ನವದೆಹಲಿ: ಇತ್ತೀಚೆಗೆ ಲಂಡನ್‌ಗೆ (London) ಹೋಗಿದ್ದ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಭಾರತಕ್ಕೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಬಿಜೆಪಿ ನಾಯಕರು (BJP Leaders) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಈ ಆರೋಪಕ್ಕೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ನೀವು ಮಾಡಿದ್ದೇನು ಅನ್ನೋದು ನಿಮಗೆ ನೆನಪಿಲ್ಲವೇ ಎಂದು ತಿರುಗು ಬಾಣ ಬಿಟ್ಟಿದ್ದಾರೆ.
ಈ ಸಂಬಂಧ ತಮ್ಮ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ಚೀನಾದಲ್ಲಿ ಹಾಗೂ ದಕ್ಷಿಣ ಕೊರಿಯಾದಲ್ಲಿ ಭಾರತಕ್ಕೆ ಅವಮಾನವಾಗುವಂತೆ ಖುದ್ದು ನೀವೇ ಮಾತನಾಡಿದ್ದಿರಿ. ನಿಮಗೆ ನೆನಪಿಲ್ಲವೇ? ದಯವಿಟ್ಟು ನಿಮ್ಮ ನೆನಪಿನ ಶಕ್ತಿಯನ್ನು ಸಾಣೆ ಹಿಡಿದು, ಆ ದೇಶಗಳಲ್ಲಿ ನೀವು ಏನು ಹೇಳಿದ್ದಿರಿ ಎಂಬುದನ್ನು ಒಮ್ಮೆ ಜ್ಞಾಪಿಸಿಕೊಳ್ಳಿ ಎಂದು ಖರ್ಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Pragati Meet: ಯೋಜನೆ 13 ವರ್ಷ ವಿಳಂಬ, ದುಪ್ಪಟ್ಟು ಖರ್ಚು: ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮೋದಿ ಕ್ಲಾಸ್!
'ಇದು ಭಾರತಕ್ಕೆ ಮಾಡಿದ ಅಪಮಾನವಲ್ಲವೇ ಮೋದಿಯವರೇ?'
ಹಿಂದೊಮ್ಮೆ ನೀವು ಚೀನಾದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ‘ನನಗೆ ಮೊದಲು, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು ನಾಚಿಕೆ ಎನಿಸುತ್ತಿತ್ತು. ಈಗ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಿರಿ. ಇದು ಭಾರತಕ್ಕೆ ಮಾಡಿದ ಅಪಮಾನವಲ್ಲವೇ ಮೋದಿಯವರೇ ಎಂದು ಪ್ರಶ್ನಿಸಿರುವ ಮಲ್ಲಿಕಾರ್ಜುನ ಖರ್ಗೆ, ನೀವಷ್ಟೇ ಅಲ್ಲ, ನಿಮ್ಮ ಸಂಪುಟದ ಸದಸ್ಯರಿಗೂ ಅವರ ನೆನಪಿನ ಶಕ್ತಿಯನ್ನು ಬಳಸಿಕೊಂಡು ಈ ವಿಚಾರವನ್ನು ನೆನೆಪಿಸಿಕೊಳ್ಳುವಂತೆ ಹೇಳಿ ಎಂದು ಹೇಳಿದ್ದಾರೆ.
ಇದು ಮಾತ್ರವಲ್ಲ ಕೆಲ ವರ್ಷಗಳ ಹಿಂದೆ ನೀವು ಒಮ್ಮೆ ದಕ್ಷಿಣ ಕೊರಿಯಾದಲ್ಲಿ ಭಾಷಣ ಮಾಡಿದ್ದಿರಿ. ಅದರಲ್ಲಿ ನೀವು ‘ಹಿಂದಿನ ಕಾಲದಲ್ಲಿ ಭಾರತದಲ್ಲಿ ವಾಸಿಸುವ ಜನರು, ಕಳೆದ ಜನ್ಮದಲ್ಲಿ ನಾವು ಯಾವುದೋ ಪಾಪ ಮಾಡಿದ್ದರ ಫಲವಾಗಿ ನಾವಿಂದು ಭಾರತದಲ್ಲಿ ಜನ್ಮಿಸಿದ್ದೇವೆ ಎಂದು ಹೇಳುತ್ತಿದ್ದರು’ ಎಂದು ಹೇಳಿದ್ದಿರಿ. ಇದು ಭಾರತಕ್ಕೆ ಮಾಡಿದ ಅಪಮಾನವಲ್ಲವೇ ಮೋದಿಯವರೇ ಎಂದು ಪ್ರಶ್ನಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಪಕ್ಷಕ್ಕೆ ದೇಶಾಭಿಮಾನದ ಪ್ರವಚನ ನೀಡುವ ಮೊದಲು ‘ಸತ್ಯದ ಕನ್ನಡಿಯನ್ನು ನೋಡಿ ಮೋದಿಯವರೇ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಲಂಡನ್ ಪ್ರವಾಸದಲ್ಲಿದ್ದ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿವಿ ಹಾಗೂ ಇನ್ನಿತರ ಕಡೆಗಳಲ್ಲಿ ನೀಡಿದ ಉಪನ್ಯಾಸಗಳಲ್ಲಿ ಹಾಗೂ ಅಲ್ಲಿನ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಭಾರತದಲ್ಲಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟೀಕಿಸಿದ್ದರು.
ಲೋಕಸಭೆಯಲ್ಲಿ ಆಗಾಗ್ಗೇ ವಿಪಕ್ಷಗಳ ವಿರುದ್ಧ ಮೈಕ್ರೋಫೋನ್ ಗಳನ್ನು ನಿಶ್ಯಬ್ದಗೊಳಿಸಲಾಗುತ್ತದೆ. ದುರಸ್ತಿಯಾಗಬೇಕಿದ್ದ ಮೈಕ್ರೋಫೋನ್ ಒಂದರ ಸಹಾಯದಿಂದ, ಆ ಪರಿಸ್ಥಿತಿಯನ್ನು ಭಾರತದಲ್ಲಿ ವಿಪಕ್ಷಗಳನ್ನು ತುಳಿಯಲಾಗುತ್ತಿದೆ. ನಾನು ಮಾತನಾಡುತ್ತಿದ್ದಾಗ ಹಲವು ಬಾರಿ ನನಗೆ ಇದರ ಅನುಭವ ಆಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Karnataka Election 2023: ಖರ್ಗೆಗೆ ತವರು ಗೆಲ್ಲುವ ಸವಾಲು; ಕರ್ನಾಟಕ ಟೀಂ ಜೊತೆ ಇಂದು ಮೀಟಿಂಗ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ