ಮಾಲೆಗಾಂವ್ ಬಾಂಬ್​ ಸ್ಫೋಟದ​​ ಆರೋಪಿ ಸಾಧ್ವಿ ಪ್ರಗ್ಯಾ ಬಿಜೆಪಿ ಸೇರ್ಪಡೆ; ಭೂಪಾಲ್​ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ?

ದಿಗ್ವಿಜಯ ಸಿಂಗ್​ ಪ್ರತಿಸ್ಪರ್ಧಿಯಾಗಿ ಬಿಜೆಪಿ ಹಿರಿಯ ನಾಯಕರಾದ ನರೇಂದ್ರ ಸಿಂಗ್ ತೋಮರ್, ಶಿವರಾಜ್​ ಸಿಂಗ್​ ಚೌಹಾಣ್, ಉಮಾಭಾರತಿ ಆಸಕ್ತಿ ತೋರಿಸದಿರುವ ಹಿನ್ನೆಲೆಯಲ್ಲಿ ಸಾಧ್ವಿ ಪ್ರಗ್ಯಾ ಅವರನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ.

Sushma Chakre | news18
Updated:April 17, 2019, 2:59 PM IST
ಮಾಲೆಗಾಂವ್ ಬಾಂಬ್​ ಸ್ಫೋಟದ​​ ಆರೋಪಿ ಸಾಧ್ವಿ ಪ್ರಗ್ಯಾ ಬಿಜೆಪಿ ಸೇರ್ಪಡೆ; ಭೂಪಾಲ್​ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ?
ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್
  • News18
  • Last Updated: April 17, 2019, 2:59 PM IST
  • Share this:
ವಿವೇಕ್ ತ್ರಿವೇದಿ

ಭೂಪಾಲ್ (ಏ. 17): ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಠಾಕೂರ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರು ಭೂಪಾಲ್​ ಲೋಕಸಭಾ ಅಭ್ಯರ್ಥಿಯಾಗಿ ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

2008ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಪ್ರಗ್ಯಾ ಠಾಕೂರ್​ ಕೂಡ ಒಬ್ಬರು. ಈ ಸ್ಫೋಟದಲ್ಲಿ 6 ಜನ ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂದು ಉಗ್ರವಾದವನ್ನು ಜನರ ಮೇಲೆ ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಈ ಹಿಂದಿನಿಂದಲೂ ಕಾಂಗ್ರೆಸ್​ ನಾಯಕರು ಆರೋಪಿಸಿದ್ದರು. ಇದೀಗ ಸಾಧ್ವಿ ಪ್ರಗ್ಯಾ ಠಾಕೂರ್​ಗೆ ಮಣೆ ಹಾಕಿರುವ ಬಿಜೆಪಿ ಅವರನ್ನು ಭೂಪಾಲ್​ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಯೋಚನೆ ಮಾಡುತ್ತಿದೆ ಎನ್ನಲಾಗಿದೆ.

'ನಾನು ಪ್ರಧಾನಿ ಮೋದಿ ಅವರಂತಲ್ಲ, 15 ಲಕ್ಷ ಹಣ ಹಾಕುತ್ತೇನೆ ಎಂದು ಸುಳ್ಳು ಹೇಳುವುದಿಲ್ಲ'; ರಾಹುಲ್ ವಾಗ್ದಾಳಿ

ಭೂಪಾಲ್​ನಲ್ಲಿ ಯಾರಿಗೆ ಟಿಕೆಟ್​ ನೀಡುವುದೆಂಬ ಬಗ್ಗೆ ಬಿಜೆಪಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಸಾಧ್ವಿ ಪ್ರಗ್ಯಾ ಠಾಕೂರ್​ ಬಗ್ಗೆ ಬಿಜೆಪಿ ನಾಯಕರು ಹೆಚ್ಚಿನ ಒಲವು ತೋರುತ್ತಿದ್ದಾರೆ ಎನ್ನಲಾಗಿದೆ. ದಿಗ್ವಿಜಯ ಸಿಂಗ್​ ಪ್ರತಿಸ್ಪರ್ಧಿಯಾಗಿ ಬಿಜೆಪಿ ಹಿರಿಯ ನಾಯಕರಾದ ನರೇಂದ್ರ ಸಿಂಗ್ ತೋಮರ್, ಶಿವರಾಜ್​ ಸಿಂಗ್​ ಚೌಹಾಣ್, ಉಮಾಭಾರತಿ ಆಸಕ್ತಿ ತೋರಿಸದಿರುವ ಹಿನ್ನೆಲೆಯಲ್ಲಿ ಸಾಧ್ವಿ ಪ್ರಗ್ಯಾ ಅವರನ್ನು ಪರಿಗಣಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

'ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ' ಎಂಬ ಇಮ್ರಾನ್ ಹೇಳಿಕೆ ಹಿಂದೆ ಕಾಂಗ್ರೆಸ್ ಕೈವಾಡ ಶಂಕೆ; ಸಚಿವೆ ನಿರ್ಮಲಾ ಸೀತಾರಾಮನ್

ಈ ಬಗ್ಗೆ ಸಾಧ್ವಿ ಪ್ರಗ್ಯಾ ಠಾಕೂರ್​ ಪ್ರತಿಕ್ರಿಯೆ ನೀಡಿದ್ದು, ಭೂಪಾಲ್​ನಿಂದ ಟಿಕೆಟ್​ ಸಿಕ್ಕಿದರೆ ಸ್ಪರ್ಧಿಸುವೆ. ದಿಗ್ವಿಜಯ ಸಿಂಗ್​ ಎದುರು ಸ್ಪರ್ಧಿಸುವುದು ನನಗೇನೂ ಕಷ್ಟವಾಗಲಾರದು. ಖಂಡಿತ ನಾನೇ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 11 ವರ್ಷಗಳ ಹಿಂದೆ ನಡೆದ ಮಾಲೆಗಾಂಗ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
First published: April 17, 2019, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading