ತಿರುವನಂತಪುರಂ(ಜ.04): ಖ್ಯಾತ ಮಲೆಯಾಳಂ ಕವಿ ಮತ್ತು ಗೀತ ರಚನೆಕಾರ ಅನಿಲ್ ಪನಚೂರನ್ ಅವರು ಭಾನುವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 55 ವರ್ಷ ವಯಸ್ಸಾಗಿದ್ದ ಪನಚೂರನ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಕೊಲ್ಲಂ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ರಾತ್ರಿ 8.20ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಪನಚೂರನ್ ಅವರು ಪ್ರಸಿದ್ಧ ಗೀತ ರಚನೆಕಾರರಾಗಿದ್ದು, ಜನಪ್ರಿಯತೆ ಗಳಿಸಿದ್ದರು. ಅರಬಿಕಾಧಾ, ಕಾಧಾ ಪರಾಯುಂಬೋಲ್, ಮದಂಬಿ, ಮೇರಿಕುಂದೋರು ಕುಂಜಾಡು, ವೆಲಿಪಡಿಂಟೆ ಪುಸ್ತಕಂ ಸೇರಿ ಅನೇಕ ಸಿನಿಮಾಗಳಲ್ಲಿನ ಸಾಹಿತ್ಯಕ್ಕೆ ಇವರು ಹೆಸರುವಾಸಿಯಾಗಿದ್ದಾರೆ.
ಅನಿಲ್ ಪನಚೂರನ್ ನಿಧನಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿಥಾಲಾ ಮತ್ತು ಇತರರು ಸಂತಾಪ ಸೂಚಿಸಿದ್ದಾರೆ. ಪನಚೂರನ್ ಅವರ ಅಕಾಲಿಕ ನಿಧನವು ರಾಜ್ಯದ ಸಾಂಸ್ಕೃತಿಕ ಮತ್ತು ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ ಎಂದು ಸಿಎಂ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ