• Home
  • »
  • News
  • »
  • national-international
  • »
  • Malaika Arora: ಕಾರು ಅಪಘಾತದಲ್ಲಿ ಬಾಲಿವುಡ್ ನಟಿ ಮಲೈಕಾ ಅರೋರಗೆ ಗಾಯ, ಆಸ್ಪತ್ರೆಗೆ ದಾಖಲು!

Malaika Arora: ಕಾರು ಅಪಘಾತದಲ್ಲಿ ಬಾಲಿವುಡ್ ನಟಿ ಮಲೈಕಾ ಅರೋರಗೆ ಗಾಯ, ಆಸ್ಪತ್ರೆಗೆ ದಾಖಲು!

ನಟಿ ಮಲೈಕಾ ಅರೋರ

ನಟಿ ಮಲೈಕಾ ಅರೋರ

ಮಲೈಕಾ ಅರೋರ ಅವರ ಕಾರು ಭಾನುವಾರ ಸಂಜೆ ಮಹಾರಾಷ್ಟ್ರದ ಖೋಪೋಲಿಯಲ್ಲಿ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಕ್ಕೀಡಾಗಿದೆ. ನಟಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

  • Share this:

ಮುಂಬೈ: ಬಾಲಿವುಡ್​ ನಟಿ ಮಲೈಕಾ ಅರೋರ (Bollywood Actress Malaika Arora) ಅವರ ಕಾರು ಮುಂಬೈ ನಗರದಲ್ಲಿ ಅಪಘಾತಕ್ಕೀಡಾಗಿದ್ದು(Car Accident), 48 ವರ್ಷದ ನಟಿ ಗಾಯಗೊಂಡಿದ್ದಾರೆ. ಹಿಂದಿ ದಿಲ್​ ಸೇ ಸಿನಿಮಾದ ಚೈ ಚೈ ಸಾಂಗ್​ ಖ್ಯಾತಿಯ ನಟಿಯ ಕಣ್ಣಿಗೆ ಅಪಘಾತದಲ್ಲಿ ಗಾಯವಾಗಿದೆ ಎನ್ನಲಾಗುತ್ತಿದೆ. ಮಲೈಕಾ ಅರೋರ ಅವರ ಕಾರು ಭಾನುವಾರ ಸಂಜೆ ಮಹಾರಾಷ್ಟ್ರದ ಖೋಪೋಲಿಯಲ್ಲಿ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಕ್ಕೀಡಾಗಿದೆ. ನಟಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜನಪ್ರಿಯ ನಟಿಯನ್ನು ತಕ್ಷಣದ ಚಿಕಿತ್ಸೆಗಾಗಿ ಹತ್ತಿರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪ್ರಸ್ತುತ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


ಅಪಘಾತ ಎಲ್ಲಿ..? ಹೇಗೆ ಆಯ್ತು..? 


ಮುಂಬೈನ ಹೊರವಲಯದ ಎಕ್ಸ್‌ಪ್ರೆಸ್‌ವೇಯಲ್ಲಿ ನಟಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಖೋಪೋಲಿಯಲ್ಲಿ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಸಣ್ಣಪುಟ್ಟ ಗಾಯಗಳಾಗಿರುವ ಮಲೈಕಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಘಟನೆಯನ್ನು ಉಲ್ಲೇಖಿಸಿದ್ದು, ಅಪಘಾತದ ಕಾರಣವನ್ನು ತನಿಖೆ ಮಾಡಿದ ನಂತರ ಎಫ್‌ಐಆರ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಪುಣೆ ಟೈಮ್ಸ್ ಫ್ಯಾಶನ್ ವೀಕ್‌ಗಾಗಿ ರನ್‌ವೇ ವಾಕ್ ಮಾಡಿದ ನಂತರ ಮಲೈಕಾ ಮುಂಬೈಗೆ ಹಿಂತಿರುಗುತ್ತಿದ್ದರು. ಹಿಂದೂಸ್ತಾನ್ ಟೈಮ್ಸ್ ಹೇಳಿಕೆ ನೀಡಿರುವ ಖೋಪೋಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿರೀಶ್ ಪವಾರ್ ಅವರು, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ 28kn ಪಾಯಿಂಟ್‌ನಲ್ಲಿ ಅಪಘಾತ ಸಂಭವಿಸಿದೆ. ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಎಲ್ಲಾ ಮೂರು ವಾಹನಗಳು ಹಾನಿಗೊಳಗಾಗಿವೆ. ಅಪಘಾತ ಸಂಭವಿಸಿದ ತಕ್ಷಣವೇ ವಾಹನ ಚಾಲಕನು ಓಡಿ ಹೋಗಿದ್ದಾರೆ. ಆದ್ದರಿಂದ ಯಾವ ರೀತಿಯ ಗಾಯಗಳಾಗಿವೆ ಎಂಬುದು ಸ್ಪಷ್ಟವಾಗಿಲ್ಲ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.


ಅಪಘಾತಕ್ಕೊಳಗಾದ ಎರಡು ಕಾರುಗಳ ನಡುವೆ ಮಲೈಕಾ ಅವರ ರೇಂಜ್ ರೋವರ್ ಇತ್ತು ಎಂದು ವರದಿ ವಿವರಿಸಿದೆ. ಖೋಪೋಲಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಹರೇಶ್ ಕಲ್ಸೇಕರ್ ಅವರು ವಿವರಿಸುತ್ತಾ, "ನಾವು ಎಲ್ಲಾ ಮೂರು ಕಾರುಗಳ ನೋಂದಣಿ ಸಂಖ್ಯೆಯನ್ನು ಸ್ವೀಕರಿಸಿದ್ದೇವೆ. ಈಗ ನಾವು ಮಾಲೀಕರನ್ನು ಸಂಪರ್ಕಿಸಿ ನಿಜವಾಗಿ ಏನಾಯಿತು ಎಂಬುದನ್ನು ತಿಳಿದುಕೊಳ್ಳುತ್ತೇವೆ. ಘಟನೆಯ ಬಗ್ಗೆ ಮತ್ತು ಅಪಘಾತ ಹೇಗೆ ಸಂಭವಿಸಿತು ಮತ್ತು ಯಾರ ತಪ್ಪು ಎಂದು ತನಿಖೆ ಮಾಡಿದ ನಂತರ ಎಫ್‌ಐಆರ್ ದಾಖಲಿಸಲಾಗುವುದು ಎಂದಿದ್ದಾರೆ.


ಇದನ್ನೂ ಓದಿ: KGF- 2 ಹಿಟ್ ಆಗದಿದ್ದರೆ ಏನಾಗಬಹುದು? ಪ್ರಶಾಂತ್ ನೀಲ್‌ಗೆ ಈ ಚಿತ್ರ ಹೇಗೆ ನಿರ್ಣಾಯಕವಾಗಿದೆ..?


ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ಅಪಘಾತದ ಕಾರಣವನ್ನು ತನಿಖೆ ಮಾಡಲಿದ್ದಾರೆ ಎಂದು ವರದಿ ಆಗಿದೆ. ಈ ಸುದ್ದಿಯನ್ನು ಮಲೈಕಾ ಅಥವಾ ಅವರ ಯಾವುದೇ ಕುಟುಂಬ ಸದಸ್ಯರು ಅಥವಾ ಸ್ನೇಹಿತರು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.


ಅಪಘಾತಕ್ಕೂ ಮುನ್ನ ಫ್ಯಾಷನ್​ ಶೋನಲ್ಲಿ ಭಾಗಿ 


ಅಪಘಾತಕ್ಕೂ ಮುನ್ನ ನಟಿ  ಪುಣೆ ಟೈಮ್ಸ್ ಫ್ಯಾಶನ್ ವೀಕ್ 2022 ರಲ್ಲಿ ಡಿಸೈನರ್ ಸಂಜೇವ್ ಮರ್ವಾಹಾ ಅವರಿಗಾಗಿ ರ‍್ಯಾಂಪ್ ವಾಕ್ ಮಾಡಿದ್ದರು. ಈ ವೇಳೆ ಮಲೈಕಾ ಅರೋರಾ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ತಮ್ಮ ರಾಂಪ್ ವಾಕ್​​ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ.


48 ವರ್ಷದ ನಟಿ  ಮಲೈಕಾ ಅರೋರಾ ಪ್ರಸ್ತುತ ತನಗಿಂತ 14 ವರ್ಷ ಕಿರಿಯನಾದ ಬಾಲಿವುಡ್ ನಟ ಅರ್ಜುನ್ ಕಪೂರ್ ಅವರೊಂದಿಗೆ ಸಂಬಂಧದಲ್ಲಿದ್ದಾರೆ. ಮೊದಲು ಸಲ್ಮಾನ್ ಖಾನ್ ಅವರ ಸಹೋದರ ಮತ್ತು ನಟ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ. ಮಲೈಕಾ 1998 ರಲ್ಲಿ ಅರ್ಬಾಜ್ ಅವರೊಂದಿಗೆ ವಿವಾಹವಾಗಿದ್ದರು. 2017 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು.

Published by:Kavya V
First published: