ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ; ನಾಳೆ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ಅಕ್ಟೋಬರ್​ 26ರಂದು ಅಧ್ಯಕ್ಷ ಸಿರಿಸೇನಾ ನೇಮಕ ಮಾಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು.

HR Ramesh | news18india
Updated:December 15, 2018, 1:26 PM IST
ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ; ನಾಳೆ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ
ಮಹಿಂದಾ ರಾಜಪಕ್ಸ
  • Share this:
ಕೊಲಂಬೊ: ಸುಪ್ರೀಂಕೋರ್ಟ್​ನ ಎರಡು ಅದೇಶದ ಪರಿಣಾಮವಾಗಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ನೇಮಕವಾಗಿದ್ದ ಪ್ರಧಾನಮಂತ್ರಿ ಸ್ಥಾನಕ್ಕೆ ಮಹೀಂದಾ ರಾಜಪಕ್ಸ ಶನಿವಾರ ರಾಜೀನಾಮೆ ನೀಡಿದ್ದಾರೆ.

ಯುನೈಟೆಡ್​ ಫ್ರೀಡಂ ಅಲೈಯನ್ಸ್​ (ಯುಪಿಎಫ್​ಎ) ಪ್ರತಿನಿಧಿಗಳಿಗೆ ರಾಜಪಕ್ಸೆ ಅವರು ರಾಜೀನಾಮೆ ನೀಡುವ ವಿಚಾರವನ್ನು ತಿಳಿಸಿದ್ದಾರೆ ಎಂದು ಸಂಸದ ಶೇಹಾನ್​ ಸೀಮಾಸಿಂಘೆ ವರದಿಗಾರರಿಗೆ ತಿಳಿಸಿದ್ದಾರೆ.

ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ಅಕ್ಟೋಬರ್​ 26ರಂದು ಅಧ್ಯಕ್ಷ ಸಿರಿಸೇನಾ ನೇಮಕ ಮಾಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದರಿಂದ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದೀಗ ತೆರವಾಗಿರುವ ಪ್ರಧಾನಮಂತ್ರಿ ಸ್ಥಾನವನ್ನು ವಿಕ್ರಮಸಿಂಘೆ ಅವರು ವಹಿಸಿಕೊಳ್ಳಲಿದ್ದಾರೆ.

ಮುಂದಿನ ತಿಂಗಳು ಸಂಪೂರ್ಣ ಬಹುಮತ ಸಾಬೀತು ಮಾಡುವವರೆಗೂ ಪ್ರಧಾನಿಮಂತ್ರಿಯಾಗಿ ಮುಂದುವರೆಯುವಂತೆ ಕೋರ್ಟ್​ ನೀಡಿದ್ದ ಆದೇಶವನ್ನು ಶ್ರೀಲಂಕಾ ಸುಪ್ರೀಂಕೋರ್ಟ್​ ತಡೆಹಿಡಿದ ಹಿನ್ನೆಲೆಯಲ್ಲಿ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಸಿರಿಸೇನಾ ಅವರು ಕಾನೂನುಬಾಹಿರವಾಗಿ ನೇಮಿಸಿರುವ ಸರ್ಕಾರವನ್ನು ವಿಸರ್ಜಿಸುವಂತೆ ಗುರುವಾರ ಸುಪ್ರೀಂಕೋರ್ಟ್​ ಅದೇಶ ನೀಡಿತ್ತು.

ಇದನ್ನು ಓದಿ: ಶ್ರೀಲಂಕಾ ರಾಜಕೀಯ ಬಿಕ್ಕಟ್ಟು; ವಿಶ್ವಾಸ ಮಂಡನೆಯಲ್ಲಿ ಮಹಿಂದಾ ರಾಜಪಕ್ಸಗೆ ಸೋಲು

ರಾಜಪಕ್ಸ ಪ್ರತಿನಿಧಿ ಲಕ್ಷ್ಮಣ್ ಯಪ ಅಬೆವಾರ್ದೆನಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ಅಧ್ಯಕ್ಷ ಸಿರಿಸೇನಾ ಅವರೊಂದಿಗೆ ನಡೆದ ಸಭೆಯಲ್ಲಿ ರಾಜಪಕ್ಸ ಅವರು ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡು, ಹೊಸ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.

ನೂತನ ಪ್ರಧಾನಿಯಾಗಿ ನಾಳೆ ವಿಕ್ರಮಸಿಂಘೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಶುಕ್ರವಾರ ವಿಕ್ರಮಸಿಂಘೆ ಅವರೊಂದಿಗೆ ದೂರವಾಣಿಯೊಂದಿಗೆ ಮಾತನಾಡಿರುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದಾರೆ.
First published:December 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading