HOME » NEWS » National-international » MAMATA BANERJEE CALLS PM DANGABAAZ SAYS FATE WORSE THAN TRUMP AWAITS MAK

Mamata Banerjee: ದೇಶದ ಪ್ರಧಾನಿ ಮೋದಿ ಓರ್ವ ದಂಗಾಬಾಜ್​ ಮತ್ತು ರಾಕ್ಷಸ; ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಈ ದೇಶದ ಅತಿ ದೊಡ್ಡ ದಂಗಾಬಾಜ್ (ದಂಗೆಕೋರ) ಮತ್ತು ದೈತ್ಯ ರಾಕ್ಷಸ. ಅಲ್ಲದೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗಿಂತಲೂ ಕೆಟ್ಟ ಪರಿಸ್ಥಿತಿ ಅವರಿಗೆ ಕಾದಿದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

news18-kannada
Updated:February 24, 2021, 7:42 PM IST
Mamata Banerjee: ದೇಶದ ಪ್ರಧಾನಿ ಮೋದಿ ಓರ್ವ ದಂಗಾಬಾಜ್​ ಮತ್ತು ರಾಕ್ಷಸ; ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ
ಮಮತಾ ಬ್ಯಾನರ್ಜಿ.
  • Share this:
ಕೋಲ್ಕತ್ತಾ (ಫೆಬ್ರವರಿ 24); ಕಳೆದ ಹಲವು ದಿನಗಳಿಂದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಲೇ ಇರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಇಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, "ಭಾರತದ ಪ್ರಧಾನಿ ಮೋದಿ ಓರ್ವ ದಂಗಾಬಾಜ್, ರಾಕ್ಷಸ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗಿಂತಲೂ ಕೆಟ್ಟ ಪರಿಸ್ಥಿತಿ ನರೇಂದ್ರ ಮೋದಿಗೆ ಕಾದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಪಶ್ಚಿಮ ಬಂಗಾಳ ವಿಧಾನ ಸಭೆಗೆ ಇನ್ನೂ ಮೂರು ತಿಂಗಳಲ್ಲಿ ಚುನಾವಣೆ ಎದುರಾಗಲಿದೆ. ಈ ಬಾರಿ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ ಈಗಾಗಲೇ ಆಪರೇಷನ್​ ಕಮಲ ಆರಂಭಿಸಿದ್ದು ಹಲವಾರು ಟಿಎಂಸಿ ನಾಯಕರನ್ನು ಬಿಜೆಪಿಗೆ ಕರೆತಂದಿದೆ. ಅಲ್ಲದೆ, ಸಿಎಂ ಮಮತಾ ಬ್ಯಾನರ್ಜಿಯ ಆತ್ಮೀಯರ ವಿರುದ್ಧ ಸಿಬಿಐ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿ ಪಕ್ಷದ ಈ ನಡೆ ಸಾಮಾನ್ಯವಾಗಿ ಮಮತಾ ಬ್ಯಾನರ್ಜಿ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲ್ಕತ್ತಾದ ಹೂಗ್ಲಿಯಲ್ಲಿ ಇಂದು ನಡೆದ ತೃಣಮೂಲ ಕಾಂಗ್ರೆಸ್ ರ್‍ಯಾಲಿಯಲ್ಲಿ ತನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿಯನ್ನು ಸಿಬಿಐ ತನಿಖೆಗೆ ಒಳಪಡಿಸಿದ ಕುರಿತು ಪ್ರಸ್ತಾಪಿಸಿ ಮಾತನಾಡಿರುವ ಸಿಎಂ ಮಮತಾ ಬ್ಯಾನರ್ಜಿ, "ಪ್ರಧಾನಿ ನರೇಂದ್ರ ಮೋದಿ ಈ ದೇಶದ ಅತಿ ದೊಡ್ಡ ದಂಗಾಬಾಜ್ (ದಂಗೆಕೋರ) ಮತ್ತು ದೈತ್ಯ ರಾಕ್ಷಸ. ಅಲ್ಲದೆ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗಿಂತಲೂ ಕೆಟ್ಟ ಪರಿಸ್ಥಿತಿ ಅವರಿಗೆ ಕಾದಿದೆ" ಎಂಬ ಪದಗಳನ್ನು ಬಳಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಚುನಾವಣಾ ಪ್ರಚಾರದ ಕಾವೇರಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕರು ಈಗಾಗಲೇ ಟಿಎಂಸಿ ನಾಯಕರನ್ನು ನಿಂದಿಸಲು "ತೋಲಾಬಾಜ್" ಎಂಬ ಪದವನ್ನು ಆಗಿಂದಾಗ್ಗೆ ಬಳಸುತ್ತಿದ್ದಾರೆ. ಹೀಗಾಗಿ ಈ ಪದಕ್ಕೆ ಪ್ರತ್ಯುತ್ತರ ನೀಡುವ ಸಲುವಾಗಿ ಇಂದು ಮಮತಾ ಬ್ಯಾನರ್ಜಿ ದಂಗಾಬಾಜ್​ ಎಂಬ ಪದವನ್ನು ಬಳಸಿದ್ದಾರೆಯೇ? ಎಂಬ ಕುರಿತು ರಾಷ್ಟ್ರ ರಾಜಕೀಯದಲ್ಲಿ ಈಗಾಗಲೇ ವ್ಯಾಖ್ಯಾನಗಳು ಆರಂಭವಾಗಿವೆ.

ಇದೇ ವೇಳೆ ಪ್ರಧಾನಿ ಮೋದಿಯನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರಿಗೆ ಹೋಲಿಕೆ ಮಾಡಿ ಮಾತನಾಡಿರುವ ಮಮತಾ ಬ್ಯಾನರ್ಜಿ, "2020ರ ನವೆಂಬರ್‌ನಲ್ಲಿ ಅಮೆರಿಕ ಚುನಾವಣೆಯ ಅಖಾಡದಲ್ಲಿ ಹೀನಾಯವಾಗಿ ಸೋತ ಡೊನಾಲ್ಡ್ ಟ್ರಂಪ್ ಅವರಿಗಿಂತಲೂ ಕೆಟ್ಟ ಪರಿಸ್ಥಿತಿ ನಮ್ಮ ಪ್ರಧಾನ ಮಂತ್ರಿಗಾಗಿ ಕಾಯುತ್ತಿದೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಗುಜರಾತ್​ ಮುನ್ಸಿಪಲ್ ಚುನಾವಣೆ; ಕಾಂಗ್ರೆಸ್ ಸ್ಥಾನಗಳನ್ನು ಕಸಿದುಕೊಂಡರಾ ಓವೈಸಿ, ಕೇಜ್ರಿವಾಲ್, ಮಾಯಾವತಿ​?

"ನಾನು ವಿಧಾನಸಭಾ ಚುನಾವಣೆಯಲ್ಲಿ ಗೋಲ್‌ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತೇನೆ. ಈ ವೇಳೆ ಬಿಜೆಪಿಗೆ ಒಂದೇ ಒಂದು ಗೋಲು ಗಳಿಸಲು ನಾನು ಬಿಡುವುದಿಲ್ಲ" ಎಂದು ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ವಿರುದ್ಧ ಸವಾಲು ಹಾಕಿದ್ದಾರೆ.
Youtube Video
ಕಲ್ಲಿದ್ದಲು ಮಾಫಿಯಾದಿಂದ ಲಂಚ ಪಡೆದ ಪ್ರಕರಣದಲ್ಲಿ ಮಮತಾರವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೆಕ್ ಬ್ಯಾನರ್ಜಿ ಹಾಗೂ ಅವರ ಪತ್ನಿ ರುಜೀರಾ ಅವರನ್ನು ಸಿಬಿಐ ಅಧಿಕಾರಿಗಳು ಮನೆಯಲ್ಲೇ  ಪ್ರಶ್ನಿಸಿದ್ದರು. ಈ ಘಟನೆ ಸಾಮಾನ್ಯವಾಗಿ ಮಮತಾ ಬ್ಯಾನರ್ಜಿಯವರನ್ನು ಕೆರಳಿಸಿದ್ದು, ಇದೇ ಕಾರಣಕ್ಕೆ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ತಮ್ಮ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ.
Published by: MAshok Kumar
First published: February 24, 2021, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories