ರಾಜಕೀಯವಲ್ಲ. ಇದೊಂದು ಸಹಜ ಭೇಟಿ; ಪ್ರಧಾನಿ ಮೋದಿ ಜೊತೆ ಮಮತಾ ಮಾತುಕತೆ

ಇದು ಸಹಜ ಭೇಟಿಯಾಗಿದ್ದು, ಯಾವುದೇ ರಾಜಕೀಯ ಭೇಟಿಯಲ್ಲ. ಒಂದು ವೇಳೆ ಅಮಿತ್​ ಶಾ ಸಮಯ ನೀಡಿದರೆ, ಅವರನ್ನು ಕೂಡ ನಾನು ನಾಳೆ ಭೇಟಿಯಾಗುತ್ತೇನೆ ಎಂದು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದರು.

Seema.R | news18-kannada
Updated:September 18, 2019, 6:01 PM IST
ರಾಜಕೀಯವಲ್ಲ. ಇದೊಂದು ಸಹಜ ಭೇಟಿ; ಪ್ರಧಾನಿ ಮೋದಿ ಜೊತೆ ಮಮತಾ ಮಾತುಕತೆ
ಮಮತಾ ಬ್ಯಾನರ್ಜಿ- ನರೇಂದ್ರ ಮೋದಿ
  • Share this:
ನವದೆಹಲಿ (ಸೆ.18): ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವೆ ಉತ್ತಮ ಸಂಬಂಧ ಏರ್ಪಡುವ ಉದ್ದೇಶದಿಂದ ಹಾಗೂ ಅನುದಾನದ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ಭೇಟಿ ವೇಳೆ ಮಮತಾ ಪ್ರಧಾನಿ ಮೋದಿಗೆ, ಕುರ್ತಾ ಮತ್ತು ಸ್ವೀಟ್​ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ನಿರುದ್ಯೋಗ ಕುರಿತು ವಿಷಯ ಚರ್ಚೆ ನಡೆಸಿದರು.

ಇದು ಸಹಜ ಭೇಟಿಯಾಗಿದ್ದು, ಯಾವುದೇ ರಾಜಕೀಯ ಭೇಟಿಯಲ್ಲ. ಒಂದು ವೇಳೆ ಅಮಿತ್​ ಶಾ ಸಮಯ ನೀಡಿದರೆ, ಅವರನ್ನು ಕೂಡ ನಾನು ನಾಳೆ ಭೇಟಿಯಾಗುತ್ತೇನೆ ಎಂದು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದರು.

West Bengal CM @MamataOfficial calls on PM @narendramodi in New Delhi. pic.twitter.com/qxFPXTmezOಈ ವೇಳೆ ಬುರ್ಬುಮ್​ನ ಗಣಿ ಯೋಜನೆ ಉದ್ಘಾಟನೆಗೂ ಕೂಡ ಆಹ್ವಾನಿಸಿದರು. ಪಶ್ಚಿಮ ಬಂಗಾಳ ಹೆಸರನ್ನು ಬಾಂಗ್ಲಾಆಗಿ ಬದಲಾವಣೆ ಕುರಿತು ಪ್ರಸ್ತಾವನೆ ಸಲ್ಲಿಸಿದರು. ಈ ವೇಳೆ ಎನ್​ಆರ್​ಸಿ ವಿಷಯದ ಕುರಿತು ಚರ್ಚೆ ನಡೆದಿಲ್ಲ  ಎಂದು ತಿಳಿಸಿದರು.ಇದನ್ನು ಓದಿ: ಮಹಾರಾಷ್ಟ್ರ ಚುನಾವಣೆ; ಸೀಟು ಹಂಚಿಕೆ ವಿಚಾರದಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಯಲ್ಲಿ ಬಿರುಕು?

ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ಈ ಇಬ್ಬರು ನಾಯಕರು ಕೂಡ ಪರಸ್ಪರ ವಾಗ್ದಾಳಿ ನಡೆಸಿದ್ದರು.

First published: September 18, 2019, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading