ಜನರ ಹಣ ಲೂಟಿ ಮಾಡಿದವರ ಪರವಾಗಿ ನಿಮ್ಮ ಸಿಎಂ ಧರಣಿ ಮಾಡುತ್ತಾರೆ ಎಂದು ಮಮತಾ ದೀದಿ ವಿರುದ್ಧ ಮತ್ತೆ ಗುಡುಗಿದ ಪ್ರಧಾನಿ ಮೋದಿ

 ಈ ದೇಶದ ಏಕತೆಗಾಗಿ ನೇತಾಜಿ ಹೋರಾಡಿದರು. ನಿಮ್ಮ ಮುಖ್ಯಮಂತ್ರಿ ಬಡ ಜನರ ಸುಲಿಗೆ ಮಾಡಿದವರ ಪರವಾಗಿ ಪ್ರತಿಭಟನೆ ನಡೆಸಿದರು. ಇವತ್ತು ಮಮತಾ ಅವರನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜನರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತನಿಖೆಗೆ ನೀವು ಏಕೆ ಹೆದರಬೇಕು. ಜನರಿಗಾಗಿ ಏಕೆ ನೀವು ಧರಣಿ ಮಾಡುವುದಿಲ್ಲ ಎಂದು ಮೋದಿ ಪ್ರಶ್ನಿಸಿದರು.

HR Ramesh | news18
Updated:February 8, 2019, 8:36 PM IST
ಜನರ ಹಣ ಲೂಟಿ ಮಾಡಿದವರ ಪರವಾಗಿ ನಿಮ್ಮ ಸಿಎಂ ಧರಣಿ ಮಾಡುತ್ತಾರೆ ಎಂದು ಮಮತಾ ದೀದಿ ವಿರುದ್ಧ ಮತ್ತೆ ಗುಡುಗಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
HR Ramesh | news18
Updated: February 8, 2019, 8:36 PM IST
ಜಲ್ಪಾಯ್​ಗುರಿ (ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತದಲ್ಲಿ ಆಯೋಜಿಸಿದ್ದ ಮೆಗಾ ರ್ಯಾಲಿಯಲ್ಲಿ ಪಾಲ್ಗೊಂಡು ಮಹಾಘಟ್​ಬಂಧನದ ಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಇಂದು ಮಮತಾ ದೀದಿ ನೆಲದಲ್ಲಿಯೇ ಮತ್ತೊಮ್ಮೆ ಸಮಾವೇಶ ನಡೆಸಿದ ಮೋದಿ ಅವರು ಮಮತಾ ಬ್ಯಾನರ್ಜಿ ಮತ್ತು ಮಹಾಮೈತ್ರಿ ವಿರುದ್ಧ ದಾಳಿ ನಡೆಸಿದರು.

ದಾರ್ಜಲಿಂಗ್​ನ ಜಲ್ಪಾಯ್​ಗುರಿಯಲ್ಲಿ ಬಿಜೆಪಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ಬಡಜನರ ಹಣವನ್ನು ಲೂಟಿ ಹೊಡೆದವರ ಪರವಾಗಿ ಧರಣಿ ಕೂರುತ್ತಾರೆ ಎಂದು ಆರೋಪಿಸಿದರು.

ಇದನ್ನು ಓದಿ: ಸರಳ ಜೀವನ, ನಿಷ್ಠುರ ರಾಜಕಾರಣಕ್ಕೆ ಸುದ್ದಿಯಾದ ನಾಯಕಿ: ಸಿಎಂ ಮಮತಾ ಬ್ಯಾನರ್ಜಿ ಸಂಬಳ ಕೇವಲ 1 ರೂಪಾಯಿ!

ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ಅವರು ಕಳೆದ ಭಾನುವಾರ ಜಲ್ಪಾಯ್​ಗುರಿಯಿಂದ 600 ಕಿ.ಮೀ. ದೂರದಲ್ಲಿರುವ ಕೋಲ್ಕತ್ತದಲ್ಲಿ ಧರಣಿ ಆರಂಭಿಸಿದ್ದರು. ಬಿಜೆಪಿ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಡಾರ್ಜಲಿಂಗ್​ನ ಸ್ಥಳೀಯ ಪಕ್ಷ ಗೋರ್ಖಾ ಜನಮುಕ್ತಿ ಮೋರ್ಚಾ ಕೂಡ ಮುಖ್ಯಮಂತ್ರಿ ನಿಲುವನ್ನು ಬೆಂಬಲಿಸಿತ್ತು.

ಡಾರ್ಜಲಿಂಗ್​ನಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದಿದೆ. ಆದರೆ, ಬಿಜೆಪಿ ಅಭ್ಯರ್ಥಿ ಎಸ್​.ಎಸ್​.ಅಹ್ಲುವಾಲಿಯಾ ಅವರು ಮತ್ತೆ ಗೋರ್ಖಾ ಜನಮುಕ್ತಿ ಮೋರ್ಚಾ ಪಕ್ಷವನ್ನು ಬೆಂಬಲಿಸಿದ್ದಾರೆ. ಈ ಬಾರಿ ಈ ಪಕ್ಷ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.

ಈ ದೇಶದ ಏಕತೆಗಾಗಿ ನೇತಾಜಿ ಹೋರಾಡಿದರು. ನಿಮ್ಮ ಮುಖ್ಯಮಂತ್ರಿ ಬಡ ಜನರ ಸುಲಿಗೆ ಮಾಡಿದವರ ಪರವಾಗಿ ಪ್ರತಿಭಟನೆ ನಡೆಸಿದರು. ಇವತ್ತು ಮಮತಾ ಅವರನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜನರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತನಿಖೆಗೆ ನೀವು ಏಕೆ ಹೆದರಬೇಕು. ಜನರಿಗಾಗಿ ಏಕೆ ನೀವು ಧರಣಿ ಮಾಡುವುದಿಲ್ಲ ಎಂದು ಮೋದಿ ಪ್ರಶ್ನಿಸಿದರು.

Loading...

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...