HOME » NEWS » National-international » MAMATA BANERJEE ACCEPTS DEFEAT IN NANDIGRAM BY BJP CANDIDATE SUVENDU ADHIKARI RHHSN

Mamata Banerjee: ಬಂಗಾಳ ಗೆದ್ದು, ನಂದಿಗ್ರಾಮದಲ್ಲಿ ಸೋತ ಮಮತಾ ಬ್ಯಾನರ್ಜಿ!

ನಂದಿಗ್ರಾಮ ವಿಧಾನಸಭಾ ಕ್ಷೇತ್ರವೂ ನೈರುತ್ಯ ಪಶ್ಚಿಮಬಂಗಾಳದ ಭಾಗವಾಗಿದೆ. ಮತ್ತು ಬಂಗಾಳದ ಪುರ್ಬಾ ಮೆದಿನಿಪುರ್ ಜಿಲ್ಲೆಯಲ್ಲಿ ಬರುತ್ತದೆ. ಈ ಸಾಮಾನ್ಯ ವಿಧಾನಸಭಾ ಕ್ಷೇತ್ರವು ಅಂದಾಜು ಶೇ. 17.22 ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ. ಈ ಕ್ಷೇತ್ರವು ಸೇರುವ ಜಿಲ್ಲೆಯ ಅಂದಾಜು ಸಾಕ್ಷರತೆಯ ಮಟ್ಟ ಶೇ. 87.66ರಷ್ಟಿದೆ. 

news18-kannada
Updated:May 2, 2021, 6:38 PM IST
Mamata Banerjee: ಬಂಗಾಳ ಗೆದ್ದು, ನಂದಿಗ್ರಾಮದಲ್ಲಿ ಸೋತ ಮಮತಾ ಬ್ಯಾನರ್ಜಿ!
ಮಮತಾ ಬ್ಯಾನರ್ಜಿ
  • Share this:
ಕೋಲ್ಕತ್ತ: ಮಮತಾ ಬ್ಯಾನರ್ಜಿ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದು ಬಹುತೇಕ ಪಕ್ಕಾ ಆಗಿದೆ. 292 ಕ್ಷೇತ್ರಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ. ಆದರೆ, ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಮತಾ ಅವರು ತಾವು ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಮಾತ್ರ ಸೋತಿದ್ದಾರೆ.

ಇಂದು ಬೆಳಗ್ಗೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಟಿಎಂಸಿ ನಾಗಾಲೋಟದಲ್ಲಿ ಮುನ್ನಡೆಯುತ್ತಿದ್ದರೆ, ಮಮತಾ ಬ್ಯಾನರ್ಜಿ ಅವರು ಮಾತ್ರ ತೀವ್ರ ಹಿನ್ನಡೆ ಅನುಭವಿಸಿದ್ದರು. ಒಂದು ಕಾಲದ ತಮ್ಮ ಆಪ್ತ ಸಹಾಯಕ ಸುವೇಂದು ಅಧಿಕಾರಿ ಟಿಎಂಸಿಗೆ ಗುಡ್​ಬೈ ಹೇಳಿ, ಬಿಜೆಪಿಯಿಂದ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಅಧಿಕಾರಿಗೆ ಪಾಠ ಕಲಿಸುವ ಸಲುವಾಗಿ ಮಮತಾ ಬ್ಯಾನಿರ್ಜಿ ಅವರು ತಾವು ಸ್ಪರ್ಧೆ ಮಾಡುತ್ತಿದ್ದ ಕ್ಷೇತ್ರವನ್ನು ಬಿಟ್ಟು ನಂದಿಗ್ರಾಮದಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಅಂದುಕೊಂಡಂತೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಮೊದಲ ಸುತ್ತಿನ ಮತ ಎಣಿಕೆ ಆರಂಭದಿಂದಲೂ ಮಧ್ಯಾಹ್ನದವರೆಗೂ ಸುವೇಂದು ಅಧಿಕಾರಿ ಮುನ್ನಡೆ ಕಾಯ್ದುಕೊಂಡಿದ್ದರು. ಒಂದು ಹಂತದಲ್ಲಿ 30 ಸಾವಿರಕ್ಕೂ ಅಧಿಕ ಮತಗಳಿಂದ ಅಧಿಕಾರಿ ಮುಂದಿದ್ದರು. ಕೊನೆಗೆ 1622 ಮತಗಳ ಅಂತರದಿಂದ ಸೋಲೊಪ್ಪಿಕೊಂಡರು.

ಇದನ್ನು ಓದಿ: Election Results 2021: ಬಂಗಾಳದಲ್ಲಿ ಮುಗ್ಗರಿಸಲಿದೆ ಬಿಜೆಪಿ, ಎರಡಂಕಿಯೂ ದಾಟುವುದಿಲ್ಲ; ನಿಜವಾಯ್ತು ಪ್ರಶಾಂತ್ ಕಿಶೋರ್ ಭವಿಷ್ಯ!

ನಂದಿಗ್ರಾಮ ವಿಧಾನಸಭಾ ಕ್ಷೇತ್ರವೂ ನೈರುತ್ಯ ಪಶ್ಚಿಮಬಂಗಾಳದ ಭಾಗವಾಗಿದೆ. ಮತ್ತು ಬಂಗಾಳದ ಪುರ್ಬಾ ಮೆದಿನಿಪುರ್ ಜಿಲ್ಲೆಯಲ್ಲಿ ಬರುತ್ತದೆ. ಈ ಸಾಮಾನ್ಯ ವಿಧಾನಸಭಾ ಕ್ಷೇತ್ರವು ಅಂದಾಜು ಶೇ. 17.22 ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ. ಈ ಕ್ಷೇತ್ರವು ಸೇರುವ ಜಿಲ್ಲೆಯ ಅಂದಾಜು ಸಾಕ್ಷರತೆಯ ಮಟ್ಟ ಶೇ. 87.66ರಷ್ಟಿದೆ. 2021 ರ ಚುನಾವಣೆಯಲ್ಲಿ ಒಟ್ಟು 2,57,156 ಅರ್ಹ ಮತದಾರರು ಇದ್ದರು, ಅದರಲ್ಲಿ 1,33,257 ಪುರುಷರು, 1,23,898 ಮಹಿಳೆಯರು ಮತ್ತು 1 ನೋಂದಾಯಿತ ಮತದಾರರು ಮೂರನೇ ಲಿಂಗದವರು ಇದ್ದರು.

Published by: HR Ramesh
First published: May 2, 2021, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories