ಮನೆಯ ಕಿಟಕಿ, ಬಾಗಿಲು ತೆರೆಯಬೇಡಿ; ಗುರುಗ್ರಾಮಕ್ಕೆ ಮಿಡತೆ ದಾಳಿಯ ಸೂಚನೆ ನೀಡಿದ ಆಡಳಿತ ಮಂಡಳಿ

ಮಿಡತೆಗಳು ಇರಾನ್​ನಿಂದ ಹೊರಟು, ಪಾಕಿಸ್ತಾನ ಮಾರ್ಗವಾಗಿ ಭಾರತ ಪ್ರವೇಶ ಮಾಡಿದ್ದವು. ಇವು ಕ್ಷಣಮಾತ್ರದಲ್ಲಿ ಬೆಳೆಗಳನ್ನು ಸಂಪೂರ್ಣ ನಾಶ ಮಾಡುವ ತಾಕತ್ತನ್ನು ಹೊಂದಿವೆ.  

ಮಿಡತೆ

ಮಿಡತೆ

 • Share this:
  ಗುರುಗ್ರಾಮ (ಜೂ.27): ಸಾಕಷ್ಟು ರಾಜ್ಯಗಳಲ್ಲಿ ಭಾರೀ ಹಾನಿ ಉಂಟು ಮಾಡಿದ್ದ ಮಿಡತೆಗಳು ಈಗ ಗುರುಗ್ರಾಮಕ್ಕೆ ದಾಳಿ ಇಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯದಂತೆ ಎಚ್ಚರಿಕೆ ನೀಡಲಾಗಿದೆ.

  ಮಿಡತೆ ದಂಡು ರಾಜಸ್ಥಾನ, ಮಹಾರಾಷ್ಟ್ರ, ಮಧ್ಯ ಪ್ರದೇಶ ಸೇರಿ ಸಾಕಷ್ಟು ರಾಜ್ಯಗಳಲ್ಲಿ ಭಾರೀ ಹಾನಿ ಸೃಷ್ಟಿ ಮಾಡಿತ್ತು. ಈಗ ಈ ಮಿಡತೆಗಳು ಗುರುಗ್ರಾಮ ಭಾಗಕ್ಕೆ ದಾಳಿ ಇಡುವ ಮುನ್ಸೂಚನೆ ಇದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಶಬ್ದ ಮಾಡುವಂತೆ ಹಾಗೂ ಮನೆ ಬಾಗಿಲು, ಕಿಟಕಿ ತೆರೆಯದಂತೆ ಸೂಚನೆ ನೀಡಲಾಗಿದೆ.

  ಮಹೇಂದ್ರಗಿರಿ ಜಿಲ್ಲೆಗೆ ಮಿಡತೆ ದಂಡು ಲಗ್ಗೆ ಇಟ್ಟಿದೆ. ಹೀಗಾಗಿ, ಇವು ಗುರುಗ್ರಾಮ ಭಾಗದತ್ತವೂ ತಿರುಗಬಹುದು. ಈ ಮಿಡತೆಗಳು ಶಬ್ದಕ್ಕೆ ಹೆದರುತ್ತವೆ. ಹೀಗಾಗಿ, ನಿರಂತರವಾಗಿ ಈ ಭಾಗದಲ್ಲಿ ಬಟ್ಟಲು, ಜಾಗಟೆ ಮತ್ತಿತ್ಯಾದಿ ವಸ್ತುಗಳನ್ನು ಬಡಿಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನೂ ಓದಿ: ಕೆ.ಆರ್​​ ಮಾರ್ಕೆಟ್​​ ಕ್ಲೋಸ್​​ ಆದ್ರೇನು! ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ತಲೆಯೆತ್ತಿದೆ ಫುಟ್ಪಾತ್ ಮಾರ್ಕೆಟ್​

  ಇನ್ನು, ಹಳ್ಳಿಗಳಲ್ಲಿ ರೈತರ ಬಳಿ ಇರುವ ನೀರಿನ ಪಂಪ್​ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆಯೂ ನಿರ್ದೇಶಿಸಲಾಗಿದೆ. ಒಂದೊಮ್ಮೆ ಮಿಡತೆಗಳು ದಾಳಿ ಇಟ್ಟರೆ ನೀರು ಹಾರಿಸುವ ಮೂಲಕ ಅವುಗಳನ್ನು ಓಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

  ಈ ಮಿಡತೆಗಳು ಇರಾನ್​ನಿಂದ ಹೊರಟು, ಪಾಕಿಸ್ತಾನ ಮಾರ್ಗವಾಗಿ ಭಾರತ ಪ್ರವೇಶ ಮಾಡಿದ್ದವು. ಇವು ಕ್ಷಣಮಾತ್ರದಲ್ಲಿ ಬೆಳೆಗಳನ್ನು ಸಂಪೂರ್ಣ ನಾಶ ಮಾಡುವ ತಾಕತ್ತನ್ನು ಹೊಂದಿವೆ.
  First published: