• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mallikarjun Kharge: ಸಂಸತ್ ಒಳಗಾಗಲೀ, ಹೊರಗಾಗಲೀ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದೇ ಇಲ್ಲ: ಖರ್ಗೆ ಆಕ್ರೋಶ

Mallikarjun Kharge: ಸಂಸತ್ ಒಳಗಾಗಲೀ, ಹೊರಗಾಗಲೀ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದೇ ಇಲ್ಲ: ಖರ್ಗೆ ಆಕ್ರೋಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಸಂಸತ್‌ನಲ್ಲಿ ತಾನು ಮಾಡಿದ ಭಾಷಣದ ಭಾಗಗಳನ್ನು ಕಿತ್ತುಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, ಸಂಸತ್‌ ಒಳಗಾಗಲೀ, ಹೊರಗಾಗಲೀ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲ. ಯಾರಾದರೂ ಮಾತನಾಡಲು ಧೈರ್ಯ ಪ್ರದರ್ಶಿಸಿದರೂ ಅವರನ್ನು ಕಂಬಿ ಹಿಂದೆ ಕಳುಹಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ರಾಂಚಿ: ಸಂಸತ್‌ನಲ್ಲಿ ಮಾಡಿದ ತಮ್ಮ ಭಾಷಣದ ಭಾಗಗಳನ್ನು ಕಿತ್ತು ಹಾಕಲಾಗಿದೆ ಎಂದು ಎಐಸಿಸಿ ಅಧ್ಯಕ್ಷ (AICC President) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಂಚಿಯ (Ranchi) ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಸತ್‌ ಒಳಗಾಗಲೀ, ಹೊರಗಾಗಲೀ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲ. ಯಾರಾದರೂ ಮಾತನಾಡಲು ಧೈರ್ಯ ಪ್ರದರ್ಶಿಸಿದರೂ ಅವರನ್ನು ಕಂಬಿ ಹಿಂದೆ ಕಳುಹಿಸುತ್ತಾರೆ ಎಂದು ಖರ್ಗೆ ಆರೋಪ ಮಾಡಿದ್ದಾರೆ.


ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಜಾರ್ಖಂಡ್‌ನಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೇ ಉಳಿದಿಲ್ಲ ಎಂದು ಆರೋಪ ಮಾಡಿದ್ದಾರೆ. ಸಂಸತ್‌ನಲ್ಲಿ ತಾನು ಮಾಡಿದ ಭಾಷಣದ ಭಾಗಗಳನ್ನು ಕಿತ್ತುಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಂಸತ್‌ ಒಳಗಾಗಲೀ, ಹೊರಗಾಗಲೀ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲ. ಯಾರಾದರೂ ಮಾತನಾಡಲು ಧೈರ್ಯ ಪ್ರದರ್ಶಿಸಿದರೂ ಅವರನ್ನು ಕಂಬಿ ಹಿಂದೆ ಕಳುಹಿಸುತ್ತಾರೆ ಎಂದು ಆರೋಪಿಸಿದ್ದಾರೆ.


ಹಾತ್‌ ಸೆ ಹಾತ್‌ ಜೋಡೋ ಕಾರ್ಯಕ್ರಮಕ್ಕೆ ಚಾಲನೆ


ಜಾರ್ಖಂಡ್ ರಾಜ್ಯದಲ್ಲಿ ಜನರನ್ನು ತಲುಪುವ ಪಕ್ಷದ 60 ದಿನಗಳ ಕಾಲ ನಡೆಯುವ 'ಹಾತ್ ಸೆ ಹಾತ್ ಜೋಡೋ' ಕಾರ್ಯಕ್ರಮಕ್ಕೆ ಪಾಕೂರ್‌ನ ಗುಮಾನಿ ಮೈದಾನದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಣದುಬ್ಬರ ನಿಯಂತ್ರಿಸುವ ಭರವಸೆ ನೀಡಿ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ, ಅದು ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಹಾಗೂ ಬಡತನ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಮೂಲ ಸೌಕರ್ಯವನ್ನು ಅಭಿವೃದ್ಧಿ ಪಡಿಸಿದ್ದು ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಅವರು ಹೇಳಿದರು.


ಇದನ್ನೂ ಓದಿ: Narendra Modi: 60 ವರ್ಷದಲ್ಲಿ ಕಾಂಗ್ರೆಸ್ ಎಲ್ಲೆಂದರಲ್ಲಿ ಗುಂಡಿ ತೋಡಿದ್ದು ಬಿಟ್ಟರೆ ಬೇರೆ ಏನೂ ಮಾಡಲೇ ಇಲ್ಲ: ಮೋದಿ


ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು


ಇನ್ನು ಪಕ್ಷದ ವತಿಯಿಂದ ನಡೆಯುವ 60 ದಿನಗಳ 'ಹಾತ್ ಸೆ ಹಾತ್ ಜೋಡೋ' ಕಾರ್ಯಕ್ರಮದಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ, ಕೇಂದ್ರದ ನೀತಿಗಳು ಜನ ವಿರೋಧಿ ಆಗಿದೆ ಎಂದು ಜನರಿಗೆ ತಿಳಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ, ಜನರು ನೆಮ್ಮದಿಯಿಂದ ಬದುಕಬೇಕಾದರೆ, ಶಾಂತಿ ಸೌಹಾರ್ದತೆಯಿಂದ ಬಾಳಬೇಕಾದರೆ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಬೇಕು. ನೀವೆಲ್ಲರೂ ಇದಕ್ಕೆ ಕೈ ಜೋಡಿಸಿದರೆ ಮಾತ್ರ ಇದು ಸಾಧ್ಯ ಎಂದು ಹೇಳಿದರು.


60 ದಿನಗಳ ಕಾಲ ನಡೆಯುವ 'ಹಾತ್ ಸೆ ಹಾತ್ ಜೋಡೋ' ಕಾರ್ಯಕ್ರಮ ಉದ್ಘಾಟನಾ ಸಮಾವೇಶದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ, ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್, ಸಚಿವ ಅಲಂಗೀರ್ ಅಲಂ ಸೇರಿದಂತೆ ಜಾರ್ಖಂಡ್‌ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.


ಇದನ್ನೂ ಓದಿ: Mallikarjun Kharge: ಅಧ್ಯಕ್ಷರಾದ ನಂತರ ಮೊದಲ ಬಾರಿ ರಾಜ್ಯಕ್ಕೆ ಮಲ್ಲಿಕಾರ್ಜುನ್ ಖರ್ಗೆ, ಭರ್ಜರಿ ಸ್ವಾಗತಕ್ಕೆ ಕೈ ನಾಯಕರ ತಯಾರಿ


ಗಾಂಧಿ ಕುಟುಂಬವನ್ನು ಕುಟುಕಿದ್ದ ಮೋದಿ


ಸಂಸತ್‌ನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಯಾವುದೇ ಕಾರ್ಯಕ್ರಮವೊಂದರಲ್ಲಿ ನೆಹರೂ ಅವರ ಹೆಸರನ್ನು ಉಲ್ಲೇಖಿಸದಿದ್ದರೆ, ಕಾಂಗ್ರೆಸ್ ಆಕ್ರೋಶಗೊಳ್ಳುತ್ತಿತ್ತು. ಆದರೆ, ನೆಹರೂ ಅವರ ತಲೆಮಾರಿನವರು ನೆಹರೂ ಉಪನಾಮವನ್ನು ಬಳಸಲು ಏಕೆ ಹೆದರುತ್ತಾರೆ? ಅಂತಹ ಮಹಾನ್ ವ್ಯಕ್ತಿಯ ಉಪನಾಮವನ್ನು ಬಳಸಲು ನಾಚಿಕೆಯೇ? ಎಂದು ಪ್ರಶ್ನಿಸಿದ್ದರು.
ಅಲ್ಲದೇ, ದೇಶದಲ್ಲಿ 600 ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ತಿಳಿದುಕೊಂಡಿದ್ದೇನೆ. ಆದರೆ, ಒಬ್ಬ ವ್ಯಕ್ತಿ ಸಹ ನೆಹರೂ ಉಪನಾಮವನ್ನು ಏಕೆ ಇಡುವುದಿಲ್ಲ ಎಂಬುದು ನನಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿದೆ. ನೆಹರೂ ಅಂತಹ ಖ್ಯಾತ ವ್ಯಕ್ತಿಯಾಗಿದ್ದರೆ ಅವರ ಉಪನಾಮ ಬಳಸುವುದರಿಂದ ಅವಮಾನ ಏಕೆ? ಎಂದು ಮೋದಿ ಪ್ರಶ್ನಿಸಿದ್ದರು.

Published by:Avinash K
First published: