• Home
  • »
  • News
  • »
  • national-international
  • »
  • Makara Jyothi: ಜ್ಯೋತಿ ರೂಪದಲ್ಲಿ ಅಯ್ಯಪ್ಪನ ದರ್ಶನ, ಕಲಿಯುಗದ ದೈವ ನೋಡಿ ಪುನೀತರಾದ ಭಕ್ತಗಣ!

Makara Jyothi: ಜ್ಯೋತಿ ರೂಪದಲ್ಲಿ ಅಯ್ಯಪ್ಪನ ದರ್ಶನ, ಕಲಿಯುಗದ ದೈವ ನೋಡಿ ಪುನೀತರಾದ ಭಕ್ತಗಣ!

ಶಬರಿಮಲೆ ಅಯ್ಯಪ್ಪ ಸ್ವಾಮಿ

ಶಬರಿಮಲೆ ಅಯ್ಯಪ್ಪ ಸ್ವಾಮಿ

ಮಕರ ಜ್ಯೋತಿ ಬೆಳಕನ್ನು ನೋಡಲು ಕೇವಲ ದಕ್ಷಿಣ ಭಾರತ ರಾಜ್ಯಗಳಿಂದಷ್ಟೇ ಅಲ್ಲದೆ ಉತ್ತರ ಭಾರತದ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಅಲ್ಲದೇ ಮಕರ ಜ್ಯೋತಿ ಗೋಚರಿಸುತ್ತಿದ್ದಂತೆಯೇ ಭಕ್ತರಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ಮುಗಿಲು ಮುಟ್ಟಿತ್ತು.

  • Share this:

ತಿರುವನಂತಪುರಂ: ಪ್ರತಿ ವರ್ಷದಂತೆ ಈ ಬಾರಿಯು ಶಬರಿಮಲೆಯಲ್ಲಿ (S habarimale) ಮಕರ ಜ್ಯೋತಿ (Makara Jyothi) ದರ್ಶನ ಪಡೆದು ಭಕ್ತರು (Devotees) ಪುನೀತರಾದರು. ಮಕರ ಸಂಕ್ರಾಮಣ ದಿನವಾದ ಇಂದು ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ (Ponnambalamedu Hills) ಸಂಜೆ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಂಡಿತ್ತು. ಈ ಅಮೃತ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಜ್ಯೋತಿಯ ಬೆಳಕನ್ನು ನೋಡಿ ಕಣ್ತುಂಬಿಕೊಂಡರು. ಪ್ರತಿ ವರ್ಷ ಈ ದಿನದಂದು ಶ್ರೀಮಂತರು ಮತ್ತು ಬಡವರು ಎಂಬ ಭೇದ-ಭಾವವಿಲ್ಲದೇ ಎಲ್ಲ ಭಕ್ತರು ಜ್ಯೋತಿಯ ದರ್ಶನ ಪಡೆದರು. ಮಕರ ಜ್ಯೋತಿ ನೋಡಲು ಲಕ್ಷಾಂತರ ಜನರು ಶಬರಿಮಲೆಗೆ ಬರುವುದರಿಂದ ಯಾವುದೇ ನೂಕು-ನುಗ್ಗಲು, ಸಾವು-ನೋವು ಸಂಭವಿಸದಂತೆ ತಡೆಯಲು ಪೊಲೀಸ್ (Police) ಬಂದೋಬಸ್ತ್ ಹಾಗೂ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.




ಭಕ್ತರಿಂದ ಮುಗಿಲು ಮುಟ್ಟಿದ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ


ಮಕರ ಜ್ಯೋತಿ ಬೆಳಕನ್ನು ನೋಡಲು ಕೇವಲ ದಕ್ಷಿಣ ಭಾರತ ರಾಜ್ಯಗಳಿಂದಷ್ಟೇ ಅಲ್ಲದೆ ಉತ್ತರ ಭಾರತದ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಅಲ್ಲದೇ ಮಕರ ಜ್ಯೋತಿ ಗೋಚರಿಸುತ್ತಿದ್ದಂತೆಯೇ ಭಕ್ತರಿಂದ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ಮುಗಿಲು ಮುಟ್ಟಿತ್ತು.


ಅಯ್ಯಪ್ಪಸ್ವಾಮಿ


2021ರಲ್ಲಿ 5 ಸಾವಿರ ಮಂದಿಗೆ ಮಾತ್ರ ಜ್ಯೋತಿ ದರ್ಶನಕ್ಕೆ ಸಿಕ್ಕಿತ್ತು ಅವಕಾಶ


ಈ ಮುನ್ನ 2021ರಲ್ಲಿ ಕೊರೊನಾ ಹಿನ್ನೆಲೆ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಮಕರ ಜ್ಯೋತಿ ದರ್ಶನಕ್ಕೆ ಸಹ ಕೇವಲ 5 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರಿಗೆ ಮಾತ್ರ ದೇವಾಲಯ ಹಾಗೂ ಜ್ಯೋತಿ ನೋಡಲು ಅವಕಾಶ ಕಲ್ಪಿಸಲಾಗಿತ್ತು.


ಶಿವ ಮತ್ತು ಮೋಹಿನಿಯ ಮಿಲನದಿಂದ ಅಯ್ಯಪ್ಪ ಜನನ


ಮಹಿಷಾ ಸಂಹಾರ ಮಾಡಲು ಹರಿಹರರಿಂದ ಜನ್ಮತಾಳಿದ ಪುತ್ರನೇ ಧರೆಗೆ ಬರಬೇಕು ಎಂದು ಆಕೆ ಬ್ರಹ್ಮ ದೇವರ ಬಳಿ ವರವನ್ನು ಕೇಳುತ್ತಾಳೆ. ಆದರೆ ಅದೇ ವರ ಶಾಪವಾಗಿ ಪರಿಣಮಿಸುತ್ತದೆ ಎಂದು ಮಹಿಷಿ ಊಹಿಸಿರಲಿಲ್ಲ. ಏಕೆಂದರೆ ಮಹಾವಿಷ್ಣು ಮೋಹಿನಿಯ ಅವತಾರ ತಳೆದು, ಶಿವ ಮತ್ತು ಮೋಹಿನಿಯ ಮಿಲನದಿಂದ ಅಯ್ಯಪ್ಪ ಅದಾಗಲೇ ಭೂಮಿಗೆ ಕಾಲಿಟ್ಟಾಗಿತ್ತು.


ಅಯ್ಯಪ್ಪ ಸ್ವಾಮಿ ದೇಗುಲ


12 ವರ್ಷಗಳ ಕಾಲ ಅರಮನೆಯಲ್ಲಿ ಜೀವನ ಸಾಗಿಸಿದ್ದ ಮಣಿಕಂಠ


ಪಶ್ಚಿಮ ಘಟ್ಟಗಳ ದೊರೆ ರಾಜ ರಾಜಶೇಖರ ಮಕ್ಕಳಿಲ್ಲದೆ ಕೊರಗುತ್ತಿದ್ದ. ಒಂದು ದಿನ ಕಾಡಿಗೆ ಬೇಟೆಗೆಂದು ಬಂದ ಸಂದರ್ಭದಲ್ಲಿ ಶಿವಲಿಂಗದ ಮುಂದೆ ಕೊರಳಲ್ಲಿ ಮಣಿಯನ್ನು ಧರಿಸಿದ ಮಹಾ ತೇಜಸ್ವಿ ಕಂದಮ್ಮ ಅಳುತ್ತಿರುವುದು ಕಂಡುಬರುತ್ತದೆ. ತಕ್ಷಣವೇ ರಾಜನು ದೇವರೇ ಕರುಣಿದ ಪ್ರಸಾದ ಎಂದು ಭಾವಿಸಿ ಅರಮನೆಗೆ ಮಗುವನ್ನು ಕರೆದುಕೊಂಡು ತೆರಳುತ್ತಾರೆ. ಇದಾದ ಬಳಿಕ 12 ವರ್ಷಗಳ ಕಾಲ ಅರಮನೆಯಲ್ಲಿ ಜೀವನ ಸಾಗಿಸಿದ ಮಣಿಕಂಠ, ಮುಂದೆ ಮಹಿಷಿಯ ಮರ್ಧನ ಮಾಡಿ ಲೋಕಕ್ಕೆ ಅಯ್ಯಪ್ಪನೆಂದು ಪ್ರಸಿದ್ಧಿಗೊಳ್ಳುತ್ತಾರೆ.




ಇದನ್ನೂ ಓದಿ: Ayyappa Swamy: ಅಯ್ಯಪ್ಪನ ಪ್ರಸಿದ್ಧ ಪ್ರಸಾದವೇ ವಿಷವಾಯ್ತಾ? ಇನ್ಮುಂದೆ ಭಕ್ತರಿಗೆ ಸಿಗಲ್ವಾ ‘ಅರವಣ ಪಾಯಸಂ’?


ಮಕರ ಜ್ಯೋತಿ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಳ್ಳುತ್ತೇನೆ ಅಂದಿದ್ದ ಅಯ್ಯಪ್ಪ


ಇದಾದ ಬಳಿಕ ಶಬರಿಗಿರಿಯಲ್ಲಿ ತನಗಾಗಿ ದೇವಾಲಯವನ್ನು ನಿರ್ಮಿಸಲು ರಾಜನಿಗೆ ಮನವಿ ಮಾಡುತ್ತಾರೆ. ಅಷ್ಟೇ ಅಲ್ಲದೆ, ಪರಶುರಾಮರಿಂದ ಸೃಷ್ಟಿಗೊಂಡ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಿ ಇಂದಿಗೂ ಆ ಮೂರ್ತಿಯನ್ನು ಪೂಜಿಲಾಗುತ್ತದೆ. ಅಷ್ಟೇ ಅಲ್ಲದೆ, ಮಕರ ಸಂಕ್ರಾಂತಿಯಂದು ಮಕರ ಜ್ಯೋತಿ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಳ್ಳುತ್ತೇನೆ ಎಂದು ಅಯ್ಯಪ್ಪ ಅಭಯನೀಡಿ ಶಬರಿಗಿರಿಯಲ್ಲಿ ನೆಲೆಯಾಗುತ್ತಾರೆ.

Published by:Monika N
First published: