• Home
  • »
  • News
  • »
  • national-international
  • »
  • Nehru: ನೆಹರೂ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ: ವೇದಿಕೆಯಲ್ಲೇ ಕಣ್ಣೀರಿಟ್ಟ ಮಹಾತ್ಮ ಗಾಂಧೀಜಿ ಮೊಮ್ಮಗ!

Nehru: ನೆಹರೂ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ: ವೇದಿಕೆಯಲ್ಲೇ ಕಣ್ಣೀರಿಟ್ಟ ಮಹಾತ್ಮ ಗಾಂಧೀಜಿ ಮೊಮ್ಮಗ!

ಜವಾಹರಲಾಲ್ ನೆಹರು

ಜವಾಹರಲಾಲ್ ನೆಹರು

Jawaharlal Nehru: ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ವಿಭಜನೆ ಮತ್ತು ಸಮಕಾಲೀನ ಭಾರತದ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೇಳಿದ ಪ್ರಶ್ನೆಗೆ ಮಹಾತ್ಮ ಗಾಂಧಿಯವರ ಮೊಮ್ಮಗ ರಾಜಮೋಹನ್ ಉತ್ತರಿಸಿದ್ದಾರೆ. ಈ ನೆಹರೂ ವಿಚಾರ ಉಲ್ಲೇಖಿಸಿ ಅವರು ವೇದಿಕೆಯಲ್ಲೇ ಕಣ್ಣೀರು ಹರಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Himachal Pradesh, India
  • Share this:

ಶಿಮ್ಲಾ(ಅ. 17): ಮಹಾತ್ಮ ಗಾಂಧಿಯವರ ಮೊಮ್ಮಗ ರಾಜಮೋಹನ್ ಗಾಂಧಿ ಕೂಡ ಖುಷ್ವಂತ್ ಸಿಂಗ್ ಲಿಟ್‌ಫೆಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶದ ಕಸೌಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆಸುಳ್ಳು ಮಾಹಿತಿ ಹರಡಿದವರ ಹಾಗೂ, ಟೀಕಿಸಿದವರ ವಿರುದ್ಧ ಕಿಡಿ ಕಾರಿದರು. ನೆಹರು ಮಹಾನ್ ಮತ್ತು ಪ್ರತಿಭಾವಂತ ವ್ಯಕ್ತಿ, ಅವರ ಬಗ್ಗೆ ಸುಳ್ಳು ಮಾತುಗಳನ್ನು ಹೇಳಲಾಗುತ್ತಿದೆ ಎಂದು ರಾಜಮೋಹನ್ ಗಾಂಧಿ ಹೇಳಿದರು.


ಇದನ್ನೂ ಓದಿ: ಕಾಂಗ್ರೆಸ್ ಹಾಕಿದ್ದ ಟಿಪ್ಪು ಫ್ಲೆಕ್ಸ್​​ ಹರಿದ ಪುನೀತ್ ಕೆರೆಹಳ್ಳಿ-ಪೊಲೀಸರಿಂದ ಮೂವರ ಬಂಧನ


ಜವಾಹರಲಾಲ್ ನೆಹರು ಅವರ ಬಗ್ಗೆ ಸುಳ್ಳುಗಳನ್ನು ಹರಡಲಾಗುತ್ತಿದೆ ಎಂದು ಮಹಾತ್ಮ ಗಾಂಧಿಯವರ ಮೊಮ್ಮಗ ಮತ್ತು ಇತಿಹಾಸಕಾರ ರಾಜಮೋಹನ್ ಗಾಂಧಿ ಶನಿವಾರ ಕಸೌಲಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ನನಗೆ ತುಂಬಾ ವಿಷಾದವಿದೆ. ನೀವು ಅವರ ನೀತಿಗಳನ್ನು ಟೀಕಿಸಬಹುದು, ಆದರೆ ಒಳ್ಳೆಯ ವ್ಯಕ್ತಿಯ ಬಗ್ಗೆ ಕೊಳಕು ಮತ್ತು ಸುಳ್ಳು ವಿಷಯಗಳನ್ನು ಹರಡುವ ಹಕ್ಕನ್ನು ಯಾರು ನೀಡಿದರು? ಇದರಿಂದ ನನಗೆ ತುಂಬಾ ನೋವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ 14 ವರ್ಷ ಜೈಲು ವಾಸ ಅನುಭವಿಸಿದ್ದರು. ಈ ಸಮಯದಲ್ಲಿ ಅವರ ಪತ್ನಿ ನಿಧನರಾದರು. ನೆಹರೂ ಬಗ್ಗೆ ಮಾತನಾಡುವಾಗ ರಾಜ್‌ಮೋಹನ್ ಅವರ ಕಣ್ಣಲ್ಲೂ ನೀರು ಬಂತು.


ನೆಹರೂ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ


ಈ ಸಮಾರಂಭದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ವಿಭಜನೆ ಮತ್ತು ಸಮಕಾಲೀನ ಭಾರತದ ಬಗ್ಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಶ್ನೆಗಳಿಗೆ ಮಹಾತ್ಮ ಗಾಂಧಿಯವರ ಮೊಮ್ಮಗ ಪ್ರತಿಕ್ರಿಯಿಸಿದರು. ನಾನು ಹಿಮಾಲಯವನ್ನು ನೋಡಿದಾಗ, ಅದರ ಬಗ್ಗೆ ಹೆಚ್ಚು ಆಳವಾಗಿ ಆಸ್ವಾದಿಸುತ್ತೇನೆ ಎಂದು ಅವರು ಹೇಳಿದರು. ನೆಹರೂ ಕೂಡ ಹಿಮಾಲಯವನ್ನು ಪ್ರೀತಿಸುತ್ತಿದ್ದರು. ಆದರೆ ಹಿಮಾಲಯ ಇದನ್ನು ವಿರೋಧಿಸಬಹದು ಮತ್ತು ಇಲ್ಲಿನ ಭೂಮಿಯೂ ವಿರೋಧಿಸಬಹುದು, ನೀವು ಅವರ ನೀತಿಗಳನ್ನು ಟೀಕಿಸಬಹುದು ಆದರೆ ಅವರ ಬಗ್ಗೆ ಸುಳ್ಳುಗಳನ್ನು ಹರಡಲು ನಿಮಗೆ ಯಾವ ಹಕ್ಕಿದೆ? ನಾನು ಈ ಬಗ್ಗೆ ಗಾಢವಾಗಿ ಯೋಚಿಸುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ: ಕೋಲಾರದಲ್ಲಿ ಹಾರಲು ರೆಡಿಯಾಯ್ತು ದೇಶದ ಅತೀ ದೊಡ್ಡ ರಾಷ್ಟ್ರ ಧ್ವಜ!


ಪೂರ್ವಜರ ಬಗ್ಗೆ ಸುಳ್ಳು ವದಂತಿ ಹಬ್ಬಿಸುವುದು ತಪ್ಪು


ಸುಳ್ಳಿನ ಆಧಾರದಲ್ಲಿ ಕೋಟ್ಯಂತರ ಜನರು ಮೋತಿಲಾಲ್ ನೆಹರೂ ಅವರನ್ನು ಮುಸ್ಲಿಂ ಎಂದು ನಂಬಲು ಪ್ರಾರಂಭಿಸಿದರು ಎಂದು ಅವರು ಹೇಳಿದರು. ಈ ಸುಳ್ಳು ಹಲವು ವರ್ಷಗಳಿಂದ ಹರಡಿದೆ. ನೆಹರೂ ಮುಸ್ಲಿಮರಾಗಿದ್ದರು ಎಂದು ಕೆಲವರು ಹೇಳುತ್ತಾರೆ, ಆದರೆ ಅದು ನಿಜವಲ್ಲ. ಅಲ್ಲದೇ ಹಾಗಾಗಿದ್ದರೆ ಅದು ಅಪರಾಧವಲ್ಲ. ರಾಜಕೀಯ ಲಾಭಕ್ಕಾಗಿ ನಿಮ್ಮ ಪೂರ್ವಜರ ಬಗ್ಗೆ ಸುಳ್ಳು ಸುದ್ದಿ ಹರಡುವುದು ತಪ್ಪು ಎಂದಿದ್ದಾರೆ.


ನೆಹರೂ ಬಗೆಗಿನ ಕೆಲ ವಿಚಾರಗಳು


* ಪಂಡಿತ್ ಜವಾಹರಲಾಲ್ ನೆಹರೂ ನವೆಂಬರ್ 14, 1889ರಂದು ಅಲಹಾಬಾದ್​ನಲ್ಲಿ ಜನಿಸಿದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಮನೆಯಲ್ಲೇ ಖಾಸಗಿ ಶಿಕ್ಷಕರಿಂದ ಪಡೆದರು.


* ತಮ್ಮ 15ನೇ ವಯಸ್ಸಿನಲ್ಲಿ ಅವರು ಇಂಗ್ಲೆಂಡಿಗೆ ತೆರಳಿದರು. ಎರಡು ವರ್ಷಗಳ ಬಳಿಕ ಅಲ್ಲಿಂದ ಹ್ಯಾರೊಗೆ ತೆರಳಿ ಕೇಂಬ್ರಿಡ್ಜ್ ವಿಶ್ವಿದ್ಯಾಲಯವನ್ನು ಸೇರಿದರು. ಅಲ್ಲಿ ಅವರು ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. ಅವರು 1912ರಲ್ಲಿ ಭಾರತಕ್ಕೆ ಮರಳಿ ನೇರವಾಗಿ ರಾಜಕೀಯಕ್ಕೆ ಧುಮುಕಿದರು


* ನೆಹರೂ ಅವರು 1916ರಲ್ಲಿ ಕಮಲಾ ನೆಹರೂ ಅವರನ್ನು ಮದುವೆಯಾದರು. ಇವರ ಮಗಳೇ ಇಂದಿರಾಗಾಂಧಿ. ಒಬ್ಬ ಮಗ ಕೂಡ ಇವರಿಗೆ ಜನಿಸಿದ್ದ. ಆದರೆ ಹುಟ್ಟಿದ ಒಂದೇ ವಾರದಲ್ಲಿ ಮಗು ಸಾವನ್ನಪ್ಪಿತ್ತು.


* ಜವಾಹರ್​ಲಾಲ್​ ನೆಹರೂ ಅವರ ಮೇಲೆ ನಾಲ್ಕು ಬಾರಿ ಹತ್ಯೆ ಪ್ರಯತ್ನಗಳು ನಡೆದಿದ್ದವು. ಹೆಚ್ಚಾಗಿ ಬೆದರಿಕೆಗಳು ಬರಲು ಆರಂಭಿಸಿದರು, ಹೆಚ್ಚಿನ ಭದ್ರತೆ ಹೊಂದಲು ನೆಹರೂ ನಿರಾಕರಿಸಿದರು. ಜೊತೆಗೆ ತಮ್ಮ ಆಗಮನದಿಂದಾಗಿ ಝೀರೋ ಟ್ರಾಫಿಕ್​ ಮಾಡಿ ಸಂಚಾರಕ್ಕೆ ಅಡ್ಡಿ ಮಾಡುವುದು ಅವರಿಗೆ ಇಷ್ಟವಿರಲಿಲ್ಲ.

Published by:Precilla Olivia Dias
First published: