HOME » NEWS » National-international » MAHATMA GANDHI ASSASSINATION DEPICTED ON THE COVER PAGE OF KERALA BUDGET GNR

ಕೇರಳ ಬಜೆಟ್ ಕವರ್​ ಪೇಜ್​ನಲ್ಲಿ ಗಾಂಧಿ ಹತ್ಯೆಯ ಚಿತ್ರ; ಗೋಡ್ಸೆ ಸಮರ್ಥಕರನ್ನು ಚುಚ್ಚಿದ ಸಿಪಿಎಂ ಸರ್ಕಾರ

ಅಯವ್ಯಯ​​​​ ಪುಸ್ತಕದ ಕವರ್​​ ಪೇಜ್​ ಮೇಲೆ ಗಾಂಧಿ ಹತ್ಯೆಯ ಚಿತ್ರ ಮುದ್ರಣ ಸೇರಿದಂತೆ ಹಲವು ಕಾರಣಗಳಿಗೆ ಈ ಬಾರಿಯ ಕೇರಳ ಬಜೆಟ್​ ಅಧೀವೇಶನ ಮಹತ್ವ ಪಡೆದುಕೊಂಡಿದೆ. ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುವುದು; ಪೌರತ್ವ ಕಾಯ್ದೆ ವಿರೋಧಿ ನಿರ್ಣಯ ಹೊರಡಿಸುವುದು ಹೀಗೆ ಕೇರಳದಲ್ಲಿನ ಕೆಲವು ಬೆಳವಣಿಗೆಗಳು ರಾಷ್ಟ್ರದ ಗಮನ ಸೆಳೆದಿದೆ.

news18-kannada
Updated:February 7, 2020, 2:06 PM IST
ಕೇರಳ ಬಜೆಟ್ ಕವರ್​ ಪೇಜ್​ನಲ್ಲಿ ಗಾಂಧಿ ಹತ್ಯೆಯ ಚಿತ್ರ; ಗೋಡ್ಸೆ ಸಮರ್ಥಕರನ್ನು ಚುಚ್ಚಿದ ಸಿಪಿಎಂ ಸರ್ಕಾರ
ಗಾಂಧಿ ಹತ್ಯೆಯ ಚಿತ್ರ
  • Share this:
ತಿರುವನಂತಪುರಂ(ಫೆ. 07): ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರದ 2020-21ನೇ ಸಾಲಿನ ಬಜೆಟ್​​ ಅಧಿವೇಶನ ನಡೆಯುತ್ತಿದೆ. ಕೇರಳ ಸರ್ಕಾರದ ರಾಜ್ಯ ಹಣಕಾಸು ಸಚಿವ ಥಾಮಸ್ ಐಸಾಕ್ ಬಜೆಟ್​ ಮಂಡಿಸುತ್ತಿದ್ಧಾರೆ. "ಒಂದು ರಾಜ್ಯದ ವಾರ್ಷಿಕ ಆಯ-ವ್ಯಯ ಲೆಕ್ಕಾಚಾರವೆಲ್ಲಾ ಈ ಬಜೆಟ್​ ಪ್ರತಿಯಲ್ಲಿ ಒಳಗೊಂಡಿದೆ. ಕೇರಳದಂತಹ ರಾಜ್ಯದ ವಾರ್ಷಿಕ ಆದಾಯ-ವ್ಯಯ ಕುರಿತಾದ ಬಜೆಟ್​​ ಪುಸ್ತಕವೊಂದನ್ನು ಸಿದ್ದಪಡಿಸುವುದು ಸವಾಲಿನ ಕೆಲಸವೇ ಆಗಿತ್ತು ಎಂದು ಅಧಿವೇಶನದಲ್ಲಿ ಥಾಮಸ್ ಐಸಾಕ್​​ ಭಾಷಣ ಮಾಡುತ್ತಿದ್ದರು. ಆಗ ಥಾಮಸ್​​ ಐಸಾಕ್​​ ಕೈಯಲ್ಲಿ ಹಿಡಿದಿದ್ದ ಸಿಎಂ ಪಿಣರಾಯಿ ನೇತೃತ್ವದ ಸಿಪಿಎಂ ಸರ್ಕಾರದ ಈ ಬಾರಿಯ ಬಜೆಟ್ ಪುಸ್ತಕ ಮಾತ್ರ ಎಲ್ಲರ ಗಮನ ಸೆಳೆಯಿತು. ಕೇರಳ ಸರ್ಕಾರ 2020-21ನೇ ಬಜೆಟ್​​ ಪುಸ್ತಕದ ಕವರ್​​ ಪೇಜ್​​ ಮೇಲೆ ಗಾಂಧಿಯ ಹತ್ಯೆಯ ಚಿತ್ರ ಮುದ್ರಿಸಲಾಗಿತ್ತು. ಈ ಚಿತ್ರವು ಇತ್ತೀಚೆಗೆ ಗಾಂಧೀಜಿ ವಿರುದ್ಧ ಬಿಜೆಪಿಗರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳ ವಿರುದ್ಧದ ಪ್ರತಿರೋಧದ ಸಂಕೇತವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಅಯವ್ಯಯ​​​​ ಪುಸ್ತಕದ ಕವರ್​​ ಪೇಜ್​ ಮೇಲೆ ಗಾಂಧಿ ಹತ್ಯೆಯ ಚಿತ್ರ ಮುದ್ರಣ ಸೇರಿದಂತೆ ಹಲವು ಕಾರಣಗಳಿಗೆ ಈ ಬಾರಿಯ ಕೇರಳ ಬಜೆಟ್​ ಅಧೀವೇಶನ ಮಹತ್ವ ಪಡೆದುಕೊಂಡಿದೆ. ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುವುದು; ಪೌರತ್ವ ಕಾಯ್ದೆ ವಿರೋಧಿ ನಿರ್ಣಯ ಹೊರಡಿಸುವುದು ಹೀಗೆ ಕೇರಳದಲ್ಲಿನ ಕೆಲವು ಬೆಳವಣಿಗೆಗಳು ರಾಷ್ಟ್ರದ ಗಮನ ಸೆಳೆದಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ಜಾರಿಗೆ ಮುಂದಾದ ಸರ್ಕಾರ

ದೇಶದ ರಾಷ್ಟ್ರಪಿತ ಎಂದೇ ಖ್ಯಾತಿಗಳಿಸಿರುವ ಮಹಾತ್ಮ ಗಾಂಧಿಯವರು 1948 ಜನವರಿ 30ನೇ ತಾರೀಕಿನಂದು ಗೋಡ್ಸೆ ಗುಂಡಿಗೆ ಬಲಿಯಾದರು. ಹಿಂದೂ ಮಹಾಸಭಾ ಸಂಘಟನೆಯವರು ಈಗಲೂ ಗೋಡ್ಸೆಯ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಕೂಡ ಗೋಡ್ಸೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಅವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲೇವಡಿ ಮಾಡಿ ಮಾತನಾಡಿದ್ದರು. ಸಂಘ ಪರಿವಾರಕ್ಕೆ ಸೇರಿದ ಹಲವು ವ್ಯಕ್ತಿಗಳು ಗಾಂಧಿ ವಿರುದ್ಧ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದುಂಟು. ಕೆಲ ಬಲಪಂಥೀಯರ ಈ ಗಾಂಧಿ ವಿರೋಧಿ ಧೋರಣೆಗೆ ದೇಶದ ಪ್ರಗತಿಪರ ಶಕ್ತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಕೇರಳ ಬಜೆಟ್​ನಲ್ಲಿ ಗಾಂಧಿ ಹತ್ಯೆ ದೃಶ್ಯದ ಫೋಟೋವನ್ನು ಬಜೆಟ್ ಮುಖಪುಟದಲ್ಲಿ ಹಾಕಿರುವುದು ಗಮನಾರ್ಹವೆನಿಸಿದೆ.
Youtube Video
First published: February 7, 2020, 2:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories