news18-kannada Updated:January 18, 2021, 6:00 PM IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ್ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ತಮ್ಮ ಕ್ಷೇತ್ರ ಘೋಷಣೆ ಮಾಡಿದ ಬಳಿಕ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ತಮ್ಮ ಆಪ್ತ ಸುವೇಂದು ಅಧಿಕಾರಿ ಕ್ಷೇತ್ರದಿಂದ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಪಕ್ಷ ಸುವೆಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಪಾಳೆಯ ಸೇರಿದ್ದರು. ನಂದಿಗ್ರಾಂನ ತೆಖಾಲಿಯಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ನಂದಿಗ್ರಾಂ ನನಗೆ ಹೃದಯಕ್ಕೆ ಹತ್ತಿರವಿರುವ ಕ್ಷೇತ್ರ. ನಾನು ನನ್ನ ಹೆಸರನ್ನು ಮರೆತು ಬಿಡಬಹುದು. ಆದರೆ, ನಂದಿಗ್ರಾಂ ಹೆಸರನ್ನಲ್ಲ. ನಂದಿಗ್ರಾಂನ ಜನರೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ, ಈ ಹಿನ್ನೆಲೆ ಮುಂಬರುವ ಚುನಾವಣೆಯಲ್ಲಿ ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಕ್ಷೇತ್ರ ಘೋಷಿಸುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ದೀದಿ ರಾಜಕೀಯದಿಂದ ಹೆದರಿ ಅವರು ತಮ್ಮ ಹಳೆ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ. ಈ ಹಿಂದೆ ಮಮತಾ ದಕ್ಷಿಣ ಕೊಲ್ಕತ್ತಾದ ಭವಾನಿಪೋರ್ನಿಂದ ಸ್ಪರ್ಧಿಸಿ ಗೆದ್ದಿದ್ದರು.
ಸಾಧ್ಯವಾದರೆ ನಾನು ನಂದಿಗ್ರಾಮ್ ಮತ್ತು ಭವಾನಿಪೋರ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವೆ. ಒಂದು ವೇಳೆ ಭವಾನಿಪೋರ್ನಿಂದ ಸ್ಪರ್ಧಿಸಲು ವಿಫಲವಾದರೆ ಪಕ್ಷದ ಮತ್ತೊಬ್ಬರು ಕಣಕ್ಕೆ ಇಳಿಯಲಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಸುವೇಂದು ಅಧಿಕಾರಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಬಂಗಾಳವನ್ನು ಮಾರಲು ಪಕ್ಷ ತೊರೆದವರಿಗೆ ಧನ್ಯವಾದಗಳು. ತಾವೆಂದು ರಾಜ್ಯವನ್ನು ಬಿಜೆಪಿಗೆ ಮಾರಲು ಬಿಡುವುದಿಲ್ಲ . ನಾನು ಜೀವಂತವಾಗಿರುವವರೆಗೂ ಬಿಜೆಪಿಗೆ ಬಂಗಾಳವನ್ನು ಮಾರಲು ಬಿಡುವುದಿಲ್ಲ ಎಂದಿದ್ದಾರೆ
ಇದನ್ನು ಓದಿ: ಮೊರಾದಾಬಾದ್ ಆರೋಗ್ಯ ಕಾರ್ಯಕರ್ತನ ಸಾವಿಗೆ ಕೊರೋನಾ ಲಸಿಕೆ ಕಾರಣವಲ್ಲ; ಆರೋಗ್ಯ ಸಚಿವಾಲಯ
ಇನ್ನು ತಮ್ಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಕಣಕ್ಕೆ ಇಳಿಯುತ್ತಿರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ತಮ್ಮ ಸ್ಪರ್ಧೆ ಬಗ್ಗೆ ಗುಟ್ಟು ಬಿಟ್ಟುಕೊಡದ ಸುವೇಂದು ನಂದಿಗ್ರಾಂದ ಸಮಾವೇಶದಲ್ಲಿ ತಮ್ಮ ನಿರ್ಧಾರದ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ.
ಇದೇ ಮಾರ್ಚ್- ಎಪ್ರಿಲ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಟಿಎಂಸಿ ಹಾಗೂ ಬಿಜೆಪಿಗೆ ಇದು ಪ್ರತಿಷ್ಠೆಯಾಗಿದೆ. ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ
ಚರ್ಚಾ ಬಿಂದುವಾಗಿರುವ ನಂದಿಗ್ರಾಮ್
ಈ ಹಿಂದೆ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್)ನಿಂದಾಗಿ ಈ ನಂದಿಗ್ರಾಮ್ ಸುದ್ದಿಯಲ್ಲಿತ್ತು. ಎಸ್ಇಜೆಡ್ ಗಾಗಿ ಬಲವಂತದ ಭೂ ಸ್ವಾಧೀನ ನಡೆಸಿದಾಗ ಮಮತಾ ಬ್ಯಾನರ್ಜಿ ನಡೆಸಿದ ಹೋರಾಟ ಅವರನ್ನು 2011ರಲ್ಲಿ ಅಧಿಕಾರ ಗದ್ದುಗೆಗೆ ಏರುವಂತೆ ಮಾಡಿತು. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ 34 ವರ್ಷಗಳ ಎಡಪಂಥೀಯ ಆಡಳಿತ ಅಂತ್ಯಗೊಂಡಿತು.
Published by:
Seema R
First published:
January 18, 2021, 5:59 PM IST