• Home
  • »
  • News
  • »
  • national-international
  • »
  • President Poll: ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ದೇವದಾಸ್ ರಾಷ್ಟ್ರಪತಿ ಆಗ್ತಾರಾ?

President Poll: ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ದೇವದಾಸ್ ರಾಷ್ಟ್ರಪತಿ ಆಗ್ತಾರಾ?

ಗೋಪಾಲಕೃಷ್ಣ ದೇವದಾಸ್ ಗಾಂಧಿ

ಗೋಪಾಲಕೃಷ್ಣ ದೇವದಾಸ್ ಗಾಂಧಿ

President Election: ಇನ್ನು ವಿರೋಧ ಪಕ್ಷಗಳು ಒಗ್ಗೂಡಿ 2022 ರ ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಘೋಷಿಸಲು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದು, ಅವರಲ್ಲಿ ಅನೇಕರು ಮಹಾತ್ಮ ಗಾಂಧಿ ಮತ್ತು ಸಿ ರಾಜಗೋಪಾಲಾಚಾರಿ ಅವರ ಮೊಮ್ಮಗ ಗೋಪಾಲಕೃಷ್ಣ ದೇವದಾಸ್ ಗಾಂಧಿ ಅವರನ್ನು ಸಂಪರ್ಕಿಸಿದ್ದಾರೆ.

ಮುಂದೆ ಓದಿ ...
  • Share this:

ದೇಶದಲ್ಲಿ ರಾಷ್ಟ್ರಪತಿ ಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದೆ. ಭಾರತದ ಮುಂದಿನ ರಾಷ್ಟ್ರಪತಿ (Next President Of India) ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ದೇಶದ ಜನರು ಕಾಯುತ್ತಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಜುಲೈ 18ರಂದು ಹೊಸ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇನ್ನು ಬಿಜೆಪಿ ವಿರೋಧವಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ. ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯ ಕುರಿತು ವಿರೋಧ ಪಕ್ಷಗಳ ಒಮ್ಮತವನ್ನು ರೂಪಿಸಲು ಸಭೆಯನ್ನು ನಡೆಸಲಾಗಿದ್ದು, ಸಭೆಯ ನಂತರ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಬ್ಯಾನರ್ಜಿ, “ಹಲವು ಪಕ್ಷಗಳು ಇಂದು ಸಭೆಯಲ್ಲಿ ಭಾಗವಹಿಸಿವೆ. ನಾವು ಒಬ್ಬ ಒಮ್ಮತದ ಅಭ್ಯರ್ಥಿಯನ್ನು ಮಾತ್ರ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಈ ಅಭ್ಯರ್ಥಿಗೆ ಎಲ್ಲರೂ ಬೆಂಬಲ ನೀಡಲಿದ್ದಾರೆ. ನಾವು ಇತರರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಇದೊಂದು ಉತ್ತಮ ಆರಂಭ ಎಂದಿದ್ದಾರೆ.


ಗಾಂಧಿ ಮೊಮ್ಮಗನ ಹೆಸರು ಪ್ರಸ್ತಾಪ


ಇನ್ನು ವಿರೋಧ ಪಕ್ಷಗಳು ಒಗ್ಗೂಡಿ 2022 ರ ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಘೋಷಿಸಲು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದು, ಅವರಲ್ಲಿ ಅನೇಕರು ಮಹಾತ್ಮ ಗಾಂಧಿ ಮತ್ತು ಸಿ ರಾಜಗೋಪಾಲಾಚಾರಿ ಅವರ ಮೊಮ್ಮಗ ಗೋಪಾಲಕೃಷ್ಣ ದೇವದಾಸ್ ಗಾಂಧಿ ಅವರನ್ನು ಸಂಪರ್ಕಿಸಿದ್ದಾರೆ.  ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಹಲವಾರು ವಿರೋಧ ಪಕ್ಷದ ನಾಯಕರು ಗಾಂಧಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ, ರಾಷ್ಟ್ರಪತಿ ಹುದ್ದೆಗೆ ತಮ್ಮ ಜಂಟಿ ಅಭ್ಯರ್ಥಿಯಾಗುವಂತೆ ಒತ್ತಾಯಿಸಿದ್ದಾರೆ.  2004 ರಿಂದ 2009 ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಗೋಪಾಲಕೃಷ್ಣ ದೇವದಾಸ್ ಗಾಂಧಿ ಅವರು ಸ್ವಲ್ಪ ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ.


2017 ರಲ್ಲಿ, 77 ವರ್ಷದ ಗಾಂಧಿ ಅವರು ಉಪರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದರು ಆದರೆ ಚುನಾವಣೆಯಲ್ಲಿ ಎಂ ವೆಂಕಯ್ಯ ನಾಯ್ಡು ವಿರುದ್ಧ ಸೋತಿದ್ದರು. ಪಿಟಿಐ ಪ್ರಕಾರ, ಕಳೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗಾಂಧಿಯವರ ಹೆಸರಿನ ಬಗ್ಗೆ ಈಗಾಗಲೇ ಒಮ್ಮತವಿದ್ದ ಕಾರಣ ಅವರು ರಾಷ್ಟ್ರಪತಿ ಹುದ್ದೆಗೆ  ವಿರೋಧ ಪಕ್ಷದ ಅಭ್ಯರ್ಥಿಯಾಗಿ ಅವರೇ ನಿಲ್ಲಬಹುದು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Nupur Sharma ವಿರುದ್ಧ ಗಲ್ಫ್ ರಾಷ್ಟ್ರದಲ್ಲೂ ಪ್ರತಿಭಟನೆ! ಗಲಾಟೆ ಮಾಡಿದವರನ್ನ ಗಡಿಪಾರು ಮಾಡಲು ಕುವೈತ್​ ನಿರ್ಧಾರ


ಸಭೆಗೂ ಮುನ್ನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದರು. ಇನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.  ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗುವಂತೆ ಮಮತಾ ಬ್ಯಾನರ್ಜಿ ಅವರು ಶರದ್ ಪವಾರ್ ಅವರನ್ನು ಒತ್ತಾಯಿಸಿದರು ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ಪ್ರಸ್ತಾಪವನ್ನು ಶರದ್ ಪವಾರ್ ತಿರಸ್ಕರಿಸಿದ್ದಾರೆ.


ಸಭೆಯಲ್ಲಿ ಹಲವು ಪಕ್ಷಗಳು ಭಾಗಿ


ಸಭೆಯಲ್ಲಿ ಕಾಂಗ್ರೆಸ್, ಎನ್‌ಸಿಪಿ, ಎಸ್‌ಪಿ, ಆರ್‌ಜೆಡಿ, ಎನ್‌ಸಿ, ಸಿಪಿಎಂ, ಸಿಪಿಐ, ಜೆಎಂಎಂ, ಶಿವಸೇನೆ, ಐಯುಎಂಎಲ್, ಪಿಡಿಪಿ, ಜೆಡಿಎಸ್ ಮತ್ತು ಆರ್‌ಎಲ್‌ಡಿ ಸೇರಿದಂತೆ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ), ಆಮ್ ಆದ್ಮಿ ಪಕ್ಷ (ಎಎಪಿ), ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಸಭೆಯಲ್ಲಿ ಹಾಜರಿರಲಿಲ್ಲ. ಕಾಂಗ್ರೆಸ್‌ ಪಕ್ಷದ ನಾಯಕರೂ ಸಹ ಸಭೆಯಲ್ಲಿ ಇದ್ದ ಕಾರಣ ಟಿಆರ್‌ಎಸ್ ಮತ್ತು ಎಸ್‌ಎಡಿ ಆಹ್ವಾನವನ್ನು ತಿರಸ್ಕರಿಸಿವೆ ಎಂಬ ಮಾಹಿತಿ ಇದೆ.


ಇದನ್ನೂ ಓದಿ: ದೇವೇಗೌಡರು ರಾಷ್ಟ್ರಪತಿ ಆಗ್ತಾರಾ? ಮುನ್ನೆಲೆಗೆ ಬಂದಿದೆ ಹೆಸರು, ಹೆಚ್ಚಿದ ಕುತೂಹಲ


ಇನ್ನು ಆಪ್ ಕೂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಂಜಾಬ್‌ನಲ್ಲಿರುವ ಕಾರಣ ಮಮತಾ ಬ್ಯಾನರ್ಜಿ ಕರೆದಿರುವ ವಿರೋಧ ಪಕ್ಷಗಳ ಸಭೆಗೆ ಹಾಜರಾಗಿರಲಿಲ್ಲ.  ಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್ ಪಕ್ಷದ ಪರವಾಗಿ ಭಾಗವಹಿಸಿದ್ದರು.

Published by:Sandhya M
First published: