• Home
  • »
  • News
  • »
  • national-international
  • »
  • Cheetah: ಭಾರತಕ್ಕೆ ಚೀತಾ ತಂದ ಈ ಪ್ರಮುಖ ಜೀವಶಾಸ್ತ್ರಜ್ಞಗೆ ಅಗೌರವದ ಆರೋಪ

Cheetah: ಭಾರತಕ್ಕೆ ಚೀತಾ ತಂದ ಈ ಪ್ರಮುಖ ಜೀವಶಾಸ್ತ್ರಜ್ಞಗೆ ಅಗೌರವದ ಆರೋಪ

ಚೀತಾ

ಚೀತಾ

ಆಫ್ರಿಕಾದಿಂದ ಐದು ಹೆಣ್ಣು ಹಾಗೂ ಮೂರು ಗಂಡು ಚಿರತೆಗಳನ್ನು ಸದ್ಯ ಭಾರತಕ್ಕೆ ತರಲಾಗಿದ್ದು, ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ.

  • Share this:

ಭಾರತದ ವನ್ಯಜೀವಿ ಸಂಸ್ಥೆಯ ಡೀನ್, ಖ್ಯಾತ ಜೀವಶಾಸ್ತ್ರಜ್ಞ (Biologist) ಯಾದವೇಂದ್ರದೇವ್ ವಿಕ್ರಮಸಿನ್ಹ್ ಝಾಲಾ ಅವರು (Biologist Yadavendradev Vikramsinh Jhala) 13 ವರ್ಷಗಳಿಗೂ ಹೆಚ್ಚು ಕಾಲ ಭಾರತದ ಚಿರತೆ (Cheetah) ಯೋಜನೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಅಧಿಕಾರಿ.ಕಳೆದ ತಿಂಗಳು ನಮೀಬಿಯಾದಿಂದ ತಂದ ಚೀತಾ ಯೋಜನೆಯಲ್ಲೂ ಸಹ ಇವರ ಪಾತ್ರ ದೊಡ್ಡದು. ಇಷ್ಟೇಲ್ಲಾ ಅನುಭವ (Experience) ಹೊಂದಿರುವ ಝಾಲಾ ಅವರನ್ನು ನೂತನ ಚೀತಾ ಟಾಸ್ಕ್ ಫೋರ್ಸ್ ಅಥವಾ ಚೀತಾ ಕಾರ್ಯಪಡೆಯಲ್ಲಿ (Workforce) ಯಾವುದೇ ಸ್ಥಾನಮಾನ ನೀಡದೇ ಹೊರಗಿಡಲಾಗಿದೆ ಎಂದು ವರದಿಗಳು ಕೇಳಿ ಬಂದಿವೆ.


ಸರ್ಕಾರದ ನಡೆ ಬಗ್ಗೆಯೇ ಅನುಮಾನ!
2009ರಿಂದ ಮಹತ್ವಾಕಾಂಕ್ಷೆಯ ಚೀತಾ ಯೋಜನೆಯ ರೂವಾರಿಯಾಗಿರುವ ಝಾಲಾ ಅವರು ಅದಕ್ಕಗತ್ಯದ ಎಲ್ಲ ತಾಂತ್ರಿಕ ನೆರವು ಒದಗಿಸಿದವರು. ಆದರೂ ಚೀತಾ ಕಾರ್ಯಪಡೆಯಿಂದ ಅವರನ್ನು ಹೊರಗಿಟ್ಟಿರುವ ಸರ್ಕಾರದ ನಡೆ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ.


ಹೊಸ ಚಿರತೆಗಳ ಮೇಲ್ವಿಚಾರಣೆ ಹೊಣೆ ಹೊತ್ತಿದ್ದ ಝಾಲಾ
2010ರಲ್ಲಿ ಎಂ.ಕೆ ರಂಜಿತ್ ಸಿನ್ಹಾರ ಅಡಿಯಲ್ಲಿ ಸ್ಥಾಪಿಸಲಾದ ಚೀತಾ ಕಾರ್ಯಪಡೆಯಲ್ಲಿ ಝಾಲಾ ಸದಸ್ಯರಾಗಿದ್ದರ.  ಅಂದಿನಿಂದಲೂ ಯೋಜನೆಯ ತಾಂತ್ರಿಕ ತಂಡದ ಮುಖ್ಯಸ್ಥರಾಗಿದ್ದರು.


ಇನ್ನೂ ಇತ್ತೀಚಿಗೆ ಅಂದರೆ ಸೆಪ್ಟೆಂಬರ್ 16 ರಂದು, ನಮೀಬಿಯಾದಿಂದ ಮೊದಲ ಬ್ಯಾಚ್ ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದಾಗಲೂ ಸಹ ಝಾಲಾ ಅವರೇ ಒಂದು ವಾರಗಳ ಕಾಲ ಅವುಗಳ ಆರೈಕೆ ಮತ್ತು ಮೇಲ್ವಿಚಾರಣೆ ನಡೆಸಿದ್ದರು.ಇನ್ನೂ ಈ ಎಲ್ಲಾ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ಝಾಲಾ ನಿರಾಕರಿಸಿದ್ದಾರೆ. ಇವರ ಈ ನಡೆ ಸರ್ಕಾರದ ಮೇಲೆ ಅಸಮಾಧಾನದ ಸೂಚನೆಯೇ ಎಂಬ ಪ್ರಶ್ನೆ ಸಹ ಹುಟ್ಟಿಕೊಳ್ಳುತ್ತಿದೆ.


ಇದನ್ನೂ ಓದಿ: ಅಸ್ಸಾಂ ಪ್ರವಾಹ ತಡೆಗೆ ಅಮಿತ್ ಶಾ ಮಾಸ್ಟರ್ ಪ್ಲಾನ್


ರಂಜಿತ್‌ಸಿನ್ಹ್ ಅವರೊಂದಿಗೆ, 2009 ರಲ್ಲಿ ಅಂದಿನ ಪರಿಸರ ಸಚಿವ ಜೈರಾಮ್ ರಮೇಶ್ ಅವರಿಗೆ ಸಮೀಕ್ಷೆಯನ್ನು ವಹಿಸಿಕೊಟ್ಟ ನಂತರ ಝಾಲಾ ಅವರು ಸಂಭಾವ್ಯ ಚಿರತೆ ಬಿಡುಗಡೆ ತಾಣಗಳ ಕುರಿತು ಮೊದಲ ವರದಿಯನ್ನು ಸಿದ್ಧಪಡಿಸಿದ್ದರು.ಜನವರಿ 2022ರಲ್ಲಿ, ಭಾರತವು ಚೀತಾ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿದಾಗ ಝಾಲಾ ಅವರು ಅದರ ಪ್ರಮುಖ ಲೇಖಕರಾಗಿದ್ದರು. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವನ್ಯಜೀವಿ ಜೀವಶಾಸ್ತ್ರಜ್ಞರೊಂದಿಗೆ ಝಾಲಾ ತಾಂತ್ರಿಕ ಮಾತುಕತೆಗಳನ್ನು ನಡೆಸಿದ್ದರು.


9 ಸದಸ್ಯರ ಹೊಸ ಕಾರ್ಯಪಡೆಯಲ್ಲಿ ಚೀತಾ ಯೋಜನೆಯ ರೂವಾರಿಗಿಲ್ಲ ಸ್ಥಾನ
ಆದರೂ ಸೆಪ್ಟೆಂಬರ್ 20ರಂದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ನಮೀಬಿಯಾದಿಂದ ತಂದ ಚಿರತೆಗಳು ಇಲ್ಲಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಒಂಬತ್ತು ಸದಸ್ಯರ ಹೊಸ ಕಾರ್ಯಪಡೆಯನ್ನು ಸ್ಥಾಪಿಸಲಾಯಿತು. ಆದರೆ ಈ ಚೀತಾ ಕಾರ್ಯಪಡೆಯಲ್ಲಿ ಝಾಲಾ ಅವರಿಗೆ ಯಾವುದೇ ಸ್ಥಾನಮಾನ, ಜವಾಬ್ದಾರಿ ನೀಡಿಲ್ಲ.


ಚೀತಾ ಕಾರ್ಯಪಡೆಯಲ್ಲಿಲ್ಲ ಝಾಲಾಗೆ ಸ್ಥಾನ ಅಧಿಕಾರಿಗಳು ಏನಂದ್ರು?
ಝಾಲಾ ಅವರ ಹೊರಗಿಡುವಿಕೆ ಮತ್ತು ಅದರ ಸಂಭವನೀಯ ಪರಿಣಾಮದ ಬಗ್ಗೆ ರಂಜಿತ್‌ಸಿನ್ಹ್ ಅವರನ್ನು ಪ್ರಶ್ನಿಸಿದಾಗ ಅವರು "ಹೊಸ ಕಾರ್ಯಪಡೆಯನ್ನು ರಚಿಸುವ ಅಥವಾ ಅದರ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ನನ್ನ ಸಲಹೆ ಕೇಳಲಾಗಿಲ್ಲ" ಎಂದು ಉತ್ತರಿಸಿದರು.


ಎಂಪಿ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡಿರುವ ಕಾರ್ಯಪಡೆಯಿಂದ ಝಾಲಾ ಅವರನ್ನು ಹೊರಗಿಡುವ ಬಗ್ಗೆ ಪ್ರತಿಕ್ರಿಯಿಸಲು ಎನ್‌ಟಿಸಿಎ ಸದಸ್ಯ-ಕಾರ್ಯದರ್ಶಿ ಎಸ್‌ಪಿ ಯಾದವ್ ನಿರಾಕರಿಸಿದರು. ಝಾಲಾ ಅವರ ಉಪಸ್ಥಿತಿಯು ಹಿತಾಸಕ್ತಿ ಸಂಘರ್ಷವಾಗಿರಬಹುದು ಎಂದು ಯಾದವ್‌ ಅವರ ನಿಕಟ ಮೂಲವು ತಿಳಿಸಿದೆ.


ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, ಇದಕ್ಕೆ ಹೊಸದಾದ ಬೇರೆ ರೆಕ್ಕೆಪುಕ್ಕಗಳಿಲ್ಲ. "ಕಾರ್ಯಪಡೆಯ ಆದೇಶವು ಹೆಚ್ಚು ತಾಂತ್ರಿಕೇತರವಾಗಿದೆ. ಅದರಲ್ಲಿ ಯಾವುದೇ ತಾಂತ್ರಿಕ ಸದಸ್ಯರಿಲ್ಲ. ಕಾರ್ಯಪಡೆಯ ಕೆಲಸವು ಚಿರತೆಗಳನ್ನು ಮೇಲ್ವಿಚಾರಣೆ ಮಾಡುವುದಷ್ಟೇ, ಇಲ್ಲಿ ಯಾವುದೇ ತಾಂತ್ರಿಕ ಕೆಲಸ ಇಲ್ಲ. ಹೀಗಾಗಿ ಅವರನ್ನು ಈ ಗುಂಪಿಗೆ ಸೇರಿಸಿಲ್ಲ" ಎಂದಿದ್ದಾರೆ.


ಇದನ್ನೂ ಓದಿ: ಸೀರೆ ಉಟ್ಟ ಮಹಿಳೆಯರ ಮೇಲೆ ದಾಳಿ; ಅಮೆರಿಕದಲ್ಲಿ‌ ಹೆಚ್ಚಿದ ಹಿಂದೂ ವಿರೋಧಿ ಚಟುವಟಿಕೆ


ಆಫ್ರಿಕಾದಿಂದ ಐದು ಹೆಣ್ಣು ಹಾಗೂ ಮೂರು ಗಂಡು ಚಿರತೆಗಳನ್ನು ಸದ್ಯ ಭಾರತಕ್ಕೆ ತರಲಾಗಿದ್ದು, ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ.

First published: