HOME » NEWS » National-international » MALI WOMAN GIVING BIRTH TO NINE BABIES SESR

ಮೂರಲ್ಲ, ಐದಲ್ಲ, ಏಕಕಾಲಕ್ಕೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಈಕೆ

ಹಲಿಮಾನಿಗೆ ನಡೆಸಿದ ಅಲ್ಟ್ರಾಸೌಂಡ್​ನಲ್ಲಿ ಏಳು ಮಕ್ಕಳು ಜನಿಸಬಹುದು ಎಂದು ತಿಳಿಸಲಾಗಿತ್ತು. ಈಗ ಈ ಲೆಕ್ಕಾಚಾರ ಕೂಡ ಉಲ್ಟಾ ಆಗಿದೆ.

news18-kannada
Updated:May 5, 2021, 4:42 PM IST
ಮೂರಲ್ಲ, ಐದಲ್ಲ, ಏಕಕಾಲಕ್ಕೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಈಕೆ
9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ
  • Share this:
ಮಹಿಳೆಗಿರುವ ಅದ್ಭುತ ಶಕ್ತಿಗಳಲ್ಲಿ ಒಂದು ತಾಯ್ತಾನ. ತಮ್ಮ ಮೂಲಕ ಮತ್ತೊಂದು ಮಗುವಿಗೆ ಜನ್ಮ ನೀಡುವ ಮಹಿಳೆ ಕೆಲವೊಮ್ಮೆ ಅಚ್ಚರಿಯನ್ನು ಮೂಡಿಸುವುದಿದೆ. ಇದೇ ರೀತಿ ಮಾಲಿ ದೇಶದ ಮಹಿಳೆಯೊಬ್ಬಳು ಅಚ್ಚರಿ ಜೊತೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾಳೆ. ಸಾಮಾನ್ಯವಾಗಿ ಅವಳಿ, ತ್ರಿವಳಿಗಳಿಗೆ ಮಹಿಳೆಯರು ಜನ್ಮ ನೀಡುವುದು ಕಂಡಿದ್ದೇವೆ. ಕೆಲವೊಂದು ಅಪರೂಪದ ಘಟನೆಗಳಲ್ಲಿ 5 ಮಕ್ಕಳಿಗೆ ಜನ್ಮ ನೀಡುವುದನ್ನು ಕಂಡಿದ್ದೇವೆ, ಆದರೆ, ಈ ಮಹಿಳೆ ಏಕಕಾಲಕ್ಕೆ ಒಂಭತ್ತು ಮಕ್ಕಳಿಗೆ ಜನ್ಮ ನೀಡುವ ಮೂಲಕ ವೈದ್ಯರನ್ನು ಮಾತ್ರವಲ್ಲ ಇಡೀ ಪ್ರಪಂಚದ ಮಂದಿಯನ್ನು ಬೆಸ್ತು ಬೀಳಿಸಿದ್ದಾಳೆ. ಪಶ್ಚಿಮ ಆಫ್ರಿಕಾದ 25 ವರ್ಷದ ಮಹಿಳೆ ಈಗ ವಿಶ್ವದ ಗಮನಸೆಳೆದಿದ್ದಾರೆ.

ಈ ಕುರಿತು ಅಧಿಕೃತವಾಗಿ ತಿಳಿಸಿರುವ ಮೊರಕೊ ಸರ್ಕಾರ, ಇದೊಂದು ಅಪರೂಪದಲ್ಲಿಯೇ ಅಪರೂಪ ಘಟನೆಯಾಗಿದೆ. ಒಂಭತ್ತು ಮಕ್ಕಳು ಕೂಡ ಆರೋಗ್ಯವಾಗಿದ್ದಾವೆ ಎಂದು ತಿಳಿಸಿದ್ದಾರೆ. ಇದರಲ್ಲಿ ಐದು ಮಕ್ಕಳು ಹೆಣ್ಣಾಗಿದ್ದು, ನಾಲ್ಕು ಮಕ್ಕಳು ಗಂಡಾಗಿವೆ.

Youtube Video

ಪಶ್ಚಿಮ ಆಫ್ರಿಕಾದಿಂದ ಹಲಿಮಾ ಸಿಸ್ಸೆ ಎಂಬ ವಲಸೆ ಬಂದಿದ್ದಳು, ಆಕೆ ಈಗ ಇಲ್ಲಿ ಆರೈಕೆಯಲ್ಲಿದ್ದಾಳೆ ಎಂದು ತಿಳಿಸಲಾಗಿದೆ. ಇನ್ನು ಹಲಿಮಾನಿಗೆ ನಡೆಸಿದ ಅಲ್ಟ್ರಾಸೌಂಡ್​ನಲ್ಲಿ ಏಳು ಮಕ್ಕಳು ಜನಿಸಬಹುದು ಎಂದು ತಿಳಿಸಲಾಗಿತ್ತು. ಈಗ ಈ ಲೆಕ್ಕಾಚಾರ ಕೂಡ ಉಲ್ಟಾ ಆಗಿದೆ.

ಈ ಕುರಿತು ಮಾತನಾಡಿರುವ ವೈದ್ಯರು ಏಳು ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡುವುದು ಅಪರೂಪದ ಪ್ರಕರಣ ಅದರಲ್ಲಿ ಬಲು ಅಪರೂಪ 9 ಮಕ್ಕಳಿಗೆ ಜನ್ಮ ನೀಡುವುದಾಗಿದೆ ಎಂದಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಅವರು ಕೆಲವು ವಾರಗಳ ನಂತರ ಮತ್ತೆ ತಮ್ಮ ರಾಜ್ಯಕ್ಕೆ ಹಿಂದಿರುಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯ ಆರೋಗ್ಯದ ಬಗ್ಗೆ ಇಲ್ಲಿನ ವೈದ್ಯರು ಹೆಚ್ಚಿನ ಗಮನಹರಿಸಿದ್ದಾರೆ. ಇಲ್ಲಿನ ಸ್ಥಳೀಯ ವರದಿ ಪ್ರಕಾರ, ಮಕ್ಕಳು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.
Published by: Seema R
First published: May 5, 2021, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories