ತಾರಕಕ್ಕೇರಿದ ಮೋದಿ-ದೀದಿ ವಾಕ್ಸಮರ; ಪ್ರಧಾನಿಗೆ ಪ್ರಜಾಪ್ರಭುತ್ವದಿಂದ ಬಲವಾದ ಕಪಾಳಮೋಕ್ಷವಾಗಬೇಕು ಎಂದು ಜರಿದ ಮಮತಾ

ನಾನು ರಾಜಕೀಯದಲ್ಲಿ ಈವರೆಗೆ ಯಾರಿಗೂ ತಲೆ ಬಾಗಿಲ್ಲ, ಬಾಗಿಸುವುದೂ ಇಲ್ಲ. ಅಡಿಯಿಂದ ಮುಡಿಯವರೆಗೆ ಸುಳ್ಳು ಹೇಳುವುದು, ಸುಲಿಗೆ ಮಾಡುವುದೇ ಪ್ರಧಾನಿ ಮೋದಿಯ ಕೆಲಸವಾಗಿದೆ. ಇಂತವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಬಲವಾದ ಕಪಾಳಮೋಕ್ಷ ನೀಡಬೇಕು ಎಂದು ಮಮತಾ ಕಿಡಿಕಾರಿದ್ದಾರೆ.

news18
Updated:May 8, 2019, 9:56 AM IST
ತಾರಕಕ್ಕೇರಿದ ಮೋದಿ-ದೀದಿ ವಾಕ್ಸಮರ; ಪ್ರಧಾನಿಗೆ ಪ್ರಜಾಪ್ರಭುತ್ವದಿಂದ ಬಲವಾದ ಕಪಾಳಮೋಕ್ಷವಾಗಬೇಕು ಎಂದು ಜರಿದ ಮಮತಾ
ಮಮತಾ ಬ್ಯಾನರ್ಜಿ
  • News18
  • Last Updated: May 8, 2019, 9:56 AM IST
  • Share this:
ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ವಾಕ್ಸಮರ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ನಿನ್ನೆಯ ಚುನಾವಣಾ ರ್ಯಾಲಿಯಲ್ಲಿ ಮಮತಾ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವ ಬಲವಾದ ಕಪಾಳಮೋಕ್ಷ ನೀಡಬೇಕು ಎಂದು ಹೇಳುವ ಮೂಲಕ ದೀದಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಮುನ್ನುಡಿ ಬರೆದಿದ್ದಾರೆ.

ಮಂಗಳವಾರ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಪ್ರಧಾನಿ ಮೋದಿ, “ತೃಣಮೂಲ ಕಾಂಗ್ರೆಸ್ ಸಿಂಡಿಕೇಟ್ ಪಕ್ಷವಾಗಿದ್ದು, ಮಮತಾ ಸರ್ಕಾರ ಸುಲಿಗೆಯ ಸರ್ಕಾರ” ಎಂದು ಟೀಕಿಸಿದ್ದರು.

ಮೋದಿಯವರ ಈ ಟೀಕೆಗೆ ರಘುನಾಥಪುರದ ಪುರುಲಿಯಾ ಎಂಬಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಟುವಾಗಿ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, “ನಾನು ರಾಜಕೀಯದಲ್ಲಿ ಈವರೆಗೆ ಯಾರಿಗೂ ತಲೆ ಬಾಗಿಲ್ಲ, ಬಾಗಿಸುವುದೂ ಇಲ್ಲ. ಮೋದಿ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಲಿಗೆ ಸರ್ಕಾರ ಎಂದು ಟೀಕಿಸಿದ್ದಾರೆ. ನಾವು ಸುಲಿಗೆಕೋರರು ಎಂದರೆ ಅವರ್ಯಾರು. ಅಡಿಯಿಂದ ಮುಡಿಯವರೆಗೆ ಸುಳ್ಳು ಹೇಳುವುದು, ಸುಲಿಗೆ ಮಾಡುವುದೇ ಪ್ರಧಾನಿ ಮೋದಿಯ ಕೆಲಸವಾಗಿದೆ. ಇಂತವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಬಲವಾದ ಕಪಾಳಮೋಕ್ಷ ನೀಡಬೇಕು” ಎಂದು ಮಮತಾ ಕಿಡಿಕಾರಿದ್ದಾರೆ.

ಇದನ್ನೂ ಓದಿ : 'ಫನಿ ಸೈಕ್ಲೋನ್​​' ಬಗ್ಗೆ ಮೋದಿ ಜತೆ ಚರ್ಚೆಗೆ ದೀದಿ ನಕಾರ; ನಾನೇನು ಸರ್ವೆಂಟ್​​​ ಅಲ್ಲ ಎಂದ ಮಮತಾ ಬ್ಯಾನರ್ಜಿ

ಮೋದಿಯನ್ನು ಸುಳ್ಳುಗಾರ ಎಂದು ಜರಿದಿರುವ ದೀದಿ, “ಪಶ್ಚಿಮ ಬಂಗಾಳಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮೋದಿ ಇಲ್ಲಿ ದುರ್ಗಾ ಪೂಜೆ ಸೇರಿದಂತೆ ಹಿಂದೂಗಳ ಸಂಪ್ರದಾಯ ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಆರೋಪಿಸಿದ್ದಾರೆ. ಈ ಸುಳ್ಳು ಹೇಳಿಕೆಯನ್ನು ನೀವು ನಂಬುತ್ತೀರ? ಇನ್ನೂ ಪಶ್ಚಿಮ ಬಂಗಾಳದಲ್ಲಿ ಜೈಶ್ರೀರಾಮ್ ಎಂಬ ಘೋಷಣೆ ಕೂಗಲು ನಾವು ಅನುಮತಿ ನೀಡುತ್ತಿಲ್ಲ ಎಂದು ನಮ್ಮನ್ನು ಜರಿದಿದ್ದಾರೆ. ಆದರೆ, ನಾವು ಜೈಶ್ರೀರಾಮ್ ಘೋಷಣೆ ಕೂಗುವವರ ಹಿಂದೆ ನಿಲ್ಲುವವರಲ್ಲ, ಬದಲಾಗಿ ಜೈಹಿಂದ್ ಘೋಷಣೆ ಕೂಗುವವರ ಹಿಂದೆ ನಿಲ್ಲುತ್ತೇವೆ. ಹಿಂದೂ ಹಾಗೂ ಮುಸ್ಲೀಮರು ಶಾಂತಿ ಸಹೋದರತ್ವದೊಂದಿಗೆ ಬದುಕುವುದನ್ನು ನಾನು ಕಾಣಲು ಇಚ್ಚಿಸುತ್ತೇನೆ" ಎಂದಿದ್ಧಾರೆ.

ಬಿಜೆಪಿಗೆ ದೇಶಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? : “ಬಿಜೆಪಿ ತನ್ನನ್ನು ರಾಷ್ಟ್ರಭಕ್ತ ಪಕ್ಷ ಎಂದು ಕರೆದುಕೊಳ್ಳುತ್ತದೆ. ಆದರೆ ಮಹಾತ್ಮಾ ಗಾಂಧಿಯನ್ನು ಕೊಂದದ್ದು ಯಾರು? ಗಾಂಧಿಯನ್ನು ಕೊಂದವರು ಯಾರು ಎಂಬುದು ನಮಗೆ ತಿಳಿದಿಲ್ಲ. ಆದರೆ ಆರ್​ಎಸ್​ಎಸ್​ ಕರಸೇವಕ ನಾಥೂರಾಮ ಗೂಡ್ಸೆಯ ಹೆಸರನ್ನು ಕೇಳಿದ್ದೇವೆ. ಇಂತಹ ವ್ಯಕ್ತಿಯನ್ನು ಆರಾಧಿಸುವ ನಿಮ್ಮನ್ನು ನಾವು ಹೇಗೆ ದೇಶಭಕ್ತರು ಎನ್ನುವುದು?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : 'ಒಂದು ವೇಳೆ ಹಿಟ್ಲರ್​ ಬದುಕಿದ್ದಿದ್ದರೆ ಮೋದಿ ಚಟುವಟಿಕೆ ನೋಡಿ ಆತನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ!': ಮಮತಾ ಬ್ಯಾನರ್ಜಿ “ಬಿಜೆಪಿಯಾಗಲಿ ಆರ್​ಎಸ್​ಎಸ್​ ಆಗಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೆ? ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಕೊಡುಗೆ ಏನು? ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರಿಗೆ ಸಹಾಯ ಮಾಡಿದ್ದ ನೀವು, ಗಾಂಧೀಜಿ ನೇತಾಜಿಯನ್ನು ರಾಷ್ಟ್ರ ನಾಯಕರು ಎಂದು ಒಪ್ಪಿಕೊಳ್ಳದ ನೀವು ಈಗ ನಮಗೆ ರಾಷ್ಟ್ರಪ್ರೇಮದ ಪಾಠ ಹೇಳಿಕೊಡಲು ಬರುತ್ತಿದ್ದೀರಿ ನಿಮಗೆ  ನಾಚಿಕೆಯಾಗುವುದಿಲ್ಲವೆ” ಎಂದು ಜರಿದಿದ್ದಾರೆ.

“ರಾಮ ಮಂದಿರದ ಹೆಸರಿನಲ್ಲಿ ರಾಜಕೀಯ ಆರಂಭಿಸಿದ ಬಿಜೆಪಿ ಈವರೆಗೆ ಸಣ್ಣದೊಂದು ರಾಮ ಮಂದಿರವನ್ನೂ ನಿರ್ಮಾಣ ಮಾಡಿಲ್ಲ. 2014ರಲ್ಲಿ ನೀಡಿದ ಅಚ್ಚೆದಿನದ ಆಶ್ವಾಸನೆ ಈವರೆಗೆ ಈಡೇರಿಲ್ಲ. ರಾಷ್ಟ್ರಾದ್ಯಂತ 12,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 5 ವರ್ಷದಲ್ಲಿ 3 ಕೋಟಿ ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ನರೇಂದ್ರ ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗುವುದು ದುಸ್ಸಾಧ್ಯ. ಅಲ್ಲದೆ ದೆಹಲಿಯಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ನಮ್ಮ ಬೆಂಬಲ ಇದೆ" ಎಂದು ಅವರು ತಿಳಿಸಿದ್ದಾರೆ.

First published: May 8, 2019, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading