• Home
  • »
  • News
  • »
  • national-international
  • »
  • Mamata Banerjee: ಬೀದಿ ಬದಿ ಪಾನಿಪುರಿ ಹಂಚಿದ ಸಿಎಂ! ದೀದಿ ಸಿಂಪ್ಲಿಸಿಟಿಗೆ ಜನರು ಫಿದಾ

Mamata Banerjee: ಬೀದಿ ಬದಿ ಪಾನಿಪುರಿ ಹಂಚಿದ ಸಿಎಂ! ದೀದಿ ಸಿಂಪ್ಲಿಸಿಟಿಗೆ ಜನರು ಫಿದಾ

ಪಾನಿಪುರಿ ತಯಾರಿಸಿ ಹಂಚುತ್ತಿರುವ ಸಿಎಂ

ಪಾನಿಪುರಿ ತಯಾರಿಸಿ ಹಂಚುತ್ತಿರುವ ಸಿಎಂ

ಟಿಎಂಸಿ ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಅವರು ಪಾನಿಪುರಿ ತಯಾರಿಸಿ, ರಸ್ತೆ ಬದಿಯ ಸ್ಟಾಲ್‌ನಲ್ಲಿ ನೆರೆದಿದ್ದ ಮಕ್ಕಳು ಮತ್ತು ವೀಕ್ಷಕರಿಗೆ ನೀಡುತ್ತಿರುವುದನ್ನು ಕಾಣಬಹುದು.

  • Share this:

ಡಾರ್ಜಲಿಂಗ್(ಜು.13): ಪಶ್ಚಿಮ ಬಂಗಾಳ ಸಿಎಂ ಜನರೊಂದಿಗೆ ಬೆರೆಯುವುದರಲ್ಲಿ ಯಾವಾಗಲೂ ಮುಂದು. ಅವಕಾಶ ಸಿಕ್ಕಿದಾಗೆಲ್ಲ ಅವರು ಜನರೊಂದಿಗೆ ಆತ್ಮೀಯವಾಗಿ ಬೆರೆಯುವುದನ್ನು ಕಾಣಬಹುದು. ಇದೀಗ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಅವರು ಬೀದಿ ಬದಿಯಲ್ಲಿ ಕೈಯಾರೆ ಪಾನಿ ಪೂರಿ (Panipuri) ತಯಾರಿಸಿ ಮಕ್ಕಳಿಗೂ, ಪ್ರವಾಸಿಗರಿಗೂ ಹಂಚಿದ್ದಾರೆ. ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಉತ್ತರ ಬಂಗಾಳದ ಡಾರ್ಜಿಲಿಂಗ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಾನಿಪುರಿ ಮಾಡಿ ಪ್ರವಾಸಿಗರಿಗೆ ಹಂಚಿರುವ ವೀಡಿಯೊ ವೈರಲ್ ಆಗಿದೆ.


ಟಿಎಂಸಿ ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಅವರು ಪಾನಿಪುರಿ ತಯಾರಿಸಿ, ರಸ್ತೆ ಬದಿಯ ಸ್ಟಾಲ್‌ನಲ್ಲಿ ನೆರೆದಿದ್ದ ಮಕ್ಕಳು ಮತ್ತು ವೀಕ್ಷಕರಿಗೆ ನೀಡುತ್ತಿರುವುದನ್ನು ಕಾಣಬಹುದು.


ದೀದಿ ಕೈಯಿಂದ ಪಾನಿಪುರಿ ತಿನ್ನಲು ದೊಡ್ಡ ಕ್ಯೂ


ವೀಡಿಯೊದಲ್ಲಿ, ಹಲವಾರು ಮಕ್ಕಳು ತಮ್ಮ ಕೈಯಲ್ಲಿ ವನ್ಬ ಟೈಂ ಯೂಸ್ ತಟ್ಟೆ ಹಿಡಿದು ಸರದಿಯಲ್ಲಿ ನಿಂತು ಜನಪ್ರಿಯ ಸ್ಟ್ರೀಟ್ ಫುಡ್ ಆನಂದಿಸಲು ತಮ್ಮ ಸರದಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಹೊಸದಾಗಿ ಆಯ್ಕೆಯಾದ ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ) ಸದಸ್ಯರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬ್ಯಾನರ್ಜಿ ಮೂರು ದಿನಗಳ ಕಾಲ ಡಾರ್ಜಲಿಂಗ್​ನಲ್ಲಿದ್ದರು.




"ನಮ್ಮ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಡಾರ್ಜಿಲಿಂಗ್‌ನಲ್ಲಿರುವ SHG ಚಾಲಿತ ಆಹಾರ ಮಳಿಗೆ, ಭಾನುವಾರ ಹಾತ್‌ಗೆ ಭೇಟಿ ನೀಡಿದರು. ಮಹಿಳೆಯರ ಶ್ರಮಕ್ಕೆ ಮೆಚ್ಚುಗೆಯನ್ನು ತೋರಿಸುತ್ತಾ, ಅವರು ಬಂಗಾಳದ ನೆಚ್ಚಿನ, ಪುಚ್ಕಾಗಳ (ಗೋಲ್ಗಪ್ಪ ಅಥವಾ ಪಾನಿಪುರಿ) ತಯಾರಿಕೆಯಲ್ಲಿ ಅವರೊಂದಿಗೆ ಸೇರಿಕೊಂಡರು. ಉತ್ಸಾಹಿ ಮಕ್ಕಳಿಗೆ ರುಚಿಕರವಾದ ತಿಂಡಿಯನ್ನು ತಿನ್ನಿಸಿದರು" ಎಂದು ಟಿಎಂಸಿ ಟ್ವೀಟ್ ಮಾಡಿದೆ.


ಇದನ್ನೂ ಓದಿ: Mamata Banerjee: ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ಸಿಎಂ ಸಖತ್ ಡ್ಯಾನ್ಸ್!


ಮಾರ್ಚ್‌ನಲ್ಲಿ ಡಾರ್ಜಿಲಿಂಗ್‌ಗೆ ಭೇಟಿ ನೀಡಿದಾಗ, ಮಮತಾ ಬ್ಯಾನರ್ಜಿ ಅವರು ಮೊಮೊ ಸ್ಟಾಲ್ ನಿಂತು ಸ್ಥಳೀಯರನ್ನು ಆಶ್ಚರ್ಯಗೊಳಿಸಿದರು. ವೀಡಿಯೊದಲ್ಲಿ, ಮಮತಾ ಬ್ಯಾನರ್ಜಿ ಅವರು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ತಮ್ಮ ಅಡುಗೆ ಮನೆ ಕೌಶಲ್ಯವನ್ನು ತೋರಿಸಿದ್ದಾರೆ.


ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊಗಳು ಮತ್ತು ಚಿತ್ರಗಳು ಬಳಕೆದಾರರಿಂದ ಹಲವಾರು "ಮೊಮೊ ವಿತ್ ಮಮತಾ" ಕಾಮೆಂಟ್‌ಗಳನ್ನು ಪಡೆದವು.


ಬುಡಕಟ್ಟು ಜನಾಂಗ ಮಹಿಳೆಯರೊಂದಿಗೆ ಡ್ಯಾನ್ಸ್


ಮಮತಾ ಬ್ಯಾನರ್ಜಿ (Mamata Banerjee) ಅವರು ಬುಡಕಟ್ಟು ಮಹಿಳೆಯರ (Tribal Women) ಗುಂಪಿನೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಉತ್ತರ ಬಂಗಾಳದ (North Bengal) ಅಲಿಪುರ್‌ದವಾರ್‌ಗೆ ಮೂರು ದಿನಗಳ ಭೇಟಿ ನೀಡಿರುವ ಮಮತಾ ಬ್ಯಾನರ್ಜಿ ಸಾಮೂಹಿಕ ವಿವಾಹ (Mass Wedding) ಸಮಾರಂಭದಲ್ಲಿ ಭಾಗವಹಿಸಿ ನವವಿವಾಹಿತ ಜೋಡಿಗಳನ್ನು ಆಶೀರ್ವದಿಸಿದ್ದರು.


ಮಮತಾ ಬ್ಯಾನರ್ಜಿ ನೃತ್ಯದ ವಿಡಿಯೋವನ್ನು ತೃಣಮೂಲ ಕಾಂಗ್ರೆಸ್‌ನ (TMC) ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿತ್ತು. ವೀಡಿಯೊದಲ್ಲಿ (Video), ಬ್ಯಾನರ್ಜಿ ದಂಪತಿಗಳಿಗೆ ಉಡುಗೊರೆಗಳನ್ನು ನೀಡಿ ಅವರನ್ನು ಆಶೀರ್ವದಿಸಿದ್ದರು. ಆದಿವಾಸಿ ಹಾಡು ಹಿನ್ನಲೆಯಲ್ಲಿ ಪ್ಲೇ ಆಗುತ್ತಿದ್ದಂತೆ ಅವರು ನಂತರ ನೃತ್ಯ ಪ್ರದರ್ಶನಕ್ಕಾಗಿ ಬುಡಕಟ್ಟು ಮಹಿಳೆಯರ ಗುಂಪಿನೊಂದಿಗೆ ಸೇರಿದ್ದಾರೆ.


ಇದನ್ನೂ ಓದಿ: Mamata Banerjee: ರಾಡ್ ಹಿಡಿದು ಸಿಎಂ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿದ ವ್ಯಕ್ತಿ, ದೀದಿ ಭದ್ರತೆ ಹೆಚ್ಚಳ


ಈ ಕುರಿತು ಟ್ವೀಟ್ ಮಾಡಿರುವ ಟಿಎಂಸಿ, "ಅಲಿಪುರ್‌ದವಾರ್‌ನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಯುವ ಜೋಡಿಗಳನ್ನು ಆಶೀರ್ವದಿಸಿದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು