ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು (Mahatma Gandhi) ಶಾಂತಿ ಹಾಗೂ ಪ್ರೀತಿಯ ಸಂದೇಶದೊಂದಿಗೆ ಹೆಚ್ಚಿನ ಓದುಗರನ್ನು ತಲುಪಲು ಪತ್ರಿಕಾ ಮಾಧ್ಯಮವನ್ನು (Media) ಬಳಸಿಕೊಂಡಿದ್ದರು. ಅದಕ್ಕೆಂದೇ ತಮ್ಮದೇ ಆದ ಹರಿಜನ್ (Harijan Paper) ಹೆಸರಿನ ಪತ್ರಿಕೆಯನ್ನು ಆರಂಭಿಸಿದ್ದರು.
ಹರಿಜನ್ ಪತ್ರಿಕೆಯ ಮೂಲಕ ಮಹಾತ್ಮಾ ಗಾಂಧಿ ತಮ್ಮೊಳಗಿನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದರು. ರಾಜಕೀಯದಿಂದ ಸಾಮಾಜಿಕ ನ್ಯಾಯದವರೆಗೆ ವಿವಿಧ ವಿಷಯಗಳ ಕುರಿತು ತಮ್ಮ ವಿಚಾರಗಳನ್ನು ಆಲೋಚನೆಗಳನ್ನು ಗಾಂಧಿಯವರು ಪತ್ರಿಕೆಗಳ ಮೂಲಕ ಜನರಿಗೆ ಬಿತ್ತರಿಸುತ್ತಿದ್ದರು. ಭಾರತದ ಅತ್ಯಂತ ಕೆಳವರ್ಗದ, ದಲಿತ, ದಮನಿತ ಸಮುದಾಯದ ಬೇಡಿಕೆಗಳಿಗೆ ಧ್ವನಿಯಾಗಲು, ಅವರೊಂದಿಗೆ ಹೋರಾಟ ನಡೆಸಲು ಹರಿಜನ್ ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಂಡರು.
ಹರಿಜನ್ ಸುದ್ದಿಪತ್ರಿಕೆಯ ಕುರಿತು
1933 ರಲ್ಲಿ ಮಹಾತ್ಮಾ ಗಾಂಧಿಯವರು ಹರಿಜನ್ ಪತ್ರಿಕೆಯನ್ನು ಆರಂಭಿಸಿದರು. ಭಾರತದಲ್ಲಿ ಅತ್ಯಂತ ಕೆಳಜಾತಿಯ ವರ್ಗದವರಿಗೆ ಶಾಂತಿ ಹಾಗೂ ಏಕತೆಯ ಸಂದೇಶವನ್ನು ಹರಡುವ ಮಾರ್ಗವಾಗಿ ಹರಿಜನ್ ಪತ್ರಿಕೆ ಕಾರ್ಯನಿರ್ವಹಿಸಿತು.
ಭಾರತದ ಅಸ್ಪೃಶ್ಯರಿಗೆ ಸಹಾಯ ಮಾಡಲು ಗಾಂಧಿಯವರು ಮಾಡಿದ ಅನೇಕ ಪ್ರಯತ್ನಗಳಿಗೆ ಟೀಕೆ ಹಾಗೂ ಹಿಂಸೆಯನ್ನು ಎದುರಿಸಬೇಕಾಯಿತು. ಆದರೆ ಎಷ್ಟೇ ಕಷ್ಟ ಬಂದರೂ ಗಾಂಧೀಜಿ ಹಿಂದೆ ಸರಿಯಲಿಲ್ಲ. ಕೆಳವರ್ಗದ ಜನರನ್ನು ತಲುಪಲು ಪ್ರಬಲ ಸಾಧನವಾಗಿ ಹರಿಜನ ಪತ್ರಿಕೆ ಕಾರ್ಯನಿರ್ವಹಿಸುವಂತೆ ನೋಡಿಕೊಂಡರು. ಪತ್ರಿಕೆ ವಾರಕ್ಕೊಮ್ಮೆ ಪ್ರಕಟವಾಗುತ್ತಿತ್ತು. ಹಾಗೂ ಅರ್ಧ ಮಿಲಿಯನ್ ಓದುಗರನ್ನು ಪತ್ರಿಕೆ ಹೊಂದುವಷ್ಟು ಪ್ರಸರಣ ಸಾಮರ್ಥ್ಯ ಪಡೆದುಕೊಂಡಿತ್ತು.
ಸಮಾಜದಲ್ಲಿರುವ ಆಗುತ್ತಿರುವ ವರ್ತಮಾನದ ಘಟನೆಗಳಿಂದ ಆರಂಭಿಸಿ ಸಾಮಾಜಿಕ ವಿಷಯಗಳ ಕುರಿತು ಗಾಂಧಿಯವರ ಆಲೋಚನೆಗಳನ್ನು ಪತ್ರಿಕೆಗಳಲ್ಲಿ ಪ್ರಸಾರಪಡಿಸಲಾಗುತ್ತಿತ್ತು. ಈ ಪತ್ರಿಕೆ ಭಾರತದ ಅತ್ಯಂತ ಪ್ರಭಾವಶಾಲಿ ನಾಯಕರ ಕೆಲಸವನ್ನು ಎತ್ತಿ ತೋರಿಸುವ ಇತಿಹಾಸದ ಪ್ರಮುಖ ಭಾಗವಾಗಿ ಉಳಿದಿದೆ.
ಪತ್ರಿಕೆಗೆ ಹರಿಜನ್ ಹೆಸರು ಬರಲು ಕಾರಣವೇನು
ಇದನ್ನೂ ಓದಿ: BR Ambedkar: ಅಂಬೇಡ್ಕರ್ ಬದುಕಿರ್ತಿದ್ರೆ ಗೋಡ್ಸೆ ಕೊಂದಂತೆ ಕೊಲ್ಲುತ್ತಿದ್ದೆ; ನಾಲಿಗೆ ಹರಿಬಿಟ್ಟ ಕಿಡಿಗೇಡಿ ಅಂದರ್
ಬಳಿಕ ಗಾಂಧೀಜಿವರು 1933 ರಲ್ಲಿ ಹರಿಜನ್ ಪತ್ರಿಕೆಯನ್ನು ವಾರಪತ್ರಿಕೆಯಾಗಿ ಪ್ರಕಟಿಸಲು ಪ್ರಾರಂಭಿಸಿದರು. ಇದು ಅವರಿಗೆ ಪರಿಶಿಷ್ಟ ಜಾತಿಗಳನ್ನು ತಲುಪಲು ಮತ್ತು ಅವರ ಹಕ್ಕುಗಳ ಬಗ್ಗೆ ಮತ್ತು ಅವರು ತಮ್ಮ ಪರವಾಗಿ ಹೇಗೆ ನಿಲ್ಲಬಹುದು ಎಂಬುದರ ಕುರಿತು ಮಾತನಾಡಲು ಒಂದು ಮಾರ್ಗವಾಗಿತ್ತು. ಅಸ್ಪೃಶ್ಯತೆ, ಮಹಿಳಾ ಹಕ್ಕುಗಳು ಮತ್ತು ಶಿಕ್ಷಣದಂತಹ ವಿಷಯಗಳನ್ನು ಚರ್ಚಿಸಲು ಅವರು ಹರಿಜನ ಪತ್ರಿಕೆಯನ್ನು ಗಾಂಧೀಜಿ ವೇದಿಕೆಯನ್ನಾಗಿ ಬಳಸಿಕೊಂಡರು.
ಗಾಂಧೀಜಿ ಸ್ವಂತ ಪತ್ರಿಕೆಯನ್ನು ಆರಂಭಿಸಿದ್ದೇಕೆ?
ಗಾಂಧಿಯವರು ತಮ್ಮದೇ ಆದ ಪತ್ರಿಕೆಯನ್ನು ಪ್ರಾರಂಭಿಸಲು ಮುಖ್ಯ ಕಾರಣವೆಂದರೆ ತಮ್ಮ ಸಂದೇಶವನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಲು ಬಯಸಿದ್ದು. ಸಾಂಪ್ರದಾಯಿಕ ಪತ್ರಿಕೆಗಳು ಗಾಂಧಿ ಮತ್ತು ಅವರ ಸಂದೇಶದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂಬುದು ಅವರಿಗೆ ತಿಳಿದಿತ್ತು, ಹೀಗಾಗಿ ಅವರು ತಮ್ಮದೇ ಆದ ಪತ್ರಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿದರು.
ಈ ರೀತಿಯಾಗಿ, ಅವರು ತಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ನೇರವಾಗಿ ಜನರೊಂದಿಗೆ ಹಂಚಿಕೊಳ್ಳಬಹುದು ಎಂಬುದಾಗಿ ನಿರ್ಧರಿಸಿದ್ದರು. ಮಾತಿಗಿಂತ ಬರಹಕ್ಕೆ ಶಕ್ತಿ ಜಾಸ್ತಿ ಎಂಬುದು ಗಾಂಧಿಗೆ ತಿಳಿದಿತ್ತು. ತಮ್ಮ ಪತ್ರಿಕೆಯ ಮೂಲಕ ತಮ್ಮ ಸಂದೇಶವನ್ನು ಹೊರಹಾಕಲು ಸಾಧ್ಯವಾದರೆ, ಅದು ಜನರ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ ಎಂದು ಅವರು ತಿಳಿದಿದ್ದರು. ಹೀಗಾಗಿ ಹರಿಜನ್ ಪತ್ರಿಕೆಯು ಗಾಂಧಿಯವರ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬಹಳ ಯಶಸ್ವಿಯಾಗಿತ್ತು.
ಹರಿಜನ್ ಪತ್ರಿಕೆ ಅಹಿಂಸೆಯ ಸಂದೇಶವನ್ನು ಹೇಗೆ ಹರಡಿತು
ಹರಿಜನ್ ಪತ್ರಿಕೆ ಕೇವಲ ವೃತ್ತ ಪತ್ರಿಕೆ ಎಂಬುದಕ್ಕಿಂತ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿತ್ತು. ಜನಸಾಮಾನ್ಯರಿಗೆ ಅಹಿಂಸಾತ್ಮಕ ಪ್ರತಿರೋಧದ ಸಂದೇಶವನ್ನು ಹರಡಲು ಗಾಂಧಿಯವರಿಗೆ ಒಂದು ಮಾರ್ಗವಾಗಿತ್ತು. ದಲಿತ ಸಮುದಾಯ ಜನರನ್ನು ಶಿಕ್ಷಣ ಮತ್ತು ಇತರ ವಿಚಾರಗಳಲ್ಲಿ ಮೇಲೆತ್ತುವ ಸಾಧನವಾಗಿ ಕಂಡ ಅವರು, ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಲು ಪತ್ರಿಕೆಯನ್ನು ವೇದಿಕೆಯಾಗಿ ಬಳಸಿಕೊಂಡರು.
ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಪತ್ರಿಕಾ ಮಾಧ್ಯಮವನ್ನು ಪ್ರಬಲ ಅಸ್ತ್ರವಾಗಿ ಬಳಸಬಹುದೆಂದು ಗಾಂಧಿ ನಂಬಿದ್ದರು. ಪತ್ರಿಕೆಗೆ ಲೇಖನಗಳನ್ನು ಬರೆದರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳವಳಿಯ ಇತರ ಪ್ರಮುಖ ವ್ಯಕ್ತಿಗಳ ಭಾಷಣಗಳು ಮತ್ತು ಪ್ರಬಂಧಗಳನ್ನು ಮುದ್ರಿಸಲು ಪತ್ರಿಕೆಯನ್ನು ಬಳಸಿಕೊಂಡರು.
ಹರಿಜನ್ ಪತ್ರಿಕೆಯ ವಿಷಯ
ಗಾಂಧಿಯವರು ರಾಜಕೀಯ ಮತ್ತು ಧರ್ಮದಿಂದ ಸಾಮಾಜಿಕ ಸುಧಾರಣೆ ಮತ್ತು ಜಾತಿ ತಾರತಮ್ಯದವರೆಗೆ ಹಲವಾರು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪತ್ರಿಕೆಯನ್ನು ವೇದಿಕೆಯನ್ನಾಗಿ ಬಳಸಿಕೊಂಡರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು, ರವೀಂದ್ರನಾಥ ಟ್ಯಾಗೋರ್ ಮತ್ತು ಆಲ್ಬರ್ಟ್ ಐನ್‌ಸ್ಟೈನ್ ಅವರಂತಹ ಜನರ ಲೇಖನಗಳು ಮತ್ತು ಪತ್ರಗಳನ್ನು ಪ್ರಕಟಿಸುವ ಮೂಲಕ ಇತರ ನಾಯಕರು ಮತ್ತು ಚಿಂತಕರನ್ನು ತಲುಪಲು ಪತ್ರಿಕೆಯನ್ನು ಗಾಂಧಿ ಬಳಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ