ಸೂರತ್ (ಗುಜರಾತ್): (Surat, Gujarat) ರಾಜ್ಯದ ಸೂರತ್ ಮೂಲದ 19 ವರ್ಷದ ಮೈತ್ರಿ ಪಟೇಲ್ (Maitri Patel) ದೇಶದ ಅತ್ಯಂತ ಕಿರಿಯ ಮಹಿಳಾ ಪೈಲೆಟ್ (Youngest Pilot of India) ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಅವರು ಈಗಷ್ಟೇ ಅಮೆರಿಕದಲ್ಲಿ ಪೈಲೆಟ್ ತರಬೇತಿ ಪೂರ್ಣಗೊಳಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಮೈತ್ರಿ ಪಟೇಲ್ ಅವರು ರೈತ ಕುಟುಂಬದಿಂದ ಬಂದವರು. 11 ತಿಂಗಳು ಅಮೆರಿಕದಲ್ಲಿ ಪೈಲೆಟ್ ತರಬೇತಿ ಪೂರ್ಣಗೊಳಿಸಿದ ಬಳಿಕ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ತಮ್ಮ ಕೋರ್ಸ್ ಮುಗಿದ ಬಳಿಕ ಸೂರತ್ಗೆ ಬಂದ ಮೈತ್ರಿ ಪಟೇಲ್ ತಮ್ಮ ಅನುಭವ, ಅಭಿಪ್ರಾಯವನ್ನು ನ್ಯೂಸ್ 18ನೊಂದಿಗೆ ಹಂಚಿಕೊಂಡಿದ್ದಾರೆ.
ಮೈತ್ರಿ ಬಾಲ್ಯದಿಂದಲೇ ತಾನು ಪೈಲೆಟ್ ಆಗಬೇಕು ಎಂಬ ಕನಸು ಹೊತ್ತಿದ್ದರು. ಅದಕ್ಕಾಗಿ 12ನೇ ತರಗತಿ ಮುಗಿಯುತ್ತಿದ್ದಂತೆ ಅವರು ಪೈಲೆಟ್ ತರಬೇತಿಗೆ ಸೇರ್ಪಡೆಯಾದರು. ಅವರು ಅಮೆರಿಕದಲ್ಲಿ ಕಮರ್ಷಿಯಲ್ ಪೈಲೆಟ್ ಚಲಾಯಿಸುವ ತರಬೇತಿಗೆ ಸೇರಿದರು. ಮೈತ್ರಿ ಅವರ ತಂದೆ ರೈತರಾಗಿದ್ದಾರೆ. ಮತ್ತು ಸೂರತ್ ಮುನ್ಸಿಪಲ್ ಕಾರ್ಪೊರೆಷನ್ನಲ್ಲಿ ಉದ್ಯೋಗಿಯಾಗಿದ್ದಾರೆ.
ಸಾಮಾನ್ಯವಾಗಿ ಪೈಲೆಟ್ ತರಬೇತಿ ಪೂರ್ಣಗೊಳ್ಳಲು 18 ತಿಂಗಳು ಬೇಕು. ಆದರೆ, ನನ್ನ ಅದೃಷ್ಟ 11 ತಿಂಗಳಿಗೆ ನನ್ನ ತರಬೇತಿ ಪೂರ್ಣಗೊಂಡಿತು. ನನ್ನ ತರಬೇತಿ ಪೂರ್ಣಗೊಂಡ ಬಳಿಕ ನಾನು ನನ್ನ ತಂದೆಯನ್ನು ಅಮೆರಿಕಗೆ ಕರೆಸಿಕೊಂಡೆ. ಮತ್ತು ಅವರನ್ನು 3500 ಅಡಿ ಎತ್ತರದಿಂದ ಅಗಸದಲ್ಲಿ ಹಾರಾಡಿಸಿದೆ. ಅಲ್ಲಿಗೆ ನಾವು ಕಂಡ ಕನಸು ನನಸಾಯಿತು ಎಂದು ಮೈತ್ರಿ ಪಟೇಲ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ತಾಯಿ ರೇಖಾ ಅವರು ತಮ್ಮ ಮಗಳ ಸಾಧನೆಗೆ ಹೆಮ್ಮೆಯಿಂದಲೇ ಮಾತನಾಡಿದರು. ಮತ್ತುಆಕೆಯ ಸಾಧನೆಯ ನಂತರ ಕುಟುಂಬವು ಪುರಾಣದಲ್ಲಿ ವಿಧೇಯ ಪುತ್ರ ಎಂದು ಕರೆಯಲ್ಪಡುವ 'ಶ್ರಾವಣ' ಎಂಬ ಹೆಸರನ್ನು ಮೈತ್ರಿಗೆ ನೀಡಿತು.
ಇದನ್ನು ಓದಿ: Law And Order: ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹೇಗಿತ್ತು ಅಂತ ಗೊತ್ತಿದೆ; ಸಚಿವ ಅಂಗಾರ ಟೀಕೆ
ನಮ್ಮ ಮಗಳೇ ಚಲಾಯಿಸುವ ವಿಮಾನದಲ್ಲಿ ಆಗಸದಲ್ಲಿ ಹಾರಾಡಬೇಕು ಎಂಬುದು ನಮ್ಮ ಬಯಕೆಯಾಗಿತ್ತು. ನಾವು ಕಂಡ ಕನಸನ್ನು ಮೈತ್ರಿ ನನಸು ಮಾಡಿದ್ದಾಳೆ. ಈಗ ಅವಳು ಭಾರತದಲ್ಲಿ ವಾಣಿಜ್ಯ ಪೈಲಟ್ ಆಗಿ ಹಾರಲು ಭಾರತೀಯ ಪ್ರಮಾಣಿತ ತರಬೇತಿಯನ್ನು ಪೂರ್ಣಗೊಳಿಸಬೇಕಾಗಿದೆ. ನಂತರ ಅವಳು ಮನೆಗೆ ಮರಳಲು ಪರವಾನಗಿ ಪಡೆಯುತ್ತಾಳೆ ಎಂದು ಮೈತ್ರಿಯ ತಂದೆ ಕಾಂತಿಲಾಲ್ ಪಟೇಲ್ ಅವರು ಸಂತಸ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ