• Home
  • »
  • News
  • »
  • national-international
  • »
  • Maharishi Valmiki Jayanti: ಯೋಗಿ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ಭರ್ಜರಿ ಸಿದ್ಧತೆ

Maharishi Valmiki Jayanti: ಯೋಗಿ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ಭರ್ಜರಿ ಸಿದ್ಧತೆ

ಉತ್ತರ ಪ್ರದೇಶ

ಉತ್ತರ ಪ್ರದೇಶ

Uttar Pradesh: ಭಗವಾನ್ ಶ್ರೀ ರಾಮನ ಜೀವಿತಾವಧಿಯಲ್ಲಿ ಮೂಲ ರಾಮಾಯಣವನ್ನು ಬರೆದ ಕೀರ್ತಿಗೆ ಭಾಜನರಾದ ವಾಲ್ಮೀಕಿಯವರ ಜನ್ಮದಿನವನ್ನು ಉತ್ತರ ಪ್ರದೇಶದಲ್ಲಿ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ.

  • Share this:

ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರವು ಈ ವರ್ಷ ಮಹರ್ಷಿ ವಾಲ್ಮೀಕಿ ಜಯಂತಿ ಅಕ್ಟೋಬರ್  (October)  9 ಆಚರಣೆಯನ್ನು ಅದ್ಧೂರಿಯಾಗಿ ನಡೆಸಲು ಆಯೋಜಿಸಿದೆ. ಭಗವಾನ್ ಶ್ರೀ ರಾಮನ ಜೀವಿತಾವಧಿಯಲ್ಲಿ ಮೂಲ ರಾಮಾಯಣವನ್ನು ಬರೆದ ಕೀರ್ತಿಗೆ ಭಾಜನರಾದ ವಾಲ್ಮೀಕಿಯವರ ಜನ್ಮದಿನವನ್ನು ಉತ್ತರ ಪ್ರದೇಶದಲ್ಲಿ ವಿಜೃಂಭಣೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ರಾಮಾಯಣದ ನಿರಂತರ ಪಠಣದೊಂದಿಗೆ ಭಗವಾನ್ ಶ್ರೀರಾಮ ಮತ್ತು ಹನುಮಾನ್ ದೇವಾಲಯಗಳಲ್ಲಿ (Temple) ದೀಪಗಳನ್ನು ಬೆಳಗಿಸುವುದರೊಂದಿಗೆ/ದೀಪದಾನ ಮೊದಲಾದ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.


ಉತ್ತರ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆಯಲಿರುವ ವಾಲ್ಮೀಕಿ ಜಯಂತಿ


ಉತ್ತರ ಪ್ರದೇಶದಾದ್ಯಂತ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಯೋಗಿ ಸರಕಾರ ಯೋಜಿಸುತ್ತಿದೆ. ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಅಭಿವದ್ಧಿಉನ್ನತ ಮಟ್ಟದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.


ವಾಲ್ಮೀಕಿ ಜಯಂತಿಗಾಗಿ ಬ್ಲಾಕ್ ಮಟ್ಟದಲ್ಲಿ ಸಿದ್ಧತೆಗಳು


ಇದೇ ಪ್ರಕಾರವಾಗಿ ವಾಲ್ಮೀಕಿ ಜಯಂತಿಗಾಗಿ ಅಭಿವೃದ್ಧಿ ಬ್ಲಾಕ್ ಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಗೋರಖ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಸಿಡಿಒ, ಎಲ್ಲಾ ಎಸ್‌ಡಿಎಮ್‌ಗಳು, ಉಪ ನಿರ್ದೇಶಕ ಬೌದ್ಧ ವಸ್ತುಸಂಗ್ರಹಾಲಯ ಮತ್ತು ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಿದ್ದಾರೆ.


ಇದನ್ನೂ ಓದಿ: ಹೊಸ ಮೊನೊಗ್ರಾಮ್ ಅನ್ನು ಅನಾವರಣಗೊಳಿಸಿದ ನೂತನ ದೊರೆ ಚಾರ್ಲ್ಸ್


ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದಲ್ಲಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯವು ಚಿತ್ರಕೂಟದಲ್ಲಿರುವ ‘ವಾಲ್ಮೀಕಿ ಋಷಿ’ಯ ಆಶ್ರಮವನ್ನು ಇದೀಗ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದೆ.


ನಿರಂತರ ರಾಮಾಯಣ ಪಠಣ ಹಾಗೂ ದೀಪಾಲಂಕಾರ


ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಮೇಶ್ರಮ್ ಅವರು ಎಲ್ಲಾ ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 8, 12 ಅಥವಾ 24 ಗಂಟೆಗಳ ಕಾಲ ನಿರಂತರವಾಗಿ ರಾಮಾಯಣ ಪಠಣ ಮಾಡಲು ಮತ್ತು ದೀಪಗಳನ್ನು ಬೆಳಗಿಸುವಂತೆ ವ್ಯವಸ್ಥೆ ಮಾಡಲಾಗಿದೆ ಮತ್ತು ಮಹರ್ಷಿ ವಾಲ್ಮೀಕಿಗೆ ಸಂಬಂಧಿಸಿದ ಎಲ್ಲಾ ಸ್ಥಳಗಳು ಮತ್ತು ದೇವಾಲಯಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಕ್ಟೋಬರ್ 8 ರಂದು ಸಂಜೆ ಸರ್ಕಾರದಿಂದ ನಾಮನಿರ್ದೇಶನಗೊಂಡ ನೋಡಲ್ ಅಧಿಕಾರಿಯಿಂದ ಸಿದ್ಧತೆಗಳನ್ನು ಪರಿಶೀಲಿಸಲಾಗುತ್ತದೆ.


ಲಕ್ನೋದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್ ಅವರು ವಾಲ್ಮೀಕಿ ಜಯಂತಿಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಾಲ್ಮೀಕಿ ರಾಮಾಯಣ, ರಾಮಚರಿತಮಾನಗಳು, ಸುಂದರಕಾಂಡ, ಹನುಮಾನ್ ಚಾಲೀಸಾದ ಜೊತೆಗೆ ಭಜನೆ/ಕೀರ್ತನೆಗಳನ್ನು (ಭಕ್ತಿಗೀತೆಗಳು) ಭಾನುವಾರ ರಾಜ್ಯ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಮತ್ತು ಆಯ್ದ ದೇವಾಲಯಗಳಲ್ಲಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


ಉತ್ತರ ಪ್ರದೇಶದ ದೇವಾಲಯಗಳಲ್ಲಿ ಕೂಡ ವಾಲ್ಮೀಕಿ ಜಯಂತಿ ಆಚರಣೆ


ಈ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು, ಕಾರ್ಯಕ್ರಮಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಅಲ್ಲಿ ಎಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಎಲ್ಲಾ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ.


ಸಂಸ್ಕೃತಿ ಇಲಾಖೆಯ ಸಮನ್ವಯದಲ್ಲಿ ಪ್ರಮುಖ ದೇವಾಲಯಗಳಾದ ರೈದಾಸ, ಪಂಚಮುಖಿ, ಹನುಮಾನ್ ಸೇತು ಮತ್ತು ಚಂದ್ರಿಕಾ ದೇವಿ ದೇವಾಲಯಗಳಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.


ಇದನ್ನೂ ಓದಿ: ಪುಷ್ಪಾ ನಟಿಗೆ 2ನೇ ಮದ್ವೆಯಂತೆ, ಸಿಎಂ ಯಾತ್ರೆಗೆ ಯತ್ನಾಳ್ ವ್ಯಂಗ್ಯ, ಸಮಂತಾ ಫ್ಯಾನ್ಸ್​​​ ಇಲ್ನೋಡಿ; ಬೆಳಗಿನ ಟಾಪ್ ನ್ಯೂಸ್


ವಾಲ್ಮೀಕಿ ಜಯಂತಿ ಆಚರಣೆ


ಅಶ್ವಿನಿ ಮಾಸದ ಶರದ್ ಪೂರ್ಣಿಮೆಯ ದಿನದಂದು ಮಹರ್ಷಿ ವಾಲ್ಮೀಕಿ ಜನಿಸಿದರು ಎನ್ನುವ ನಂಬಿಕೆಯಿದೆ. ಅವರ ಜನನದ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲದಿದ್ದರೂ, ಪೌರಾಣಿಕ ನಂಬಿಕೆಗಳ ಪ್ರಕಾರ, ಅವರು ವರುಣ ಮತ್ತು ಅವನ ಹೆಂಡತಿ ಚರ್ಷಣಿಯ ಮಗನಾಗಿ ಜನಿಸಿದರು ಎನ್ನಲಾಗುತ್ತದೆ.


ಸಂಸ್ಕೃತದಲ್ಲಿ 24,000 ಶ್ಲೋಕಗಳು, 7 ಖಂಡಗಳು ಮತ್ತು ಅನೇಕ ಶ್ಲೋಕಗಳನ್ನು ವಾಲ್ಮೀಕಿ ಬರೆದಿದ್ದಾರೆ. ಈ ದಿನವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲು ಭಕ್ತಿಗೀತೆಗಳು ಮತ್ತು ಸ್ತೋತ್ರಗಳನ್ನು ಹಾಡಲಾಗುತ್ತದೆ.

First published: