ಸಲಿಂಗಿಯೊಬ್ಬ ಅಸಭ್ಯವಾಗಿ ಮುಟ್ಟಿದಾಗ ಹೇಗಾದೀತು? ಪುರುಷರಿಗೆ ‘ಅನುಭವ’ ನೆನಪಿಸಿಕೊಟ್ಟ ಮಲ್ಲಿಕಾ

“ತನ್ನನ್ನು ಮುಟ್ಟಲು ಬರುವ ಪುರುಷನಿಗೆ, ತನ್ನ ಒಪ್ಪಿಗೆ ಇಲ್ಲವೆಂಬುದನ್ನು ಮಹಿಳೆ ಸೂಕ್ಷ್ಮವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತಾಳೆ. ಪುರುಷರಿಗೆ ಇದು ಅರ್ಥವಾದರೂ ಅರ್ಥವಾಗದವರಂತಿರುತ್ತಾರೆ, ಎಂದು ಮಲ್ಲಿಕಾ ದುವಾ ಹೇಳುತ್ತಾರೆ.

Vijayasarthy SN
Updated:October 16, 2018, 6:59 PM IST
ಸಲಿಂಗಿಯೊಬ್ಬ ಅಸಭ್ಯವಾಗಿ ಮುಟ್ಟಿದಾಗ ಹೇಗಾದೀತು? ಪುರುಷರಿಗೆ ‘ಅನುಭವ’ ನೆನಪಿಸಿಕೊಟ್ಟ ಮಲ್ಲಿಕಾ
ಹಾಸ್ಯ ನಟಿ ಮಲ್ಲಿಕಾ ದುವಾ
  • Share this:
- ಸ್ನೇಹಾ ಬೆಂಗಾನಿ, ನ್ಯೂಸ್18

ನವದೆಹಲಿ(ಅ. 16): ದೇಶಾದ್ಯಂತ #MeToo ಅಭಿಯಾನ ಇನ್ನೂ ತನ್ನ ಬಿಸಿ ಕಳೆದುಕೊಂಡಿಲ್ಲ. ಆರೋಪಿಗಳಿಂದ ಮಾನನಷ್ಟ ಮೊಕದ್ದಮೆಯ ಬೆದರಿಕೆ ಇದ್ದರೂ ಲೈಂಗಿಕ ಕಿರುಕುಳದ ಸಂತ್ರಸ್ತ ಮಹಿಳೆಯರ ದೂರು ನಿಂತಿಲ್ಲ. ಬಹುತೇಕ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಅವೆಲ್ಲವೂ ಸುಳ್ಳು ಆರೋಪಗಳೆಂದೋ, ಸಮ್ಮತಿ ಸೆಕ್ಸ್ ಎಂದೋ ತಳ್ಳಿಹಾಕಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದ ನಂತರವೂ ಆರೋಪಿ ಜೊತೆ ಕೆಲಸದಲ್ಲಿ ಮುಂದುವರಿದಿರುವುದನ್ನು ಇಟ್ಟುಕೊಂಡು ಮಹಿಳೆಯ ಚಾರಿತ್ರ್ಯವಧೆ ಮಾಡುವ ಪ್ರಯತ್ನಗಳೂ ನಡೆದಿವೆ. ಮಹಿಳೆಯನ್ನು ಕ್ಯಾಷುಯಲ್ ಆಗಿ ಮುಟ್ಟುವುದೇ ಅಪರಾಧವಾ ಎಂಬ ಪ್ರಶ್ನೆಯನ್ನು ಹಲವು ಪುರುಷರು ಎತ್ತಿದ್ದಾರೆ. ಈ ಸೂಕ್ಷ್ಮ ವಿಚಾರದ ಬಗ್ಗೆ ಖ್ಯಾತ ಹಾಸ್ಯ ನಟಿ ಮಲ್ಲಿಕಾ ದುವಾ ಮಾತನಾಡಿದ್ಧಾರೆ.

ನ್ಯೂಸ್18 ವಾಹಿನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಲ್ಲಿಕಾ ದುವಾ, “ಒಬ್ಬ ಮಹಿಳೆ ಎಲ್ಲಾ ಸಂದರ್ಭಗಳಲ್ಲೂ ಗಟ್ಟಿಯಾಗಿ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಹೋಗಬಹುದು. ತನ್ನನ್ನು ಮುಟ್ಟಲು ಬರುವ ಪುರುಷನಿಗೆ, ತನ್ನ ಒಪ್ಪಿಗೆ ಇಲ್ಲವೆಂಬುದನ್ನು ಮಹಿಳೆ ಸೂಕ್ಷ್ಮವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತಾಳೆ. ಪುರುಷರಿಗೆ ಇದು ಅರ್ಥವಾದರೂ ಅರ್ಥವಾಗದವರಂತಿರುತ್ತಾರೆ. ಸಲಿಂಗಿಯೊಬ್ಬ ಬಂದು ಅಸಭ್ಯವಾಗಿ ಮೈಮುಟ್ಟಿದರೆ ಹೇಗಿದ್ದೀತು? ಪುರುಷನೊಬ್ಬನ ಅಸಭ್ಯ ವರ್ತನೆ ಕೂಡ ಮಹಿಳೆಯರಿಗೆ ಅದೇ ಯಾತನೆ ಕೊಡುತ್ತದೆ. ಪುರುಷನಿಗೆ ಇದು ಗೊತ್ತಿಲ್ಲದೇ ಏನಿಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ವ್ಯಕ್ತಿಯೊಬ್ಬನ ಮೇಲಿರುವ ಲೈಂಗಿಕ ಆರೋಪವು ವೈಯಕ್ತಿಕ ವಿಚಾರವೆಂಬ ವಾದವನ್ನು ಮಲ್ಲಿಕಾ ತಳ್ಳಿಹಾಕುತ್ತಾರೆ. “ನಿಮ್ಮ ವೈಯಕ್ತಿಕ ಜೀವನದಲ್ಲಿ ರಕ್ಕಸನಾಗಿದ್ದರೆ ವೃತ್ತಿಪರ ಜೀವನದಲ್ಲೂ ಬೇರೆಯವರಿಗೆ ಅಪಾಯಕಾರಿಯಾಗಿಯೇ ಇರುತ್ತೀರಿ. ನಿಮ್ಮ ಸ್ಥಾನದಲ್ಲಿ ಉಳಿಯಲು ನೀವು ಯೋಗ್ಯರಿರುವುದಿಲ್ಲ. ನೀವು ವಿಶ್ವಾಸಾರ್ಹತೆಯನ್ನು ಕಳೆದುಕೊಂಡುಬಿಡುತ್ತೀರಿ. ಇದರ ಪ್ರತಿಫಲವನ್ನು ನೀವು ಉಣ್ಣಲೇಬೇಕು. ಅದರಲ್ಲೂ ಕಲಾವಿದರಾದ ನಮಗೆ ವೃತ್ತಿಪರ ಬದುಕಿಗೆ ನಮ್ಮ ವೈಯಕ್ತಿಕ ಜೀವನವೇ ಸ್ಫೂರ್ತಿಯಾಗಿರುತ್ತದೆ. ಹಾಗಾಗಿ ನಾವು ಸುಲಭವಾಗಿ ಕೈತೊಳೆದುಕೊಳ್ಳಲು ಆಗುವುದಿಲ್ಲ,” ಎಂದು ಮಲ್ಲಿಕಾ ದುವಾ ಹೇಳಿದ್ದಾರೆ.
First published:October 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading