ಮಹಾರಾಷ್ಟ್ರ ರಾಜಕೀಯ ಬಿಕಟ್ಟು; ನಾಳೆ ಸೋನಿಯಾ ಗಾಂಧಿ ಜೊತೆ ಮಲ್ಲಿಕಾರ್ಜುನ್​ ಖರ್ಗೆ ಚರ್ಚೆ

ಶಿವಸೇನೆ ಬೇಕಿದ್ದರೆ ಎನ್​ಸಿಪಿ-ಕಾಂಗ್ರೆಸ್​ ಜೊತೆ ಸೇರಿ ಸರ್ಕಾರ ರಚನೆ ಮಾಡಬಹುದು ಎಂದು ಬಿಜೆಪಿ ಹೇಳಿದೆ. ಈ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಸೋನಿಯಾ ಗಾಂಧಿ ಸಭೆ ಕರೆದಿದ್ದಾರೆ.

Rajesh Duggumane | news18-kannada
Updated:November 10, 2019, 9:11 PM IST
ಮಹಾರಾಷ್ಟ್ರ ರಾಜಕೀಯ ಬಿಕಟ್ಟು; ನಾಳೆ ಸೋನಿಯಾ ಗಾಂಧಿ ಜೊತೆ ಮಲ್ಲಿಕಾರ್ಜುನ್​ ಖರ್ಗೆ ಚರ್ಚೆ
ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ
  • Share this:
ಬೆಂಗಳೂರು (ನ.10): ಮಹಾರಾಷ್ಟ್ರ ವಿಧಾನಸಭಾ ಫಲಿತಾಂಶ ಬಂದು ಎರಡು ವಾರ ಕಳೆದರೂ ಸರ್ಕಾರ ರಚನೆಯಾಗಿಲ್ಲ. ಅಧಿಕಾರ ಹಂಚಿಕೆಯಲ್ಲಿ ಬಿಜೆಪಿ-ಶಿವಸೇನೆ ನಡುವೆ ಒಮ್ಮತ ಮೂಡಿಲ್ಲ. ಹೀಗಾಗಿ ಮಹರಾಷ್ಟ್ರದಲ್ಲಿ ಅಂತತ್ರ ಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವಾಗಿ ಚರ್ಚೆ ಮಾಡಲು ರಾಜ್ಯ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ನಾಯಕರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರಂತೆ.

ಅಕ್ಟೋಬರ್​ 24ರಂದು ಚುನಾವಣಾ ಫಲಿತಾಂಶ ಹೊರ ಬಿದ್ದಿತ್ತು. 288 ಕ್ಷೇತ್ರಗಳ ಪೈಕಿ ಬಿಜೆಪಿ 105, ಶಿವಸೇನೆ 76, ಕಾಂಗ್ರೆಸ್​ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್​ ಮಿತ್ರಪಕ್ಷವಾದ ಎನ್​ಸಿಪಿ 54 ಸ್ಥಾನಗಳಲ್ಲಿ ಗೆದ್ದಿದೆ. ಹೀಗಾಗಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಬಿಜೆಪಿಯನ್ನು ರಾಜ್ಯಪಾಲ ಭಗತ್​ ಸಿಂಗ್​ ಕೊಶ್ಯಾರಿ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು.

ಆದರೆ, ಭಾನುವಾರ ಇದರಿಂದ ಹಿಂದೆ ಸರಿದಿರುವ ಬಿಜೆಪಿ, ಶಿವಸೇನೆ ಬೇಕಿದ್ದರೆ ಎನ್​ಸಿಪಿ-ಕಾಂಗ್ರೆಸ್​ ಜೊತೆ ಸೇರಿ ಸರ್ಕಾರ ರಚನೆ ಮಾಡಬಹುದು ಎಂದು ಹೇಳಿದೆ. ಈ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಸೋನಿಯಾ ಗಾಂಧಿ ಸಭೆ ಕರೆದಿದ್ದಾರೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ಪ್ರಮುಖ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಈ ಭೇಟಿ ಸರ್ಕಾರ ರಚನೆ, ಪಕ್ಷದ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.

First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading