• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Didi V/S Sha: ಆಯೋಗದ 24 ಗಂಟೆಗಳ ನಿರ್ಬಂಧ ಅಂತ್ಯವಾಗುತ್ತಲೇ ಪುಟಿದೆದ್ದ ದೀದಿ; ಅಮಿತ್ ಶಾಗೆ ಪಂಥಾಹ್ವಾನ..!

Didi V/S Sha: ಆಯೋಗದ 24 ಗಂಟೆಗಳ ನಿರ್ಬಂಧ ಅಂತ್ಯವಾಗುತ್ತಲೇ ಪುಟಿದೆದ್ದ ದೀದಿ; ಅಮಿತ್ ಶಾಗೆ ಪಂಥಾಹ್ವಾನ..!

ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

Mamata Banerjee: ನಿನ್ನೆ ರಾತ್ರಿ 8 ಗಂಟೆಯಿಂದ ಇಂದು ರಾತ್ರಿ 8 ಗಂಟೆವರೆಗೆ ಹೇರಲಾಗಿದ್ದ ನಿಷೇಧ ಅಂತ್ಯವಾಗುತ್ತಲೇ ಬಾರಸತ್​ನಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ಮಾತನಾಡಿದ ದೀದಿ, ಪಶ್ಚಿಮ ಬಂಗಾಳವನ್ನು ಗುಜರಾತ್ ಮಾಡಲು ಬಿಡಲ್ಲ ಎಂದು ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದೆ ಓದಿ ...
  • Share this:

    ಕೊಲ್ಕತ್ತಾ (ಏ.13): 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ವಿಧಿಸಿದ್ದ ನಿರ್ಬಂಧ ಕೊನೆಯಾಗುತ್ತಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಪುಟಿದೆದ್ದಿದ್ದಾರೆ. ನಿನ್ನೆ ರಾತ್ರಿ 8 ಗಂಟೆಯಿಂದ ಇಂದು ರಾತ್ರಿ 8 ಗಂಟೆವರೆಗೆ ಹೇರಲಾಗಿದ್ದ ನಿಷೇಧ ಅಂತ್ಯವಾಗುತ್ತಲೇ ಬಾರಸತ್​ನಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ಮಾತನಾಡಿದ ದೀದಿ, ಪಶ್ಚಿಮ ಬಂಗಾಳವನ್ನು ಗುಜರಾತ್ ಮಾಡಲು ಬಿಡಲ್ಲ ಎಂದು ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


    ಬಾರಸತ್​ನಲ್ಲಿ ಬೃಹತ್​ ಸಮಾವೇಶದಲ್ಲಿ ಅಬ್ಬರಿಸಿದ ದೀದಿ, ನಾನು ಬೀದಿಗಿಳಿದು ಹೋರಾಟ ಮಾಡುವವಳು. ನನ್ನ ಎದುರಾಳಿಗಳನ್ನು ಚುನಾವಣಾ ಕಣದಲ್ಲಿ ದಿಟ್ಟವಾಗಿ ಎದುರಿಸುತ್ತೇನೆ. ಬಿಜೆಪಿ ಬಳಿ ಹಣ, ಅಧಿಕಾರ, ಸಂಸ್ಥೆಗಳಿದ್ದರೂ ಚುನಾವಣೆಯಲ್ಲಿ ಸೋಲಲಿದೆ. ನಾನು ಈ ಚುನಾವಣಾ ಯುದ್ಧದಲ್ಲಿ ಜಯಗಳಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಚಾಣಕ್ಯ ಅಮಿತ್ ಶಾಗೆ ನೇರವಾಗೇ ಸವಾಲ್ ಹಾಕಿರುವ ದೀದಿ, ನನ್ನ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಗೆ ಬನ್ನಿ ಎಂದಿದ್ದಾರೆ.



    ಪಶ್ಚಿಮ ಬಂಗಾಳ ರಾಜ್ಯವನ್ನು ಗುಜರಾತ್ ಮಾಡಲು ನಾನು ಬಿಡುವುದಿಲ್ಲ. ಎಂದಿಗೂ ಗುಜರಾತ್ ಮಾದರಿ ಬಂಗಾಳ ಆಗುವುದಿಲ್ಲ. ನನ್ನ ತಟಸ್ಥವಾಗುವುದರಿಂದ ಯಾವುದೇ ಲಾಭವಿಲ್ಲ. ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.


    ಚುನಾವಣಾ ಪ್ರಚಾರದ ಱಲಿಗೆ 24 ಗಂಟೆಗಳ ಬಳಿಕ ಮರಳಿದ ದೀದಿಗೆ ಬಾರಸತ್ನಲ್ಲಿ ಭರ್ಜರಿ ಸ್ವಾಗತ ಕೋರಲಾಯ್ತು. ಟಿಎಂಸಿ ಬೆಂಬಲಿತ ಮಹಿಳೆಯರು ಸಮಾವೇಶದಲ್ಲಿ ಕುಣಿದು ಕುಪ್ಪಳಿಸಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ರು.





    ಇನ್ನು ಮಮತಾ ಬ್ಯಾನರ್ಜಿ ಇಂದು ಚುನಾವಣಾ ಆಯೋಗ ತನ್ನ ಪ್ರಚಾರದ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಖಂಡಿಸಿ ಧರಣಿ ನಡೆಸಿದರು. ಏಕಾಂಗಿಯಾಗಿ ವ್ಹೀಲ್ಚೇರ್ನಲ್ಲಿ ಗಾಂಧಿ ಪ್ರತಿಮೆ ಎದುರು ಕುಳಿತು ಆಯೋಗದ ಕ್ರಮದ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. ಈ ವೇಳೆ 2 ಚಿತ್ರಗಳನ್ನು ಬಿಡಿಸಿದ್ದು ವಿಶೇಷವಾಗಿತ್ತು.
    ವರದಿ: ಕಾವ್ಯಾ ವಿ

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು