿಯೋಗವೊಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ದಾಳಿಯ ಬಗ್ಗೆ ತಮ್ಮದೇ ಆದ ದೂರು ದಾಖಲಿಸಿದೆ.ಗುರುವಾರ ಬೆಳ್ಳಂಬೆಳಗೆ, ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಮಮತಾ ಆಸ್ಪತ್ರೆಯಲ್ಲಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು "ಮೇ 2 ರ ಭಾನುವಾರದಂದು ಬಂಗಾಳದ ಜನರ ಶಕ್ತಿಯನ್ನು ನೋಡಲು ಬಿಜೆಪಿ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಿ" ಎಂದು ಎಚ್ಚರಿಸಿದ್ದಾರೆ.ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಂಗಾಳ ಬಿಜೆಪಿ, "ಒಬ್ಬ ಪ್ರತ್ಯಕ್ಷದರ್ಶಿಯೂ ಮಮತಾ ಬ್ಯಾನರ್ಜಿಯ ‘ದಾಳಿ ಆರೋಪವನ್ನು ಧೃಡಿಕರಿಸಿದಂತೆ ಕಾಣುತ್ತಿಲ್ಲ. ನಂದಿಗ್ರಾಮದ ಜನರು, ಮಮತಾ ಬ್ಯಾನರ್ಜಿ ತಮ್ಮನ್ನು ದೂಷಿಸಿ ಅಪಖ್ಯಾತಿ ತಂದಿದ್ದಕ್ಕಾಗಿ ಅವರ ಮೇಲೆ ಅಸಮಾಧಾನ ಮತ್ತು ಕೋಪಗೊಂಡಿದ್ದಾರೆ"ಎಂದಿದೆ. ಅಲ್ಲದೆ, ಸ್ಥಳದಿಂದ ಸಾಕ್ಷಿಗಳೆಂದು ಕೆಲವರನ್ನು ಉಲ್ಲೇಖಿಸಿದೆ.

ಇದನ್ನೂ ಓದಿ: Big Breaking: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ, ಗಾಯಗೊಂಡ ದೀದಿ; ಘಟನೆಗೆ ಟಿಎಂಸಿ ಖಂಡನೆ!

ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, "ಇದು ನಿಜವಾದ ಘಟನೆಯೋ ಅಥವಾ ಉತ್ತಮವಾಗಿ ಚಿತ್ರಕಥೆ ಮಾಡಿದ ನಾಟಕವೋ? ಎಂಬುದನನು ಕಾದು ನೋಡಬೇಕಾಗಿದೆ. ರಾಜ್ಯದ ಜನರೂ ಇಂತಹ ನಾಟಕವನ್ನು ಮೊದಲೇ ನೋಡಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
Youtube Video

ಮಮತಾ ಬ್ಯಾನರ್ಜಿ ಮೇಲೆ ನಡೆದಿರುವ ದಾಳಿಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್, ಡಿಎಂಕೆ ನಾಯಕ ಸ್ಟಾಲಿನ್, ಜೆಡಿಯು ಮುಖಂಡ ತೇಜಸ್ವಿ ಯಾದವ್, ಜೆಡಿಎಸ್‌ ಮುಖಂಡ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಖಂಡಿಸಿದ್ದಾರೆ.
Published by: MAshok Kumar
First published: March 11, 2021, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories