Mamata Banerjee: ಪ್ರಧಾನಿ ನಿವಾಸಕ್ಕೆ ಮಮತಾ; ಕುತೂಹಲ ಮೂಡಿಸಿದ ಮೋದಿ- ಬ್ಯಾನರ್ಜಿ ಮಾತುಕತೆ

ಪ್ರಧಾನಿ ಭೇಟಿಗೂ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಧ್ಯಪ್ರದೇಶ ಮಾಜಿ ಸಿಎಂ ಆಗಿರುವ ಕಾಂಗ್ರೆಸ್​ ನಾಯಕ ಕಮಲ್​ ನಾಥ್​ ಮತ್ತು ಆನಂದ್​ ಶರ್ಮಾ ಅವರನ್ನು ಭೇಟಿಯಾಗಿದ್ದರು.

ಮಮತಾ ಬ್ಯಾನರ್ಜಿ, ಮೋದಿ,

ಮಮತಾ ಬ್ಯಾನರ್ಜಿ, ಮೋದಿ,

  • Share this:
    ನವದೆಹಲಿ (ಜು. 27): ಪಶ್ಚಿಮ ಬಂಗಾಳ ಸಿಎಂ ಆಗಿ ಆಯ್ಕೆಗೊಂಡ ಬಳಿಕ ಇದೇ ಮೊದಲ ಬಾರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುಂದಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಅವರ ಮನೆ ತಲುಪಲಿದ್ದಾರೆ.  ದೆಹಲಿಯಲ್ಲಿನ 7 ಲೋಕ ಕಲ್ಯಾಣ್​ ಮಾರ್ಗನ ಪ್ರಧಾನಿ ನಿವಾಸಕ್ಕೆ ಅವರು ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಮಮತಾ ಬ್ಯಾನರ್ಜಿ,  ಕೇಂದ್ರದಿಂದ ಪಶ್ಚಿಮ ಬಂಗಾಳಕ್ಕೆ ಬಾಕಿ ಇರುವ ಅಗತ್ಯ ಲಸಿಕೆ ಪೂರೈಸುವಂತೆ ಅವರು ಇದೇ ವೇಳೆ ಮನವಿ ಮಾಡಲಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಧ್ಯಪ್ರದೇಶ ಮಾಜಿ ಸಿಎಂ ಆಗಿರುವ ಕಾಂಗ್ರೆಸ್​ ನಾಯಕ ಕಮಲ್​ ನಾಥ್​ ಮತ್ತು ಆನಂದ್​ ಶರ್ಮಾ ಅವರನ್ನು ಭೇಟಿಯಾಗಿದ್ದರು.

    ರಾಜ್ಯದಲ್ಲಿ ಅಭೂತ ಪೂರ್ವ ಗೆಲುವಿನ ಬಳಿಕ ಮಮತಾ ರಾಷ್ಟ್ರ ರಾಜಧಾನಿಗೆ ಐದು ದಿನದ ಪ್ರವಾಸ ನಡೆಸಿದ್ದು, ಹಲವು ವಿಪಕ್ಷ ನಾಯಕರನ್ನು ಭೇಟಿ ಯಾಗಲಿದ್ದಾರೆ. ರಾಜ್ಯ ಸಭಾ ನಾಯಕ ಡೆರೆಕ್​ ಒಬೆರಿಯಾ ಮಮತಾ ಅವರ ಈ ಪ್ರವಾಸ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ, ರಾಷ್ಟ್ರ ರಾಜಕಾರಣದಲ್ಲಿ ಮಮತಾ ಪ್ರಮುಖ ಪಾತ್ರ ಹೊಂದುವ ಸಾಧ್ಯತೆ ಇರುವ ಹಿನ್ನಲೆ ಅವರು ಈ ಪ್ರವಾಸ ಪ್ರಮುಖವಾಗಿದೆ ಎಂದಿದ್ದಾರೆ.
    ಇನ್ನು ತಮ್ಮ ಭೇಟಿ ಕುರಿತು ಮಾತನಾಡಿರುವ ಅವರು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭೇಟಿ ಸಂದರ್ಭದಲ್ಲಿ ಪ್ರಧಾನಿ ಭೇಟಿಗೆ ಸಮಯ ನೀಡಿದ ಹಿನ್ನಲೆ ಮೋದಿ ಅವರೊಂದಿಗೆ ಮಾತುಕತೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

    ಇದನ್ನು ಓದಿ: ಮುಂದಿನ ತಿಂಗಳಿಂದ ಮಕ್ಕಳಿಗೆ ಕೋವಿಡ್​ ಲಸಿಕೆ ವಿತರಣೆ ಸಾಧ್ಯತೆ; ಕೇಂದ್ರ ಆರೋಗ್ಯ ಸಚಿವರು

    ರಾಜ್ಯದಲ್ಲಿ ಕೋವಿಡ್​ ನಕಲಿ ಲಸಿಕೆ, ಚುನಾವಣೋತ್ತರ ಹಿಂಸಾಚಾರದಿಂದಾಗಿ ಮಮತಾ ಬ್ಯಾನರ್ಜಿ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆ ಅವರು ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವ ಸಾಧ್ಯತೆ ಇದೆ. ಇದೇ ಹಿನ್ನಲೆ ಅವರು ವಿಪಕ್ಷ ನಾಯಕರ ಭೇಟಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಇನ್ನು ವಿಪಕ್ಷಗಳ ಅವರ ಭೇಟಿ ಕುರಿತು ಟೀಕಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್​, ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಮಮತಾ ಬ್ಯಾನರ್ಜಿ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಟೀಕಿಸಿದ್ದಾರೆ.

    ಮೋದಿ ಭೇಟಿ ಬಳಿಕ ಅವರು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೂಡ ಭೇಟಿಯಾಗಲಿದ್ದಾರೆ. ಬಳಿಕ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿಯಾಗುವ ಸಾಧ್ಯತೆ ಕೂಡ ಇದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: