• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Fraud: ಯೂಟ್ಯೂಬ್​ ವಿಡಿಯೋ ಲೈಕ್ ಮಾಡಿ ಹಣಗಳಿಸುವ ಆಫರ್, ವಂಚಕರ ಮಾತು ನಂಬಿ 24 ಲಕ್ಷ ಕಳೆದುಕೊಂಡ ಯುವತಿ!

Fraud: ಯೂಟ್ಯೂಬ್​ ವಿಡಿಯೋ ಲೈಕ್ ಮಾಡಿ ಹಣಗಳಿಸುವ ಆಫರ್, ವಂಚಕರ ಮಾತು ನಂಬಿ 24 ಲಕ್ಷ ಕಳೆದುಕೊಂಡ ಯುವತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಣ ಕಳೆದುಕೊಂಡಿರುವ ಮಹಿಳೆಗೆ ಉದ್ಯೋಗ ನೀಡಿದವರು ಯೂಟ್ಯೂಬ್​ನಲ್ಲಿ ವಿಡಿಯೋಗಳಿಗೆ ಲೈಕ್ ಮಾಡಬೇಕೆಂದು ತಿಳಿಸಿದ್ದಾರೆ. ಅದರಂತೆ ಆಕೆ ಕೆಲಸ ಮಾಡಿದ್ದಾರೆ. ಮೊದಲು ಆಕೆಯ ಕೆಲಸಕ್ಕೆ ಪೂರ್ಣ ಮಾಡಿದ್ದಕ್ಕಾಗಿ 10,275 ರೂಪಾಯಿಗಳನ್ನು ನೀಡಿ, ಯುವತಿಯ ವಿಶ್ವಾಸ ಗಳಿಸಿಕೊಂಡಿದ್ದಾರೆ.

  • News18 Kannada
  • 4-MIN READ
  • Last Updated :
  • Pune, India
  • Share this:

ಪುಣೆ: ಇತ್ತೀಚಿನ ದಿನಗಳಲ್ಲಿ ಅಮಾಯಕ ಜನರನ್ನು ಸಾಮಾಜಿಕ ಜಾಲತಾಣದ (Social Media) ಮೂಲಕ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕೆಲಸ ಹುಡುಕುವವರು, ಸಂಗಾತಿಗಳಿಗಾಗಿ ಮ್ಯಾಟ್ರಿಮೋನಿಯಲ್ಲಿ (Matrimony) ಹುಡುಕಾಟ ಮಾಡುವವರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುವವರನ್ನು ಟಾರ್ಗೆಟ್ (Target) ಮಾಡಿಕೊಂಡು ಕೆಲವು ವಂಚಕರು ಜನರನ್ನು ಮರಳು ಮಾಡಿ ಅವರಿಂದ ಲಕ್ಷಾಂತರ ಹಣವನ್ನು ಪೀಕುತ್ತಿದ್ದಾರೆ. ಸುಲಭದ ಮಾರ್ಗದಲ್ಲಿ ಹಣ ಗಳಿಸುವ ಅಥವಾ ಕಡಿಮೆ ಕೆಲಸದ ಉದ್ಯೋಗಾವಕಾಶಗಳನ್ನು ನೀಡುವುದಾಗಿ ಹೇಳಿ ಅಮಾಯಕರಿಗೆ ಮೋಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ (Maharashtra) ಪುಣೆಯ ಮಹಿಳೆಯೊಬ್ಬರು ಇದೇ ರೀತಿ ವಂಚಕರ (Scamers) ಬಲೆಗೆ ಬಿದ್ದು 24 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಆಕೆಗೆ ಸುಲಭವಾಗಿ ಪಾರ್ಟ್​ಟೈಮ್ ಕೆಲಸ ಮತ್ತು ಯೂಟ್ಯೂಬ್ ವೀಡಿಯೋಗಳನ್ನು ಲೈಕ್ ಮಾಡಿದರೆ ಹೆಚ್ಚುವರಿ ಹಣದ ಭರವಸೆ ನೀಡಿ ವಂಚಿಲಾಗಿದೆ.


ಹಣ ಕಳೆದುಕೊಂಡ ಯುವತಿ ನೇತ್ರ ತಜ್ಞೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪಾರ್ಟ್​ ಟೈಂ ಜಾಬ್​ನಲ್ಲಿ ವರ್ಕ್​ ಫ್ರಮ್​ ಹೋಮ್​ ಆಫರ್​ ಬಗ್ಗೆ ತಿಳಿದ ಯುವತಿ ಈ ಮೋಸದ ಜಾಲಕ್ಕೆ ಬಿದ್ದಿದ್ದಾರೆ. ಉದ್ಯೋಗದ ಬಗ್ಗೆ ಕುತೂಹಲಗೊಂಡ ಯುವತಿ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉದ್ಯೋಗದಾತರ ಬಳಿ ಮಾತನಾಡಿದ್ದಾರೆ. ನಂತರ ಆ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.


ಯುಟ್ಯೂಬ್​ ವಿಡಿಯೋ ಲೈಕ್ ಮಾಡುವ ಕೆಲಸ


ಹಣ ಕಳೆದುಕೊಂಡಿರುವ ಮಹಿಳೆಗೆ ಉದ್ಯೋಗ ನೀಡಿದವರು ಯೂಟ್ಯೂಬ್​ನಲ್ಲಿ ವಿಡಿಯೋಗಳಿಗೆ ಲೈಕ್ ಮಾಡಬೇಕೆಂದು ತಿಳಿಸಿದ್ದಾರೆ. ಅದರಂತೆ ಆಕೆ ಕೆಲಸ ಮಾಡಿದ್ದಾರೆ. ಮೊದಲು ಆಕೆಯ ಕೆಲಸಕ್ಕೆ ಪೂರ್ಣ ಮಾಡಿದ್ದಕ್ಕಾಗಿ 10,275 ರೂಪಾಯಿಗಳನ್ನು ನೀಡಿ, ಯುವತಿಯ ವಿಶ್ವಾಸ ಗಳಿಸಿಕೊಂಡಿದ್ದಾರೆ.


ಇದನ್ನೂ ಓದಿ:  Cyber Crime: ಸೈಬರ್ ವಂಚನೆ ಎಂದರೇನು? ಇದಕ್ಕೆ ಒಳಗಾದವರು ಹೇಗೆ ದೂರು ಸಲ್ಲಿಸೋದು? ಇಲ್ಲಿದೆ ಮಾಹಿತಿ


ಕ್ರಿಪ್ಟೋನಲ್ಲಿ ಹೂಡಿಕೆ ಮಾಡುವಂತೆ ಸಲಹೆ


ಮೊದಲಿಗೆ ಹಣ ನೀಡಿದ ವಂಚಕರು ಮಹಿಳೆಯ ಸಂಪೂರ್ಣ ವಿಶ್ವಾಸ ಗಳಿಸಿಕೊಂಡು ಆಕೆಗೆ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದಕ್ಕೆ ಹೇಳಿದ್ದಾರೆ. ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ದೊರೆಯಲ್ಲಿದೆ ಎಂಬ ಆಸೆ ಹುಟ್ಟಿಸಿದ್ದಾರೆ. ಅವರ ಮಾತನ್ನು ನಂಬಿದ ಸಂತ್ರಸ್ತೆ ಮಾರ್ಚ್ 28 ಮತ್ತು ಏಪ್ರಿಲ್ 22 ರ ನಡುವೆ ಎರಡು ಬ್ಯಾಂಕ್ ಖಾತೆಗಳಿಗೆ 23.83 ಲಕ್ಷ ರೂಪಾಯಿಗಳನ್ನು ಜಮಾ ಮಾಡಿದ್ದಾರೆ.


ಮತ್ತೆ 30 ಲಕ್ಷಕ್ಕೆ ಬೇಡಿಕೆ


ಸ್ವಲ್ಪ ದಿನಗಳ ಬಳಿಕ ಮಹಿಳೆ ತನ್ನ ಹಣವನ್ನು ವಾಪಸ್​ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆ ವಂಚಕರು ನಿಮ್ಮ ಹಣವನ್ನು ಪಡೆಯಬೇಕಾದರೆ 30 ಲಕ್ಷ ಹಣವನ್ನು ಡೆಪಾಸಿಟ್ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆಗ ಸಂತ್ರಸ್ತ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಅಲ್ಲದೆ ಸಂತ್ರಸ್ತೆಗೆ ಮತ್ತೆ ವಂಚಕರನ್ನು ಸಂಪರ್ಕಿಸಲು ಕೂಡ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.




ಇಂಜಿನಿಯರ್​ಗೆ 9 ಲಕ್ಷ ವಂಚನೆ


ವರದಿಗಳ ಪ್ರಕಾರ, ಪುಣೆಯ ಇಂಜಿನಿಯರ್ ಒಬ್ಬ ಇದೇ ರೀತಿ ಪಾರ್ಟ್​ ಟೈಮ್ ಜಾಬ್​ ಆಸೆಯಿಂದ ಮೋಸಕ್ಕೆ ಒಳಗಾಗಿದ್ದರು. ಈ ಹಗರಣದಲ್ಲಿ 9 ಲಕ್ಷ ರೂ ಕಳೆದುಕೊಂಡಿದ್ದರು. ಆತನಿಗೂ ವಂಚಕರು. ವೀಡಿಯೊಗಳಿಗೆ ಪ್ರತಿ ಲೈಕ್‌ಗೆ 50 ರೂಪಾಯಿ ಪಡೆಯಬಹುದು ಎಂದು ಆಮಿಷ ಒಡ್ಡಲಾಗಿತ್ತು. ಅಲ್ಲದೆ ಕ್ರಿಪ್ಟೋದಲ್ಲಿ ಹೋಡಿಕೆ ಮಾಡಿದರೆ ಶೇ.30 ರಷ್ಟು ಪ್ರತಿಶತ ಲಾಭವನ್ನು ಗಳಿಸಬಹುದು ಎಂದು ಹೇಳಿ 8.96 ಲಕ್ಷ ಪಡೆದು ವಂಚಿಸಿದ್ದರು.


ಇದನ್ನೂ ಓದಿ: Mandya News: ಮ್ಯಾಟ್ರಿಮೋನಿಯಲ್ಲಿ ಯುವತಿಗೆ ಗಾಳ, 31 ಲಕ್ಷ ವಂಚಿಸಿದ ಖದೀಮ!


ಇಂತಹ ವಂಚನೆಗೆ ಒಳಗಾಗದಿರಲು ಜಾಗೃತಿ ವಹಿಸಬೇಕಾದ ಪ್ರಮುಖ ಅಂಶಗಳು

top videos


    ಹೂಡಿಕೆ ಮಾಡುವ ಮೊದಲು, ಕಂಪನಿಯ ವಿಶ್ವಾಸಾರ್ಹತೆ ಮತ್ತು ನಿಖರತೆಗಾಗಿ ಇತರ ಮಾಹಿತಿಯನ್ನು ಪರಿಶೀಲಿಸಬೇಕು.
    ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕ್ ವಿವರಗಳನ್ನು ಅಪರಿಚಿತರಿಗೆ ನೀಡಬೇಡಿ.
    ಆನ್‌ಲೈನ್ ಖಾತೆಗಳಿಗೆ ಸ್ಟ್ರಾಂಗ್​ ಪಾಸ್‌ವರ್ಡ್‌ಗಳನ್ನು ಬಳಸಬೇಕು.
    ಬ್ಯಾಂಕ್ ಖಾತೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಯಾವುದೇ ಅವ್ಯವಹಾರ ಕಂಡುಬಂದಲ್ಲಿ ಕೂಡಲೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬೇಕು.
    ಇಂತಹ ವಂಚನೆಗಳ ಬಗ್ಗೆ ಗಮನಕ್ಕೆ ಬಂದರೆ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿ.

    First published: