HOME » NEWS » National-international » MAMATA BANERJEE SAYS I WOULD RATHER SLIT MY THROAT RATHER THAN BOW MY HEAD BEFORE THE BJP SESR

ಬಿಜೆಪಿ ಮುಂದೆ ಬಾಗುವುದಕ್ಕಿಂತ ಕತ್ತು ಸೀಳಿಕೊಳ್ಳುವುದು ಲೇಸು; ಮಮತಾ ಬ್ಯಾನರ್ಜಿ

ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೊಳಗಿದ ಜೈ ಶ್ರೀರಾಮ್​ ಘೋಷಣೆಗಳು ಬಂಗಾಳಕ್ಕೆ ಮಾಡಿದ ಅಪಮಾನ ಎಂದು ಸಿಎಂ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ

news18-kannada
Updated:January 25, 2021, 3:48 PM IST
ಬಿಜೆಪಿ ಮುಂದೆ ಬಾಗುವುದಕ್ಕಿಂತ ಕತ್ತು ಸೀಳಿಕೊಳ್ಳುವುದು ಲೇಸು; ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
  • Share this:
ಕೊಲ್ಕತ್ತಾ (ಜ. 25): ಸುಭಾಷ್​ ಚಂದ್ರ ಬೋಸ್​ ಅವರ 125ನೇ ಜಯಂತಿ ಜನ್ಮ ದಿಚಾರಣೆ ಸಂದರ್ಭದಲ್ಲಿ ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೊಳಗಿದ ಜೈ ಶ್ರೀರಾಮ್​ ಘೋಷಣೆಗಳು ಬಂಗಾಳಕ್ಕೆ ಮಾಡಿದ ಅಪಮಾನ ಎಂದು ಸಿಎಂ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ. ಪ್ರಧಾನಿ ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡುವ ಮೊದಲು, ನೇತಾಜಿ ಹೆಸರು ಬದಲು ಸಭಿಕರಿಂದ ಜೈ ಶ್ರೀ ರಾಮ್​ ಹರ್ಷೋದ್ಘಾರಗಳು ಕೇಳಿ ಬಂದವು. ಇದರಿಂದಾಗಿ ಕಾರ್ಯಕ್ರಮದಲ್ಲಿ ಮಾತನಾಡಲು ದೀದಿ ಕೂಡ ನಿರಾಕರಿಸಿದರು. ಈ ಕುರಿತು ಇಂದು ಹೂಗ್ಲಿಯಲ್ಲಿ ಪ್ರಚಾರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ಮುಂದೆ ತಲೆ ಬಾಗುವುದಕ್ಕಿಂತ ನನ್ನ ಕತ್ತನ್ನು ಸೀಳಿಕೊಂಡು ಬಿಡುವುದು ಉತ್ತಮ ಎಂದರು.

ಕಾರ್ಯಕ್ರಮದಲ್ಲಿ ಅವರು ಪ್ರಧಾನಿಗಳ ಉಪಸ್ಥಿತಿ ನಡುವೆ ಅವರು ನನ್ನನ್ನು ಅಪಹಾಸ್ಯ ಮಾಡುವ ಪ್ರಯತ್ನ ನಡೆಸಿದರು. ಸಭಿಕರು ಸುಭಾಷ್​ ಚಂದ್ರ ಬೋಸ್​ ಶ್ಲಾಘಿಸಿದ್ದರೆ, ನಮಸ್ಕರಿಸುತ್ತಿದ್ದೆ. ಆದರೆ, ಅವರು ಬಂಗಾಳಕ್ಕೆ ಅವಮಾನ ಮಾಡಿದರು. ಅವರು ನನ್ನನ್ನು ಗನ್​ ಪಾಯಿಂಟ್​ನಲ್ಲಿ ಇಟ್ಟು ಹೆದರಿಸಿದರೂ ಹೇಗೆ ಪ್ರತೀಕಾರ ತೀರಿಸಿಕೊಳ್ಳುವುದು ಎಂದು ನನಗೆ ಗೊತ್ತು. ಅಂದು ನಡೆದ ಜನರು ತೋರಿದ ವರ್ತನೆ ಬಂಗಾಳಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಇದನ್ನು ಓದಿ: ಜೈ ಶ್ರೀರಾಮ್​ ಘೋಷಣೆ; ನೇತಾಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಲು ನಿರಾಕರಿಸಿದ ಮಮತಾ ಬ್ಯಾನರ್ಜಿ

ದೀದಿ ಆಪ್ತ ಬಳಗವಾದ ಸುವೇಂದು ಅಧಿಕಾರಿ , ರಜಿಬ್​ ಬ್ಯಾನರ್ಜಿ ಸೇರಿದಂತೆ ಕೆಲ ಹಿರಿಯ ತೃಣಮೂಲ ಕಾಂಗ್ರೆಸ್​​  ನಾಯಕರು ಬಿಜೆಪಿ ಸೇರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲಸ ಮಾಡುವವರಿಗೆ ಮಾತ್ರ ಪಕ್ಷ ಟಿಕೆಟ್​ ನೀಡಲಿದೆ. ಬೇಕಾದರೆ ಉಳಿದವರು ಕೂಡ ಪಕ್ಷ ಬಿಟ್ಟು ಬಿಜೆಪಿ ಸೇರಬಹುದು. ಜನರಿಗಾಗಿ ಕೆಲಸ ಮಾಡುವವರಿಗೆ ಮಾತ್ರ ತೃಣಮೂಲಕ ಟಿಕೆಟ್​ ನೀಡಲಿದೆ. ಯಾರು ಆ ಕಾರ್ಯ ಮಾಡುವುದಿಲ್ಲವೋ ಅವರಿಗೆ ಇದರಿಂದ ವಿನಾಯಿತಿ ಇಲ್ಲ. ಹಲವು ಜನರು ಟಿಎಂಸಿ ತೊರೆಯಬಹುದು. ಬಿಜೆಪಿ ಸೇರಲು ಸಾಲಿನಲ್ಲಿ ನಿಂತಿರುವವರು ಬೇಗವೇ ಪಕ್ಷ ತೊರೆಯಿರಿ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಬಿಜೆಪಿಯನ್ನು ವಾಷಿಂಗ್​ ಪೌಡರ್​ (ಬಟ್ಟೆ ತೊಳೆಯುವ ಪೌಡರ್​)ಗೆ ಹೋಲಿಕೆ ಮಾಡಿದ ಅವರು. ಪಕ್ಷ ತೊರೆದವರಿಗೆ ಮತ್ತೆ ಟಿಎಂಸಿ ಮತ್ತೆ ಬಾಗಿಲು ತೊರೆಯುವುದಿಲ್ಲ. ಇವರೆಲ್ಲಾ ದುರಾಸೆ ಹೊಂದಿದ್ದು, ಕಪ್ಪು ಹಣ ಸಂಗ್ರಹಿಸಿದ್ದಾರೆ. ಅದನ್ನು ಬಿಜೆಪಿ ಎಂಬ ವಾಷಿಂಗ್​ ಪೌಡರ್​ನಿಂದ ಬಿಳಿಹಣವಾಗಿಸಲಿದ್ದಾರೆ ಎಂದು ಟೀಕಿಸಿದರು.
Published by: Seema R
First published: January 25, 2021, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories