Year Ender 2021: ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸಿದ ಪ್ರಮುಖ ವಿದ್ಯಮಾನಗಳು

2021 Incident: ಶತ್ರುರಾಷ್ಟ್ರಗಳೆಂದೇ ಬಣ್ಣಿತವಾಗಿದ್ದ ಸದಾ ಯುದ್ದಗಳಿಂದಲೇ ಸುದ್ದಿಯಾಗುತ್ತಿದ್ದ ಇಸ್ರೇಲ್ -ಪ್ಯಾಲೆಸ್ತೇನ್ ನಡುವೆ ಕಳೆದ ಮೇ ತಿಂಗಳಲ್ಲಿ ಯುದ್ದ ವಿರಾಮ ಘೋಷಣೆಯಾಗಿದ್ದೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ದಿ. ಜೆರುಸೆಲಂನಲ್ಲಿ ನಡೆಯುತ್ತಿದ್ದ ಹಿಂಸಾಚಾರಗಳಿಗೆ ಬ್ರೇಕ್ ಬಿದ್ದಿದ್ದರೂ ಹಮಾಸ್ ಬಂಡುಕೋರರು ಸಂಪೂರ್ಣ ಶಾಂತಿಗೆ ಒಪ್ಪಿಗೆ ನೀಡಿಲ್ಲ

 2021

2021

 • Share this:
  2021ಕ್ಕೆ ವಿದಾಯ(Good bye) ಹೇಳಿ 2022ರ ಸ್ವಾಗತ(Welcome) ಮಾಡಲು ಕೇವಲ ಬೆರಳೆಣಿಕೆಯಷ್ಟು(Few days) ದಿನಗಳು ಮಾತ್ರ ಬಾಕಿ ಇದೆ. ಕಳೆದ ಎರಡು ವರ್ಷಗಳಿಂದ ಅಷ್ಟಾಗಿ ಯಾವ ಒಳ್ಳೆಯ ಘಟನೆಗಳು ಸಹ ಸಂಭವಿಸಿಲ್ಲ.. ಕಳೆದೆರಡು ವರ್ಷಗಳಂತೆ 2021ರಲ್ಲಿಯು ವಿಶ್ವದಲ್ಲಿ ಅನೇಕ ಕಹಿ ಘಟನೆಗಳು(Bad Incident) ಸಂಭವಿಸಿ ಹಿಂದೆಂದೂ ಮರೆಯದಂತ ಅನುಭವ ನೀಡಿದೆ.. ಕೆಲವೊಂದು ಘಟನೆಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತ ಹಲವು ಘಟನೆಗಳು 2021ರಲ್ಲಿ .. ಆಗಿದ್ರೆ 2021ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸಿದ ಪ್ರಮುಖ ಘಟನೆಗಳು ಯಾವುವು ಎನ್ನುವುದರ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.

  1) ತಾಲಿಬಾನಿಗಳ ವಶವಾದ ಅಫ್ಘಾನಿಸ್ತಾನ: ವಿಶ್ವದ ಎಲ್ಲಾ ರಾಷ್ಟ್ರಗಳ ಜನರು ಈ ವರ್ಷಾ ಮರುಕ ಪಟ್ಟ ಏಕೈಕ ವಿಷಯವೆಂದರೆ ಅದು ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾಗಿದ್ದು. ಕಳೆದ ಆಗಸ್ಟ್ ೧೫ರಲ್ಲಿ ಅಮೇರಿಕಾದ ಸೇನೆ ಮತ್ತು ನ್ಯಾಟೋ ಪಡೆಗಲು ಅಫ್ಘನ್ನಿಂದ ಹೊರಬಂದ ಬೆನ್ನಲ್ಲೇ ತಾಲೀಬಾನಿಗಳು ಕಾಬೂಲ್ನಲ್ಲಿ ಬಿಳಿಯ ಧ್ವಜ ನೆಟ್ಟು ಅಫ್ಘನ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಸಾವಿರಾರು ಜನ ಉಗ್ರರಿಂದ ಭಯಬೀತರಾಗಿ ದೇಶ ತೊರೆಯಲು ವಿಮಾನದ ಮೇಲೆ ಹತ್ತಿ ಕುಳಿತು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆ ನೀವು ಇಂದಿಗೂ ಜನರಲ್ಲಿ ಮರುಕ ಹುಟ್ಟಿಸುತ್ತದೆ.ಅಲ್ಲದೆ ಅಫ್ಘಾನಿಸ್ತಾನ ಮತ್ತೆ ಆದಷ್ಟು ಬೇಗ ತಾಲಿಬಾನ್ ಉಗ್ರರ ವಶದಿಂದ ಮುಕ್ತವಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

  ಇದನ್ನೂ ಓದಿ: 2022ಕ್ಕೆ ಬಾಲಿವುಡ್​​ನಲ್ಲಿ ತೆರೆ ಕಾಣಲಿರುವ ಮಹಿಳಾ ಪ್ರಧಾನ ಸಿನಿಮಾಗಳಿವು..!

  2) ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆ: ಅಮೆರಿಕದ 45ನೇ ಅಧ್ಯಕ್ಷರಾಗಿ ಜೋ ಬಿಡನ್ ಜನವರಿ 20 ರಂದು ಪ್ರಮಾಣವಚನ ಸ್ವೀಕರಿಸಿದರು. ಕ್ಯಾಪಿಟಲ್ ಭವನ ದಲ್ಲಿ ಈ ಅದ್ದೂರಿ ಸಮಾರಂಭ ನಡೆದಿತ್ತು. ವಿಶೇಷ ಅಂದ್ರೆ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ರು. ಇದು 2021ರಲ್ಲಿ ಭಾರತೀಯರ ಪಾಲಿಗೆ ಪ್ರಮುಖ ಸಂತಸದ ವಿಷಯ ಕೂಡ ಹೌದು.

  3)ಇಸ್ರೇಲ್ -ಪ್ಯಾಲೆಸ್ತೇನ್ ನಡುವೆ ಕದನ ವಿರಾಮ: ಶತ್ರುರಾಷ್ಟ್ರಗಳೆಂದೇ ಬಣ್ಣಿತವಾಗಿದ್ದ ಸದಾ ಯುದ್ದಗಳಿಂದಲೇ ಸುದ್ದಿಯಾಗುತ್ತಿದ್ದ ಇಸ್ರೇಲ್ -ಪ್ಯಾಲೆಸ್ತೇನ್ ನಡುವೆ ಕಳೆದ ಮೇ ತಿಂಗಳಲ್ಲಿ ಯುದ್ದ ವಿರಾಮ ಘೋಷಣೆಯಾಗಿದ್ದೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ದಿ. ಜೆರುಸೆಲಂನಲ್ಲಿ ನಡೆಯುತ್ತಿದ್ದ ಹಿಂಸಾಚಾರಗಳಿಗೆ ಬ್ರೇಕ್ ಬಿದ್ದಿದ್ದರೂ ಹಮಾಸ್ ಬಂಡುಕೋರರು ಸಂಪೂರ್ಣ ಶಾಂತಿಗೆ ಒಪ್ಪಿಗೆ ನೀಡಿಲ್ಲ. ಇಷ್ಟಾದರೂ ಎರಡೂ ರಾಷ್ಟ್ರಗಳು ಕದನವಿರಾಮ ಘೋಷಿಸಿ ಬಂದೂಕು ಬದಿಗಿಟ್ಟಿದ್ದು ಒಂದೊಳ್ಳೆಯ ಬೆಳವಣಿಗೆ ಎನ್ನಬಹುದು.

  4)ಸುಯೇಜ್ ಕಾಲುವೆಯಲ್ಲಿ ಸಿಲುಕಿದ ಎವರ್ ಗಿವನ್ ಹಡಗು: ಜಗತ್ತಿನ ಆರ್ಥಿಕತೆ ಮೇಲೆ ಸಣ್ಣ ಪರಿಣಾಮ ಬೀರಿದ ಘಟನೆ ಸಂಭವಿಸಿದ್ದು ಈ ವರ್ಷ ಸೂಯೆಜ್ ಕಾಲುವೆಯಲ್ಲಿ. ಜಪಾನ್ ಮಾಲಿಕತ್ವದ ಎವರ್ ಗಿವನ್ ಹಡಗು ಸುಯೇಜ್ ಕಾಲುವೆಯಲ್ಲಿ ಸಿಲುಕಿಕೊಂಡು 120ಕ್ಕೂ ಅಧಿಕ ಹಡಗುಗಳು ಸಾಲುಗಟ್ಟಿ ನಿಂತಿದ್ದು ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು.
  ಸುಮಾರು ಎರಡು ವಾರಗಳ ಕಾಲ ನಿಂತಿದ್ದ ಹಡಗಿನಿಂದ ದಿನಕ್ಕೆ 9.6 ಬಿಲಿಯನ್ ಡಾಲರ್ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

  5)ಬ್ರಿಟನ್ ರಾಣಿ ಪತಿ ವಿಧಿವಶ: ಬ್ರಿಟನ್ನಿನ ರಾಣಿ ಕ್ವೀನ್ ಎಲಿಜಬೆತ್ ಅವರ ಪತಿ ಫಿಲಿಪ್ ಡ್ಯೂಕ್ ಆಫ್ ಎಡಿನ್ಬರ್ಗ್ ಎಪ್ರಿಲ್ ತಿಂಗಳಲ್ಲಿ ವಿಧಿವಶರಾದರು. ಗ್ರೀಕ್ ರಾಜಮನೆತನದ ಫಿಲಿಪ್ 1947ರಲ್ಲಿ ರಾಣಿಯನ್ನು ಮದುವೆಯಾಗಿದ್ದರು.

  ಇದನ್ನೂ ಓದಿ: ಈ ವರ್ಷವೆಲ್ಲಾ ಭಾರತೀಯರು ಇದೊಂದು ಲೆಕ್ಕ ಬಿಡಿಸೋಕೆ ಅತೀ ಹೆಚ್ಚು ಶ್ರಮಪಟ್ಟಿದ್ದಾರೆ, ನಿಮ್ಗೆ ಇದರ ಉತ್ತರ ಗೊತ್ತಾ?

  6) ಹೆಲಿಕಾಪ್ಟರ್ ದುರಂತದಲ್ಲಿ ಭಾರತದ ಸಿಡಿಎಸ್ ವಿಧಿವಶ: ವರ್ಷಾಂತ್ಯದಲ್ಲಿ ಭಾರತದಲ್ಲಿ ಸಂಭವಿಸಿದ ದುರ್ಘಟನೆ ಅಂದರೆ ಅದು ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಮೂರು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ವಿಧಿವಶರಾಗಿದ್ದು... ಪತ್ನಿ ಹಾಗೂ ಸಿಬ್ಬಂದಿಯೊಂದಿಗೆ MI-17 V5 ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ತಮಿಳುನಾಡಿನ ಕೂನುರು ಎಂಬಲ್ಲಿ ಅಪಘಾತಕ್ಕೀಡಾಗಿತ್ತು.
  Published by:ranjumbkgowda1 ranjumbkgowda1
  First published: