• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • UP Encounter: ಸುರೇಶ್​ ರೈನಾ ಸಂಬಂಧಿಕರ ಬರ್ಬರ ಹತ್ಯೆ, ಕುಖ್ಯಾತ ದರೋಡೆಕೋರನನ್ನು ಎನ್​ಕೌಂಟರ್​ ಮಾಡಿದ ಯುಪಿ ಪೊಲೀಸ್​

UP Encounter: ಸುರೇಶ್​ ರೈನಾ ಸಂಬಂಧಿಕರ ಬರ್ಬರ ಹತ್ಯೆ, ಕುಖ್ಯಾತ ದರೋಡೆಕೋರನನ್ನು ಎನ್​ಕೌಂಟರ್​ ಮಾಡಿದ ಯುಪಿ ಪೊಲೀಸ್​

ರೈನಾ ಸಂಬಂಧಿಕರ ಕೊಂದವನ ಎನ್​ಕೌಂಟರ್

ರೈನಾ ಸಂಬಂಧಿಕರ ಕೊಂದವನ ಎನ್​ಕೌಂಟರ್

ಆಗಸ್ಟ್ 19, 2020ರಂದು ಪಂಜಾಬ್​ನ ಪಠಾಣ್‌ಕೋಟ್ ಜಿಲ್ಲೆಯ ಥರಾಯಲ್ ಗ್ರಾಮದಲ್ಲಿ ಸುರೇಶ್ ರೈನಾ ಅವರ ಚಿಕ್ಕಪ್ಪ- ಚಿಕ್ಕಮ್ಮ ಸೇರಿದಂತೆ ಮೂವರನ್ನು ದರೋಡೆಕೋರರು ಬರ್ಬರವಾಗಿ ಹತ್ಯೆ ಮಾಡಿದ್ದರು.

  • Share this:

ಲಕ್ನೋ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ (Cricketer Suresh Raina) ಅವರ ಸಂಬಂಧಿಕರನ್ನು ಬರ್ಬರವಾಗಿ ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ದರೋಡೆಕೋರ ರಶೀದ್​ನನ್ನು (Rashid) ಉತ್ತರ ಪ್ರದೇಶ ಪೊಲೀಸರು (UP police) ಎನ್​ಕೌಂಟರ್ (Encounter) ಮಾಡಿದ್ದಾರೆ. ಉತ್ತರ ಪ್ರದೇಶದ ಮುಜಾಫರ್ ನಗರ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕಳ್ಳರಲ್ಲಿ ಈತನೂ ಒಬ್ಬನಾಗಿದ್ದ. ಮೂರು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ. ಆದರೆ ಶನಿವಾರ ಪೊಲೀಸರ (Police) ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದ ಎನ್‌ಕೌಂಟರ್‌ನಲ್ಲಿ ರಶೀದ್ ಸಾವನ್ನಪ್ಪಿದ್ದಾನೆ.


ಮಹಡಿಯ ಮೇಲೆ ಮಲಗಿದ್ದ ವೇಳೆ ಹತ್ಯೆ


ಆಗಸ್ಟ್ 19, 2020 ರಂದು ಪಂಜಾಬ್​ನ ಪಠಾಣ್‌ಕೋಟ್ ಜಿಲ್ಲೆಯ ಥರಾಯಲ್ ಗ್ರಾಮದಲ್ಲಿ ಸುರೇಶ್ ರೈನಾ ಅವರ ಚಿಕ್ಕಪ್ಪ- ಚಿಕ್ಕಮ್ಮ ಸೇರಿದಂತೆ ಮೂವರ ಹತ್ಯೆ ನಡೆದಿತ್ತು. ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ರೈನಾ ಅವರ ಚಿಕ್ಕಪ್ಪ ಅಶೋಕ್ ಕುಮಾರ್ ಕುಟುಂಬ ಸಮೇತ ಮನೆ ಮಹಡಿಯ ಮೇಲೆ ಮಲಗಿದ್ದ ವೇಳೆ ಸುಮಾರು 12 ಮಂದಿ ದರೋಡೆಕೋರರು ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದರು.


ಈ ವೇಳೆ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. ತೀವ್ರ ಗಾಯಗೊಂಡ ಅಶೋಕ್‌ಕುಮಾರ್‌ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಆಶಾರಾಣಿ ಹಾಗೂ ಪುತ್ರ ಕೌಶಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದರು. ಉಳಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.


ಇದನ್ನೂ ಓದಿ: Crime News: ಸುಳ್ಳು ಹೇಳಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಮದುವೆಯಾದ ಶಿಕ್ಷಕನ ಬಂಧನ


ಆರೋಪಿ ಪತ್ತೆಗೆ 50 ಸಾವಿರ ಬಹುಮಾನ ಘೋಷಣೆ


ಸುರೇಶ್ ರೈನಾ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು  ಆ ವೇಳೆ ಪಂಜಾಬ್ ಸಿಎಂ ಆಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಟ್ವಿಟರ್​ ಮೂಲಕ ಮನವಿ ಮಾಡಿಕೊಂಡಿದ್ದರು. ನಂತರ ಆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಹಸ್ತಾಂತರಿಸಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಸಿಕ್ಕಿಬಿದ್ದರೂ, ಪ್ರಮುಖ ಆರೋಪಿ ರಶೀದ್ ಮಾತ್ರ ಪತ್ತೆಯಾಗಿರಲಿಲ್ಲ. ಆದ್ದರಿಂದ ಅವನನ್ನು ಮೋಸ್ಟ್ ವಾಂಟೆಡ್ ಎಂದು ಘೋಷಿಸಲಾಗಿತ್ತು. ಆತನ ಪತ್ತೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ವಿಷಯ ತಿಳಿದ ರಶೀದ್ ಪೊಲೀಸರಿಗೆ ಸಿಗದೆ ಅಲೆದಾಡುತ್ತಿದ್ದ. ಶನಿವಾರ ಸಿಕ್ಕಿಬಿದ್ದಿದ್ದು, ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ಎಸ್​ಎಸ್​ಪಿ ಸಂಜೀವ್ ಸುಮನ್ ಹೇಳಿದ್ದಾರೆ.
ಆರೋಪಿಗಳ ಆಗಮನದ ಮಾಹಿತಿ ತಿಳಿದಿದ್ದ ಪೊಲೀಸ್


ಈ ಬವಾರಿಯಾ ಗ್ಯಾಂಗ್‌ನ ಕೆಲವು ಸದಸ್ಯರು ಕೆಲವು ಘಟನೆಗಳನ್ನು ನಡೆಸಲು ಈ ಪ್ರದೇಶಕ್ಕೆ ಬರುತ್ತಿದ್ದಾರೆ ಎಂದು ಶಹಪುರ ಪೊಲೀಸ್ ಠಾಣೆಗೆ ಮಾಹಿತಿದಾರರಿಂದ ಮಾಹಿತಿ ಬಂದಿದೆ. ಈ ಕಾರಣದಿಂದಾಗಿ ಶಹಪುರ ಪೊಲೀಸರು ಎಸ್‌ಒಜಿ ಮುಜಾಫರ್‌ನಗರ ಪ್ರದೇಶದಲ್ಲಿ ತಪಾಸಣೆ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಅದೇ ಸಮಯದಲ್ಲಿ ಸಹದುದಿ ರಸ್ತೆಯಲ್ಲಿ ಇಬ್ಬರು ಬೈಕ್‌ನಲ್ಲಿ ಬರುತ್ತಿದ್ದುದನ್ನು ಕಂಡ ಪೊಲೀಸರು ಅವರನ್ನು ಬೈಕ್​ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಓಡಿಹೋಗಲು ಯತ್ನಿಸಿದ್ದು, ಬಳಿಕ ಪೊಲೀಸರು ಕಿಡಿಗೇಡಿಗಳ ಮೇಲೆ ಗುಂಡು ಹಾರಿಸಿದ್ದಾರೆ.


ಆತ್ಮರಕ್ಷಣೆಗಾಗಿ ಎನ್​ಕೌಂಟರ್


ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದಾಗ, ಮೊರಾದಾಬಾದ್‌ನ ದುಷ್ಕರ್ಮಿ ರಶೀದ್ ಅಲಿಯಾಸ್ ಸಿಪಾಹಿಯಾ ಅಲಿಯಾಸ್ ಚಲ್ತಾ ಫ್ರಟಾ ಪೊಲೀಸರ ಗುಂಡಿನಿಂದ ಗಾಯಗೊಂಡಿದ್ದಾನೆ.  ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಸತ್ತಿದ್ದಾನೆ. ಈ ಎನ್‌ಕೌಂಟರ್‌ನಲ್ಲಿ ಪೊಲೀಸ್ ಠಾಣಾಧಿಕಾರಿ ಶಹಪುರ್ ಬಬ್ಲು ಕುಮಾರ್ ಎಂಬುವವರೂ ಕೂಡ ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ವೇಳೆ ರಶೀದ್‌ನ ಸಹಾಯಕ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾನೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ಕಳ್ಳರ ಗ್ಯಾಂಗ್​ನ ಬೈಕ್​, ರಿವಾಲ್ವರ್, ಅಕ್ರಮ ಪಿಸ್ತೂಲ್ ಮತ್ತು ಕಾಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

First published: