‘ಗಾಂಧಿ ಕಟ್ಟರ್ ಸನಾತನಿ ಹಿಂದೂ ಆಗಿದ್ದರು‘: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಗಾಂಧಿ ಆದರ್ಶಗಳು ಭಾರತೀಯವಾಗಿವೆ. ಹಾಗಾಗಿಯೇ ತಾವು ಹಿಂದೂ ಎನ್ನುವುದನ್ನು ಯಾವತ್ತು ಮುಚ್ಚಿಡಲಿಲ್ಲ. ಭಾರತದ ಬಗ್ಗೆ ಗಾಂಧಿಯವರಿಗೆ ಇದ್ದ ಕನಸು ಈಗ ನನಸಾಗುತ್ತಿದೆ. ಇಂದಿನ ಯುವ ಜನಾಂಗ ಗಾಂಧಿ ಕನಸು ನನಸು ಮಾಡಲಿದೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
news18-kannada Updated:February 18, 2020, 9:46 PM IST

ಮೋಹನ್ ಭಾಗವತ್
- News18 Kannada
- Last Updated: February 18, 2020, 9:46 PM IST
ನವದೆಹಲಿ(ಫೆ.18): ಮಹಾತ್ಮಾ ಗಾಂಧಿಯವರು ಕಟ್ಟರ್ ಸನಾತನ ಹಿಂದೂ ಆಗಿದ್ದರು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಸೋಮವಾರ ಅಂದರೆ ನಿನ್ನೆ ಮಾಜಿ ಎನ್ಸಿಇಆರ್ಟಿ ಮುಖ್ಯಸ್ಥ ಜೆ.ಎಸ್ ರಾಜಪೂತ್ ಬರೆದ ಗಾಂಧಿ ಕುರಿತಾದ ಕೃತಿಯೊಂದರ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಭಾಗಿಯಾಗಿದ್ದರು. ಇಲ್ಲಿನ ವೇದಿಕೆಯನ್ನುದ್ದೇಶಿಸಿ ಮಾತಾಡಿದ ಅವರು, ಗಾಂಧಿ ಯಾವತ್ತು ಹಿಂದೂ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿರಲಿಲ್ಲ. ಬದಲಿಗೆ ಭಾರತೀಯತೆ ಬಗ್ಗೆ ಚಿಂತಿಸುತ್ತಿದ್ದ ಗಾಂಧಿ, ತಾನೋರ್ವ ಕಟ್ಟರ್ ಹಿಂದು ಹೇಳಿಕೊಳ್ಳುತ್ತಿದ್ದರು ಎಂದಿದ್ಧಾರೆ.
ಇನ್ನು, ಮಹಾತ್ಮ ಗಾಂಧಿ ಕಟ್ಟರ್ ಸನಾತನಿ ಹಿಂದೂ ಆಗಿದ್ದರು. ಇವರು ಹಿಂದೂ ಆಗಿದ್ದರಿಂದಲೇ ದೇವರನ್ನು ಪೂಜಿಸುತ್ತಿದ್ದರು. ತಮ್ಮ ನಂಬಿಕೆಗೆ ಬದ್ಧರಾಗಿದ್ದು, ಇತರರ ನಂಬಿಕೆಗಳನ್ನು ಗೌರವಿಸುತ್ತಿದ್ದರು. ತಮ್ಮ ಹೋರಾಟ ತಪ್ಪು ದಾರಿ ಹಿಡಿದರೆ ಪಶ್ಚಾತ್ತಾಪ ಪಡುತ್ತಿದ್ದರು ಎಂದು ಗಾಂಧಿಯವರನ್ನು ಮೋಹನ್ ಭಾಗವತ್ ಕೊಂಡಾಡಿದರು. ಇನ್ನು, ಇಂದಿನ ಕಾಲದಲ್ಲಿ ಚಳವಳಿಗೇನಾದರೂ ತೊಡಕಾದರೆ ಯಾರೂ ಪಶ್ಚಾತ್ತಾಪ ಪಡುವುದಿಲ್ಲ. ಪ್ರತಿಭಟನೆ ನೇತೃತ್ವವಹಿಸಿದವರೇ ಬೆಲೆ ತೆರಬೇಕಾಗುತ್ತದೆ. ಆದರೆ, ಎಂದೂ ಹೋರಾಟದ ರೂವಾರಿಗಳಿಗೆ ಸೋಲು ಮತ್ತು ಗೆಲುವಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಇದನ್ನೂ ಓದಿ: ಮಹಾತ್ಮ ಗಾಂಧಿ ಹುಡುಕಾಡುತ್ತಿದ್ದ ಸತ್ಯವೇ ಹಿಂದುತ್ವ: ಮೋಹನ್ ಭಾಗವತ್
ಗಾಂಧಿ ಆದರ್ಶಗಳು ಭಾರತೀಯವಾಗಿವೆ. ಹಾಗಾಗಿಯೇ ತಾವು ಹಿಂದೂ ಎನ್ನುವುದನ್ನು ಯಾವತ್ತು ಮುಚ್ಚಿಡಲಿಲ್ಲ. ಭಾರತದ ಬಗ್ಗೆ ಗಾಂಧಿಯವರಿಗೆ ಇದ್ದ ಕನಸು ಈಗ ನನಸಾಗುತ್ತಿದೆ. ಇಂದಿನ ಯುವ ಜನಾಂಗ ಗಾಂಧಿ ಕನಸು ನನಸು ಮಾಡಲಿದೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಮಹಾತ್ಮ ಗಾಂಧಿ ಕಟ್ಟರ್ ಸನಾತನಿ ಹಿಂದೂ ಆಗಿದ್ದರು. ಇವರು ಹಿಂದೂ ಆಗಿದ್ದರಿಂದಲೇ ದೇವರನ್ನು ಪೂಜಿಸುತ್ತಿದ್ದರು. ತಮ್ಮ ನಂಬಿಕೆಗೆ ಬದ್ಧರಾಗಿದ್ದು, ಇತರರ ನಂಬಿಕೆಗಳನ್ನು ಗೌರವಿಸುತ್ತಿದ್ದರು. ತಮ್ಮ ಹೋರಾಟ ತಪ್ಪು ದಾರಿ ಹಿಡಿದರೆ ಪಶ್ಚಾತ್ತಾಪ ಪಡುತ್ತಿದ್ದರು ಎಂದು ಗಾಂಧಿಯವರನ್ನು ಮೋಹನ್ ಭಾಗವತ್ ಕೊಂಡಾಡಿದರು.