ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅಥವಾ ದೇವೇಗೌಡ; ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇನು?

ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ದೇವೇಗೌಡ ಇಬ್ಬರೂ ರಾಜ್ಯದ ಪ್ರಭಾವಿ ನಾಯಕರು. ಆದರೆ, ಈ ಇಬ್ಬರೂ ನಾಯಕರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ದುರಾದೃಷ್ಟವಶಾತ್ ಸೋಲನುಭವಿಸಿದ್ದರು. ಹೀಗಾಗಿ ಸಂಸತ್‌ನಲ್ಲಿ ರಾಜ್ಯದ ಪ್ರಬಲ ದ್ವನಿ ಅಡಗಿದಂತಾಗಿತ್ತು.

news18-kannada
Updated:June 3, 2020, 2:53 PM IST
ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅಥವಾ ದೇವೇಗೌಡ; ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇನು?
ದೇವೇಗೌಡ-ಮಲ್ಲಿಕಾರ್ಜುನ ಖರ್ಗೆ.
  • Share this:
ಬೆಂಗಳೂರು (ಜೂನ್ 03); ರಾಜ್ಯಸಭೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತಾರು ಲೆಕ್ಕಾಚಾರಗಳು ಗರಿಗೆದರಿವೆ. ಕಾಂಗ್ರೆಸ್‌ನಿಂದ ಈ ಹಿಂದೆ ದೇವೇಗೌಡರನ್ನೇ ಬೆಂಬಲಿಸಿ ರಾಜ್ಯಸಭೆಗೆ ಕಳುಹಿಸುವ ಕುರಿತು ಮಾತುಗಳು ಚಾಲ್ತಿಯಲ್ಲಿದ್ದವು. ಆದರೆ, ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಏಕೆ ರಾಜ್ಯಸಭೆಗೆ ಕಳುಹಿಸಬಾರದು? ಎಂಬ ಮಾತುಗಳು ಕೈ ಪಾಳಯದಿಂದ ಕೇಳಿ ಬರುತ್ತಿವೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ದೇವೇಗೌಡ ಇಬ್ಬರೂ ರಾಜ್ಯದ ಪ್ರಭಾವಿ ನಾಯಕರು. ಆದರೆ, ಈ ಇಬ್ಬರೂ ನಾಯಕರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ದುರಾದೃಷ್ಟವಶಾತ್ ಸೋಲನುಭವಿಸಿದ್ದರು. ಹೀಗಾಗಿ ಸಂಸತ್‌ನಲ್ಲಿ ರಾಜ್ಯದ ಪ್ರಬಲ ದ್ವನಿ ಅಡಗಿದಂತಾಗಿತ್ತು.

ಹೀಗಾಗಿ ಈ ಇಬ್ಬರೂ ನಾಯಕರನ್ನೂ ರಾಜ್ಯಸಭೆಗಾದರು ನಾಮನಿರ್ದೇಶನ ಮಾಡಬೇಕು ಎಂಬ ಕೂಗು ಇದೀಗ ಕೇಳಿ ಬರುತ್ತಿದೆ. ಆದರೆ, ರಾಜ್ಯಸಭೆಗೆ ಪ್ರಸ್ತುತ ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ಕೋಟಾ ಇದ್ದು, ಹೈಕಮಾಂಡ್ ಈ ಇಬ್ಬರು ನಾಯಕರಲ್ಲಿ ಯಾರನ್ನು ಸಂಸತ್‌ಗೆ ಕಳುಹಿಸಲಿದೆ ಎಂಬ ವಿಚಾರ ಇದೀಗ ಮಹತ್ವ ಪಡೆದುಕೊಂಡಿದೆ.

ಈ ಕುರಿತು ಇಂದು ಹೇಳಿಕೆ ನೀಡಿರುವ ಮಾಜಿ ಸಂಸದ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ, “ ರಾಜ್ಯನಾಯಕರು ಹೈಕಮಾಂಡ್ ಗೆ ಪತ್ರ ಕಳಿಸುತ್ತಾರೆ. ಎಲ್ಲವನ್ನೂ ವಿಚಾರಿಸಿ ಹೈಕಮಾಂಡ್ ನಿರ್ಧರ ತೆಗೆದುಕೊಳ್ಳುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಇನ್ನೂ ಈ ಸ್ಥಾನಕ್ಕೆ ಹರಿಪ್ರಸಾದ್ ಅಥವಾ ರಾಜೀವ್ ಗೌಡ ಯಾರೇ ಆಗಲಿ ನಾವು ಸಲಹೆಯನ್ನ ಕೊಡುವುದಕ್ಕೂ ಅವಕಾಶವಿಲ್ಲ” ಎಂದು ತಿಳಿಸಿದ್ದಾರೆ.

ಇನ್ನೂ ದೇವೇಗೌಡ ವಿಚಾರವನ್ನೂ ಪ್ರಸ್ತಾಪಿಸಿರುವ ಅವರು, “ಇತ್ತೀಚೆಗೆ ನಾವು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೆವು. ಈಗಲೂ ಅಂತಹ ಅವಕಾಶವಿದೆ. ದೇವೇಗೌಡರು ಹಿಂಬಾಗಿಲ ಮೂಲಕ ಎಂದೂ ಅಧಿಕಾರ ಹಿಡಿದವರಲ್ಲ. ಅವರೊಬ್ಬ ಅಪ್ಪಟ ರೈತ ಹೋರಾಗಾರ. ಹೈಕಮಾಂಡ್ ಅವರಿಗೆ ಅವಕಾಶ ಮಾಡಿಕೊಟ್ಟರೆ ಉತ್ತಮ. ಮಾಜಿ ಪ್ರಧಾನಿಯಾಗಿದ್ದವರಿಗೆ ಹೈಕಮಾಂಡ್ ಅವಕಾಶ ನೀಡಬೇಕು” ಎಂದಿದ್ದಾರೆ. ಆದರೆ, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ? ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆ.

ಇದನ್ನೂ ಓದಿ : Nisarga Cyclone - ನಿಸರ್ಗ ಸೈಕ್ಲೋನ್​ಗೆ ಹೆಸರಿಟ್ಟವರಾರು? ಚಂಡಮಾರುತಗಳಿಗೆ ಹೆಸರಿಡುವ ವಿಶೇಷ ವ್ಯವಸ್ಥೆಯ ಬಗ್ಗೆ ತಿಳಿದಿರಿ
First published: June 3, 2020, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading