HOME » NEWS » National-international » MALEGAON BLAST CASE BJP MP PRAGYA THAKUR SKIPS COURT DATE FOR 2ND TIME THIS MONTH MAK

ಮಾಲೆಗಾಂವ್‌‌ ಸ್ಪೋಟ ಪ್ರಕರಣ: 2 ನೇ ಬಾರಿಯೂ ಕೋರ್ಟ್​ ಎದುರು ವಿಚಾರಣೆಗೆ ಹಾಜರಾಗದ ಪ್ರಜ್ಞಾ ಸಿಂಗ್ ಠಾಕೂರ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶ ಪಿ.ಆರ್​. ಸಿಟ್ರೆ ಮುಂದಿನ ಜನವರಿ 4 ರಂದು ಪ್ರಕರಣದ ಎಲ್ಲಾ ಏಳು ಜನ ಸಿಬ್ಬಂಧಿಗಳು ನ್ಯಾಯಾಲಯದ ಎದುರು ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

news18-kannada
Updated:December 20, 2020, 10:17 AM IST
ಮಾಲೆಗಾಂವ್‌‌ ಸ್ಪೋಟ ಪ್ರಕರಣ: 2 ನೇ ಬಾರಿಯೂ ಕೋರ್ಟ್​ ಎದುರು ವಿಚಾರಣೆಗೆ ಹಾಜರಾಗದ ಪ್ರಜ್ಞಾ ಸಿಂಗ್ ಠಾಕೂರ್‌
ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌.
  • Share this:
ಮುಂಬೈ; 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಪಕ್ಷದ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಈ ತಿಂಗಳು ಎರಡನೇ ಬಾರಿಗೆ ಕೋರ್ಟ್​ ಎದುರು ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಸೂಚಿಸಲಾಗಿತ್ತು. ಆದರೆ, ಈ ಬಾರಿಯೂ ಅವರು ನ್ಯಾಯಾಲಯದ ಎದುರು ಹಾಜರಾಗಿಲ್ಲ. ಈ ಕುರಿತು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅನಾರೋಗ್ಯದಿಂದಾಗಿ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿಯೇ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ಅವರ ವಕೀಲ ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಡಿಸೆಂಬರ್ ಆರಂಭದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಕೂಡಾ ಪ್ರಜ್ಞಾ ಸಹಿತ ನಾಲ್ಕು ಆರೋಪಿಗಳು ಹಾಜರಾಗಿರಲಿಲ್ಲ. ಆರೋಪಿಯು ವಿಚಾರಣೆಗೂ ಮೊದಲೇ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಆಕೆಯ ವಕೀಲ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ನ್ಯಾಯಾಲಯವು ಆಕೆಯ ಜೊತೆಗೆ ಇತರ ಆರೋಪಿಗಳಿಗೆ ಕೂಡಾ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಈ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಆಕೆಯ ವಕೀಲ ಜೆ.ಪಿ ಮಿಶ್ರಾ, "ಸಂಸದೆ ಮುಂಬೈಗೆ ಎರಡು ದಿನಗಳ ಮಟ್ಟಿಗೆ ಆಗಮಿಸಲಿದ್ದರು. ಅದಕ್ಕಾಗಿ ವಿಮಾನ ನಿಲ್ದಾಣದ ಸಮೀಪದ ನಂದಗಿರಿಯಲ್ಲಿನ ಗೆಸ್ಟ್ ಹೌಸ್‍ನಲ್ಲಿ ಕೊಠಡಿಯನ್ನೂ ಕಾದಿರಿಸಲಾಗಿತ್ತು. ಆದರೆ ವೈದ್ಯರು ಆಕೆಗೆ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ : ಹೋರಾಟಕ್ಕೆ ಮುಂದಾದ ಖಾಸಗಿ ಶಿಕ್ಷಣ ಸಂಸ್ಥೆಗಳು; ಆನ್​ಲೈನ್ ಕ್ಲಾಸ್ ಬಂದ್ ಮಾಡಲು ನಿರ್ಧಾರ!

ಮುಂಬೈಗೆ ತೆರಳುವುದಕ್ಕೆ ಮುಂಚಿತವಾಗಿಯೆ ಪ್ರಜ್ಞಾ ಏಮ್ಸ್‌ಗೆ ವೈದ್ಯಕೀಯ ಪರೀಕ್ಷೆಗೆಂದು ಹೋಗಿದ್ದ ಸಂದರ್ಭ ವೈದ್ಯರು ಆಕೆಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದಾಗ್ಯೂ ಆರೋಪಿಯು ಯಾವ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಕುರಿತು ಮಾಹಿತಿಯಿಲ್ಲ. ಕೆಲ ತಿಂಗಳುಗಳ ಹಿಂದೆ ಆಕೆ ಕಣ್ಣಿನ ಆಪರೇಷನ್‍ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
Youtube Video

ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಧೀಶ ಪಿ.ಆರ್​. ಸಿಟ್ರೆ ಮುಂದಿನ ಜನವರಿ 4 ರಂದು ಪ್ರಕರಣದ ಎಲ್ಲಾ ಏಳು ಜನ ಸಿಬ್ಬಂಧಿಗಳು ನ್ಯಾಯಾಲಯದ ಎದುರು ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
Published by: MAshok Kumar
First published: December 20, 2020, 10:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories