ಕಾರು ಖರೀದಿಯ ಚಿಂತೆ ಬಿಡಿ: ಕೇವಲ 13 ಸಾವಿರಕ್ಕೆ ಸಿಗುತ್ತೆ ಮಹೀಂದ್ರಾ ವಾಹನಗಳು

zahir | news18
Updated:October 11, 2018, 4:27 PM IST
ಕಾರು ಖರೀದಿಯ ಚಿಂತೆ ಬಿಡಿ: ಕೇವಲ 13 ಸಾವಿರಕ್ಕೆ ಸಿಗುತ್ತೆ ಮಹೀಂದ್ರಾ ವಾಹನಗಳು
  • News18
  • Last Updated: October 11, 2018, 4:27 PM IST
  • Share this:
-ನ್ಯೂಸ್ 18 ಕನ್ನಡ

ಪ್ರತಿಯೊಬ್ಬರಿಗೂ ಸ್ವಂತ ವಾಹನ ಖರೀದಿಸಬೇಕೆಂಬ ಕನಸುಗಳಿರುತ್ತದೆ. ಆದರೆ ಹಣಕಾಸಿನ ಸಮಸ್ಯೆಗಳಿಂದ ಇಂತಹ ಕನಸುಗಳು ಈಡೇರುವುದೇ ಇಲ್ಲ. ಇನ್ನು ಮುಂದೆ ಹಣಕಾಸಿನ ವಿಚಾರವನ್ನು ಪಕ್ಕಕಿಟ್ಟು ಯೋಚಿಸಲು ಮಹೀಂದ್ರಾ & ಮಹೀಂದ್ರಾ ಸಂಸ್ಥೆ ಹೊಸ ಯೋಜನೆ ಜಾರಿಗೆ ತಂದಿದೆ. ಇಲ್ಲಿ ನೀವು ಮಹೀಂದ್ರಾ ಕಂಪನಿಗಳ ವಾಹನಗಳನ್ನು ನಿರ್ದಿಷ್ಟ ಪ್ರಮಾಣದ ಹಣ ಪಾವತಿಸಿ ತಮ್ಮದಾಗಿಸಿಕೊಳ್ಳಬಹುದು. ಅಂದರೆ ಲೀಸ್​​ಗೆ ವಾಹನಗಳನ್ನು ಪಡೆದು ಚಾಲನೆ ಮಾಡಬಹುದು. ಈ ಹೊಸ ಯೋಜನೆಯಲ್ಲಿ ವಾಹನಗಳನ್ನು ಮೂರು, ನಾಲ್ಕು ಮತ್ತು ಐದು ವರ್ಷಗಳ ಚಂದಾದಾರಿಕೆಯಲ್ಲಿ ನೀಡಲಾಗುತ್ತದೆ.

ಏನಿದು ಹೊಸ ಯೋಜನೆ?
ವಾಹನ ಗುತ್ತಿಗೆ ನೀಡುವ ಯೋಜನೆಯಡಿಯಲ್ಲಿ ಗ್ರಾಹಕನು ಯಾವುದೇ ರೀತಿಯ ಡೌನ್​ ಪೇಮೆಂಟ್ ನೀಡಬೇಕಿಲ್ಲ. ಲೀಸ್ ಮುಗಿಯುತ್ತಿದ್ದಂತೆ ವಾಹನಗಳನ್ನು ಕಂಪನಿಗೆ ಮರಳಿಸಬೇಕಾಗುತ್ತದೆ. ಮಾಸಿಕ ಕಂತು 13,499 ರಿಂದ 32,999 ರೂ.ವರೆಗೆ ಇದ್ದು, ಆಯಾ ವಾಹನಗಳ ಮಾಡೆಲ್​ಗೆ ಅನುಗುಣವಾಗಿ ಮಾಸಿಕ ಬಾಡಿಗೆಯನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ವಾಹನದ ವಿಮೆ, ನಿರ್ವಹಣಾ ವೆಚ್ಚ, ರಸ್ತೆ ತೆರಿಗೆ, ಅಪಘಾತ ನಿರ್ವಹಣೆ ಸೇರಿದಂತೆ ಮಹೀಂದ್ರಾ ಆನ್ ರೋಡ್​ ಅಸಿಸ್ಟೆನ್ಸ್ ಸೌಲಭ್ಯವನ್ನು ದೊರಕಲಿದೆ. ಹಾಗೆಯೇ ಗುತ್ತಿಗೆಯ ಅವಧಿ ಮುಗಿದ ಬಳಿಕ ವಾಹನವನ್ನು ಖರೀದಿಸುವ ಅವಕಾಶವನ್ನು ಇಲ್ಲಿ ನೀಡಲಾಗುತ್ತದೆ.

ಹೊಸ ಯೋಜನೆ ಎಲ್ಲೆಲ್ಲಿ ಲಭ್ಯ?
ದೇಶದ ಪ್ರಮುಖ ಆರು ನಗರಗಳಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಮೊದಲ ಹಂತವಾಗಿ ಬೆಂಗಳೂರು, ದೆಹಲಿ, ಪುಣೆ, ಅಹಮದಾಬಾದ್, ಮುಂಬೈ, ಹೈದರಬಾದ್ ಮತ್ತು ಚೆನ್ನೈನಲ್ಲಿ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.

ಯಾವ ವಾಹನಗಳು ಲಭ್ಯವಿದೆ?ಈ ಯೋಜನೆಯಲ್ಲಿ ಮಹೀಂದ್ರಾ ಕಂಪನಿಯ ಸ್ಪೋರ್ಟ್ಸ್​ ಯುಟಿಲಿಟಿ ವೆಹಿಕಲ್ (SUV), KUV100, TUV300, XUV 500, ಸ್ಕಾರ್ಪಿಯೋ ಮತ್ತು ಮರಾಝೊ ವಾಹನಗಳನ್ನು ಗುತ್ತಿಗೆ ಪಡೆಯಬಹುದು.

ಈ ಯೋಜನೆಯ ಮೂಲಕ ಗ್ರಾಹಕನಿಗೆ 'No-Worry'ಅನುಭವ ನೀಡಲು ಮಹೀಂದ್ರಾ ಕಂಪನಿ ನಿರ್ಧರಿಸಿದೆ. ಇದರಿಂದ ಕಾರು ಕೊಳ್ಳಬೇಕೆಂದು ಬಯಸುವ ವೃತ್ತಿಪರರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ವಿಶೇಷ ಯೋಜನೆಯನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುತ್ತಾರೆಂಬ ಭರವಸೆ ಹೊಂದಿದ್ದೇನೆ ಎಂದು ಮಹೀಂದ್ರಾ & ಮಹೀಂದ್ರಾ ಗ್ರೂಪ್​ನ ಸಿಎಫ್​ಒ ಮತ್ತು ಸಿಐಒ ಪಾರ್ಥಸಾರಥಿ ತಿಳಿಸಿದ್ದಾರೆ.
First published: October 11, 2018, 4:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading