ನಂದಿಗ್ರಾಮದಲ್ಲಿ ಸೋತ ಮಮತಾ ಭವಾನಿಪುರದಿಂದ ಕಣಕ್ಕೆ ಇಳಿಯಲು ಸಜ್ಜು

ಸಂವಿಧಾನದ ವಿಧಿ 164ರ ಪ್ರಕಾರ ಶಾಸಕರಲ್ಲದವರು ಸಚಿವ ಸ್ಥಾನವನ್ನು ಅಲಂಕರಿಸುವಂತಿಲ್ಲ. ಒಂದು ವೇಳೆ ಸಚಿವ ಅಥವಾ ಸಿಎಂ ಸ್ಥಾನ ಅಲಂಕರಿಸಿದರೆ ಅವರು, ಆರು ತಿಂಗಳೊಳಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಬೇಕು.

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

 • Share this:
  ಕೊಲ್ಕತ್ತಾ (ಮೇ. 21): ಪಶ್ಚಿಮ ಬಂಗಾಳದಲ್ಲಿ ಅಭೂತ ಪೂರ್ವ ಜಯ ಸಾಧಿಸಿದ ತೃಣಮೂಲಕ ಕಾಂಗ್ರೆಸ್​ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ತಾವು ಕಣಕ್ಕೆ ಇಳಿದಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲನ್ನು ಅಪ್ಪಿದರು. ತಮ್ಮ ಮಾಜಿ ಆಪ್ತ ಸುವೆಂದು ಅಧಿಕಾರಿಗೆ ಕ್ಷೇತ್ರ ಬಿಟ್ಟುಕೊಟ್ಟ ಅವರು, ಇದೀಗ ಕೊಲ್ಕತ್ತಾದ ಭಾವನಿಪುರದಿಂದ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಭವಾನಿಪುರದಿಂದ ತೃಣಮೂಲಕ ಕಾಂಗ್ರೆಸ್​ ಪಕ್ಷದ ಶೋಭಂಡೇಬ್​ ಚಟ್ಟೋಪಾಧ್ಯಯ ಗೆಲುವು ಸಾಧಿಸಿದ್ದರು. ಅವರಿಗ ತಮ್ಮ ಪಕ್ಷದ ನಾಯಕಿಗಾಗಿ ಕ್ಷೇತ್ರ ತ್ಯಾಗಕ್ಕೆ ಸಜ್ಜಾಗಿದ್ದು, ಶೀಘ್ರದಲ್ಲಿಯೇ ರಾಜೀನಾಮೆ ನೀಡುವ ನಿರೀಕ್ಷೆ ಇದೆ. ಈಗಾಗಲೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಮಮತಾ ಬ್ಯಾನರ್ಜಿ ಸಿಎಂ ಆಗಿ ಉಳಿಯಲು ಆರು ತಿಂಗಳೊಳಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಬೇಕು. ಇದಕ್ಕಾಗಿ ಅವರು ಮತ್ತೆ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

  ಸಂವಿಧಾನದ ವಿಧಿ 164ರ ಪ್ರಕಾರ ಶಾಸಕರಲ್ಲದವರು ಸಚಿವ ಸ್ಥಾನವನ್ನು ಅಲಂಕರಿಸುವಂತಿಲ್ಲ. ಒಂದು ವೇಳೆ ಸಚಿವ ಅಥವಾ ಸಿಎಂ ಸ್ಥಾನ ಅಲಂಕರಿಸಿದರೆ ಅವರು, ಆರು ತಿಂಗಳೊಳಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಬೇಕು.

  ಇದನ್ನು ಓದಿ: ಉಂಡೂ ಹೋದ ಕೊಂಡೂ ಹೋದ ಸಿನಿಮಾ ಶೈಲಿಯಲ್ಲಿ ವಂಚನೆ; ಗರ್ಲ್​​ಫ್ರೆಂಡ್​​​​ ಬರ್ತ್ ಡೇ ಪಾರ್ಟಿಗಾಗಿ ಬೃಹ್ನಾಟಕ!

  ಕಳೆದೆರಡು ಚುನಾವಣೆಯಲ್ಲಿಯೂ ಮಮತಾ ಬ್ಯಾನರ್ಜಿ ಇದೇ ಭವಾನಿಪುರದಿಂದ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಚುನಾವಣೆಯಲ್ಲಿ ತಮ್ಮ ಪಕ್ಷ ತೊರೆದು ಹೋದ ತಮ್ಮ ಮಾಜಿ ಆಪ್ತ ಸುಂವೇದು ಅಧಿಕಾರಿಯ ವಿರುದ್ಧ ಅರ್ಭಟಿಸಿದ್ದ ಅವರು, ಇದಕ್ಕಾಗಿ ನಂದಿಗ್ರಾಮದಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದರು. ಈ ವೇಳೆ ಅವರು ತಮ್ಮ ಭವಾನಿ ಪುರ ಕ್ಷೇತ್ರದ ಜನತೆ ಮನವಿ ಮಾಡಿದ್ದ ಅವರು, ತಮಗೆ ಎರಡು ಬಾರಿ ಚುನಾವಣೆಯಲ್ಲಿ ಆಶೀರ್ವಾದಿಸಿದಂತೆ ತಮ್ಮ ಪಕ್ಷದ ಅಭ್ಯರ್ಥಿಗೆ ಆಶೀರ್ವಾದಿಸಬೇಕು. ತಾವು ಭವಾನಿಪುರದ ಜನರಿಂದ ದೂರ ಹೋಗುತ್ತಿದ್ದೇನೆ ಎಂದು ಭಾವಿಸಬೇಡಿ. ತಮ್ಮ ಪರಿಸ್ಥಿತಿಯನ್ನು ಇಲ್ಲಿನ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಇದು ತಮ್ಮ ಕ್ಷೇತ್ರ. ಇಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆದ್ದರೆ ತಾವೇ ಗೆದ್ದಂತೆ ಎಂದು ಮನವಿ ಮಾಡಿದ್ದರು.

  ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಮಾತನಾಡಿದ ಅವರು, ನಂದಿ ಗ್ರಾಮ ತಮ್ಮ ದೊಡ್ಡ ಅಕ್ಕ, ಭವಾನಿಪುರ ತಮ್ಮ ಚಿಕ್ಕ ತಂಗಿಯಂತೆ ಸಾಧ್ಯವಾದರೆ ಎರಡು ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಅವರು ತಿಳಿಸಿದ್ದರು. ಆದರೆ, ಬಿಜೆಪಿ ನಾಯಕರು ಸೋಲಿನ ಭಯದಿಂದಾಗಿ ಮಮತಾ ಎರಡು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದರಿಂದ ಅವರು ಬಳಿಕ ನಂದಿಗ್ರಾಮ ವೊಂದರಿಂದಲೇ ಸ್ಪರ್ಧಿಸಿ, ಕೂದಲೇಳೆಯ ಅಂತರದಲ್ಲಿ ಸೋತರು.
  Published by:Seema R
  First published: